Advertisement

ಜನರಲ್‌ ಬಿಪಿನ್‌ ರಾವ್‌ ವೃತ್ತ ನಾಮಕರಣ

03:47 PM Jan 28, 2022 | Adarsha |

ಸಾಗರ: ಇಲ್ಲಿನ ಜೆಪಿ ನಗರದಲ್ಲಿ ಬುಧವಾರನೇತಾಜಿ ಸುಭಾಷ್‌ಚಂದ್ರ ಯುವಟ್ರಸ್ಟ್‌ ವತಿಯಿಂದ ಜೆಪಿ ನಗರ ವೃತ್ತಕ್ಕೆಜನರಲ್‌ ಬಿಪಿನ್‌ ರಾವ್‌ ವೃತ್ತ ಎಂದುನಾಮಕರಣಗೊಳಿಸಲಾಗಿದೆ.ಈ ಸಂದರ್ಭದಲ್ಲಿ ಮಾತನಾಡಿದಹಿರಿಯ ಸಾಹಿತಿ ಡಾ|ನಾ.ಡಿಸೋಜಾ, ದೇಶಕಂಡ ಅಪರೂಪದ ಸೇನಾ ಮಹಾದಂಡನಾಯಕ ಜನರಲ್‌ ಬಿಪಿನ್‌ ರಾವತ್‌.ಅವರ ಅಕಾಲಿಕ ಮರಣ ಭಾರತೀಯಸೇನೆಗೆ ತುಂಬಲಾರದ ನಷ್ಟವುಂಟುಮಾಡಿದೆ ಎಂದು ತಿಳಿಸಿದರು.

Advertisement

ಸಾಗರದಂತಹ ಊರಿನಲ್ಲಿ ನಾವು ಸುರಕ್ಷಿತವಾಗಿದ್ದೇವೆ ಎಂದರೆ ಅದಕ್ಕೆದೇಶದ ಗಡಿಯಲ್ಲಿರುವ ಸೈನಿಕರು ಕಾರಣ.ಆದರೆ ನಾವು ಸೈನಿಕರಿಗೆ ಕೊಡಬೇಕಾದ ಗೌರವವನ್ನು ಕೊಡುತ್ತಿದ್ದೇವೆಯೇ ಎಂದುನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ.ನೇತಾಜಿ ಸುಭಾಷ್‌ಚಂದ್ರ ಟ್ರಸ್ಟ್‌ ಸೈನಿಕರಹೆಸರಿನಲ್ಲಿ ಗಿಡ ನೆಟ್ಟು ಪೋಷಿಸುವ ಕೆಲಸಮಾಡಿಕೊಂಡು ಬರುತ್ತಿದೆ.

ಇದೀಗಬಿಪಿನ್‌ ರಾವತ್‌ ಹೆಸರು ವೃತ್ತಕ್ಕೆ ಇರಿಸುವಮೂಲಕ ನಮ್ಮ ಮುಂದಿನ ಪೀಳಿಗೆ ಸಹಅವರನ್ನು ಸ್ಮರಿಸಿಕೊಳ್ಳುವ ಸಾರ್ಥಕ ಕೆಲಸಮಾಡಿಕೊಟ್ಟಿದೆ ಎಂದರು.ಸಾಮಾಜಿಕ ಹೋರಾಟಗಾರ ಶಿವಾನಂದಕುಗ್ವೆ ಮಾತನಾಡಿ, ಸಾಗರದಂತಹ ಸಣ್ಣಪಟ್ಟಣದ ವೃತ್ತಕ್ಕೆ ದೇಶದ ಅಪರೂಪದದಂಡನಾಯಕನ ಹೆಸರು ಇರಿಸುವಮೂಲಕ ಟ್ರಸ್ಟ್‌ ಮಾದರಿ ಕೆಲಸ ಮಾಡಿದೆ.ಬಿಪಿನ್‌ ರಾವತ್‌ ಅವರು ದೇಶಕ್ಕೆ ಸಲ್ಲಿಸಿದಸೇವೆ ಅವಿಸ್ಮರಣೀಯವಾದದ್ದು ಎಂದುಹೇಳಿದರು.

ನಿವೃತ್ತ ಕ್ಯಾಪ್ಟನ್‌ ಬಿ.ಟಿ.ಸೋಮನ್‌ನಾಮಫಲಕ ಅನಾವರಣಗೊಳಿಸಿಮಾತನಾಡಿದರು. ಟ್ರಸ್ಟ್‌ ಅಧ್ಯಕ್ಷ ಸುಭಾಷ್‌ಕೌತಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸೈನಿಕರಕಲ್ಯಾಣ ಟ್ರಸ್ಟ್‌ ಅಧ್ಯಕ್ಷ ರಂಗರಾಜಬಾಳೆಗುಂಡಿ, ನಗರಸಭಾ ಸದಸ್ಯೆ ಸರೋಜಭಂಡಾರಿ, ವಿಷ್ಣು ಹೆಗಡೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next