ಶಿವಮೊಗ್ಗ: ಪತ್ನಿ ಜೊತೆ ಎದುರು ಮನೆ ಯುವಕ ಮಾತನಾಡಿದ್ದಾನೆ ಎಂಬ ಕಾರಣಕ್ಕೆ ಕೋಪಗೊಂಡ ಪತಿ ಯುವಕನ ಹಾಗೂ ಆತನ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ಬೆಳಲಮಕ್ಕಿ ಎಂಬಲ್ಲಿ ನಡೆದಿದೆ.
ಗಾಯಾಳುಗಳನ್ನು ಮಣಿಪಾಲ ಹಾಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: ಬೆಳಲಮಕ್ಕಿಯ ರವಿ ಕುಮಾರ್ ಅವರ ಪತ್ನಿ ಜೊತೆ ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ನವೀನ್ ಎಂಬಾತ ಮಾತನಾಡಿದ ಎಂಬ ಕಾರಣಕ್ಕೆ ಕೋಪಗೊಂಡ ರವಿಕುಮಾರ್ ಕತ್ತಿ ಹಾಗೂ ರಾಡ್‌ನಿಂದ ನವೀನ್ ಕಾರಿನ ಮೇಲೆ ದಾಳಿ ನಡೆಸಿದ್ದಾನೆ ಇದನ್ನು ಕಂಡ ನವೀನ್ ಮನೆಯಿಂದ ಹೊರ ಬಂದಿದ್ದಾನೆ ಈ ವೇಳೆ ರವಿಕುಮಾರ್ ನವೀನ್ ಮೇಲೆ ರಾಡ್ ನಿಂದ ಹಲ್ಲೆ ನಡೆಸಿದ್ದಾನೆ ಇದನ್ನು ಕಂಡ ನವೀನ್ ಸ್ನೇಹಿತ ಧರೇಶ್ ಜಗಳ ಬಿಡಿಸಲು ಬಂದಿದ್ದಾನೆ ಈ ವೇಳೆ ಕೋಪಗೊಂಡಿದ್ದ ರವಿಕುಮಾರ್ ಧರೇಶ್ ಮೇಲೂ ಹಲ್ಲೆ ನಡೆಸಿದ್ದಾನೆ.
ನವೀನ್ ಗೆ ಗಂಭೀರ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಗಿದೆ ಹಾಗೂ ಧರೇಶ್ ನಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ರವಿ ಕುಮಾರ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Video: ಕ್ರಿಕೆಟ್ ಪಂದ್ಯಾವಳಿ ವೇಳೆ ಎಂಟ್ರಿ ಕೊಟ್ಟ ಗೂಳಿ… ಮುಂದೇನಾಯ್ತು ನೀವೇ ನೋಡಿ