Advertisement

ಸಾಗರ: ಎಂಡಿಎಫ್ ಹಲ್ಲೆ ಪ್ರಕರಣ; ಕೊನೆಗೂ ಎಫ್‌ಐಆರ್ ದಾಖಲು

06:49 PM Jul 15, 2022 | Team Udayavani |

ಸಾಗರ: ಕಳೆದ ಮೂರು ತಿಂಗಳಿನಿಂದ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದ್ದ ನಗರದ ಪ್ರತಿಷ್ಠಿತ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಸರ್ವ ಸದಸ್ಯರ ಸಭೆಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಠಾಣೆಯಲ್ಲಿ ಒಟ್ಟು 19 ಜನರ ವಿರುದ್ಧ ಎಂಡಿಎಫ್‌ನ ಮಾಜಿ ಉಪಾಧ್ಯಕ್ಷ ಶ್ರೀಪಾದಹೆಗಡೆ ನಿಸರಾಣಿ ದೂರಿಗೆ ಸಂಬಂಧಿಸಿ ಎಫ್‌ಐಆರ್ ಗುರುವಾರ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಾಗಿ ದೂರು ಪಡೆಯಲಾಗಿದೆ.

Advertisement

ದೂರಿನಲ್ಲಿ ಮೂಡಳ್ಳಿ ಹರೀಶ್, ಅರುಣ್ ಕುಗ್ವೆ, ಗಣೇಶ್ ಕುಗ್ವೆ, ಬಿಜೆಪಿ ನಗರ ಅಧ್ಯಕ್ಷ ಗಣೇಶ್ ಪ್ರಸಾದ್, ಮಾಜಿ ತಾಪಂ ಸದಸ್ಯ ದೇವೇಂದ್ರಪ್ಪ ಯಲಕುಂದ್ಲಿ, ಹಾಲಪ್ಪ ಅವರ ಕುಟುಂಬದ ರವಿ ಬಸರಾಣಿ, ವಿನೋದ್‌ರಾಜ್, ಅರುಣ ಸೂರನಗದ್ದೆ, ಸಂತೋಷ ಅಣಲೆಕೊಪ್ಪ, ಸಿರಿವಂತೆ ಗುರು, ಅಮರ ಚಿಪ್ಳಿ, ಕತ್ತಿರಾಜು, ಜಯಂತ ಸೂರನಗದ್ದೆ, ಲೋಹಿತ್ ಪುರದಾಳು, ಮಹೇಶ್ ಮೊಗವೀರ, ಸೂರನಗದ್ದೆ ರವಿ, ಮಂಜ, ಗಿರೀಶ್‌ಗೌಡ ಗುಳೇಹಳ್ಳಿ, ಪ್ರಶಾಂತ ಮುಡುಬ, ವಿನಯ ಪೂಜಾರಿ, ಪರಶು ಗೋಪಾಲಗೌಡ ನಗರ, ಸೂರನಗದ್ದೆ ಶಶಿ, ಜಯಂತ ಸೂರನಗದ್ದೆ, ಪ್ರಶಾಂತ, ಜಂಬಾನಿ ಸಂತೋಷ ಎಂಬುವವರು ಹೆಸರಿಸಿ, ಹಲ್ಲೆ ಮಾಡಿ, ಜೀವ ಭಯ ತಂದೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾರ್ಚ್ 17 ರಂದು ಎಲ್‌ಬಿ ಮತ್ತು ಎಸ್‌ಬಿಎಸ್ ಕಾಲೇಜು ಆವರಣದಲ್ಲಿನ ದೇವರಾಜ ಅರಸು ಸಭಾಂಗಣದಲ್ಲಿ ನಡೆದ ಎಂಡಿಎಫ್ ಸರ್ವಸದಸ್ಯರ ಸಭೆಯಲ್ಲಿ ಸದಸ್ಯರಲ್ಲದವರು ಏಕಾಏಕಿ ಶಾಸಕರ ಚಿತಾವಣೆಯಿಂದ ನುಗ್ಗಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಗೌಡರು, ನನಗೆ ಹಾಗೂ ನನ್ನ ಪತ್ನಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next