Advertisement

ಕೆಎಫ್‌ಡಿ ಲಸಿಕೆಗೆ ಜನಪ್ರತಿನಿಧಿಗಳ ದೌಡು!

12:10 PM Jan 19, 2020 | Naveen |

ಸಾಗರ: ತಾಲೂಕಿನ ತುಮರಿಯಲ್ಲಿ ಶುಕ್ರವಾರ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಂಗನ ಕಾಯಿಲೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶಾಸಕ ಎಚ್‌. ಹಾಲಪ್ಪ ತಾವೇ ಚುಚ್ಚುಮದ್ದು ಪಡೆಯುವ ಮೂಲಕ ಈ ಭಾಗದಲ್ಲಿ ಲಸಿಕೆ ಕುರಿತಾಗಿ ಇರುವ ಅಪನಂಬಿಕೆಗಳನ್ನು ತೊಡೆದುಹಾಕುವ ಪ್ರಯತ್ನ ನಡೆಸಿದರು.

Advertisement

ಇದೇ ವೇಳೆ ಖುದ್ದು ತಾಲೂಕು ಆರೋಗ್ಯಾಧಿಕಾರಿ ಡಾ| ಮುನಿ ವೆಂಕಟರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ| ರಾಜೇಶ್‌ ಸುರಗಿಹಳ್ಳಿ ಅವರಿಗೆ ಲಸಿಕೆ ಹಾಕಿದ್ದು ಕೂಡ ಗಮನಾರ್ಹವಾಗಿತ್ತು. ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ.ಸತ್ಯನಾರಾಯಣ್‌ ಕರೂರು ಕೂಡ ಎರಡನೇ ಸುತ್ತಿನ ಲಸಿಕೆ ತೆಗೆದುಕೊಂಡರು. ಶಾಸಕ ಹಾಲಪ್ಪ ವಿದ್ಯಾರ್ಥಿಗಳಿಗೆ ಕೆಎಫ್‌ಡಿ ಕುರಿತ ಜಾಗೃತಿ ಕರಪತ್ರ ಹಾಗೂ ಡಿಎಂಪಿ ಆಯಿಲ್‌ ವಿತರಣೆ ಮಾಡಿ, ಜನರಲ್ಲಿ ಲಸಿಕೆ ಹಾಕಿಸಿಕೊಳ್ಳುವಂತೆ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಪ್ರಮುಖ ಎಂದು ಮಕ್ಕಳಿಗೆ ಸ್ಫೂರ್ತಿ ತುಂಬಿದರು.

ಕಳೆದ ಡಿಸೆಂಬರ್‌ನಲ್ಲಿ ಕೆಎಫ್‌ಡಿಯ ಶಿವಮೊಗ್ಗ ಘಟಕದ ಕಾರ್ಯಕರ್ತರು ಈ ಭಾಗದಲ್ಲಿ ವ್ಯಾಪಕ ಜಾಗೃತಿಗೆ ಪ್ರಯತ್ನಿಸಿದ್ದರು. ಆದರೆ ಕೇವಲ 20 ನಾಗರಿಕರು ಲಸಿಕೆ ಹಾಕಿಸಿಕೊಂಡಿದ್ದರು. ಆದರೆ ಈ ಭಾಗದ ಶೀಗೇಮಕ್ಕಿಯ ಹೂವಮ್ಮ ಮಂಗನ ಕಾಯಿಲೆಗೆ ಬಲಿಯಾದ ನಂತರ ಚಿತ್ರಣ ಬದಲಾಗಿದೆ.

ಶುಕ್ರವಾರ ಮಾರಲಗೋಡು ಪ್ರದೇಶದಲ್ಲಿ ನಡೆದ ಲಸಿಕೆ ಕಾರ್ಯಕ್ರಮದಲ್ಲಿ 236 ಜನ ಗ್ರಾಮಸ್ಥರಲ್ಲಿ ಶೇ. 95ರಷ್ಟು ಜನ ಲಸಿಕೆ ಹಾಕಿಸಿಕೊಂಡರು. ಪರ ಊರಿನಲ್ಲಿರುವ ಹಾಗೂ ವಿದ್ಯಾರ್ಥಿಗಳು ತರಗತಿಗೆ ಪಾಲ್ಗೊಳ್ಳಬೇಕಾದ ಹಿನ್ನೆಲೆಯಲ್ಲಿ 90 ಜನ ಲಸಿಕೆ ಹಾಕಿಸಿಕೊಳ್ಳುವುದರಿಂದ ತಪ್ಪಿದಂತಾಗಿದೆ. ಆರೋಗ್ಯ ಇಲಾಖೆ ಕೂಡ ಲಸಿಕೆ ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೆಎಫ್‌ಡಿ ವಿಭಾಗದ ಡಾ| ಕಿರಣ್‌ ಕೂಡ ಲಸಿಕೆ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next