Advertisement
ಇಲ್ಲಿನ ಲಿಮ್ರಾ ಟ್ರಾನ್ಸ್‌ಪೋರ್ಟ್ ಮಾಲಿಕ ಅಣಲೇಕೊಪ್ಪದ ನಿವಾಸಿ ನವಾಬ್ ಜಾನ್ (72) ಮೃತಪಟ್ಟ ವ್ಯಕ್ತಿ. ಮೇ 25 ರಂದು ನವಾಬ್ ಜಾನ್ ತಮ್ಮ ದ್ವಿಚಕ್ರವಾಹನದಲ್ಲಿ ಬದ್ರಿಯಾ ಶಾದಿ ಮಹಲ್‌ನ ಮದುವೆ ಸಮಾರಂಭದಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ವಾಹನ ಸಮೇತ ಚರಂಡಿಗೆ ಬಿದ್ದಿದ್ದಾರೆ. ತಲೆಗೆ ಗಂಭೀರ ಗಾಯಗಳಾಗಿದ್ದ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನವಾಬ್ ಜಾನ್ ಶುಕ್ರವಾರ ಮೃತಪಟ್ಟಿದ್ದಾರೆ. ಈ ಸಂಬಂಧ ಪೇಟೆ ಠಾಣೆಗೆ ಸಯ್ಯದ್ ಸಾಹಿಲ್ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೀನು ಮಾರುಕಟ್ಟೆ ಸಮೀಪದ ಚರಂಡಿ ಮೇಲಿನ ಚಪ್ಪಡಿ ಕಲ್ಲುಗಳನ್ನು ವ್ಯವಸ್ಥಿತವಾಗಿ ಜೋಡಿಸದಿರುವ ಹಿನ್ನೆಲೆಯಲ್ಲಿ ಸಾಕಷ್ಟು ಅಪಾಯ ಸಂಭವಿಸುತ್ತಿದ್ದು, ಅಪಘಾತದಿಂದ ಸಾವು ಸಹ ಸಂಭವಿಸಿದ್ದು, ತಕ್ಷಣ ನಗರಸಭೆ ದುರಸ್ತಿ ಕಾರ‍್ಯ ಮಾಡಬೇಕು ಎಂದು ಸ್ಥಳೀಯರು, ಮೀನು, ಮೊಟ್ಟೆ ವ್ಯಾಪಾರಿಗಳು ಆಗ್ರಹಿಸಿದ್ದಾರೆ. ಚರಂಡಿಯನ್ನು ಮುಚ್ಚದಿರುವ ಹಿನ್ನೆಲೆಯಲ್ಲಿ ವಾಹನ, ಜನರು, ಜಾನುವಾರುಗಳು ಬೀಳುವ ಸಾಧ್ಯತೆ ಇದ್ದು, ಈಗ ಜೀವಹಾನಿ ಆಗಿದೆ. ನಗರಸಭೆ ಆಡಳಿತ ಇಂತಹ ಸಮಸ್ಯೆಗಳನ್ನು ಗಮನಿಸಿ, ಸೂಕ್ತ ದುರಸ್ತಿ ಕಾರ‍್ಯ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ : ಮಹಾರಾಷ್ಟ್ರದಲ್ಲಿ ಬಿ.ಎ.4 ಮತ್ತು ಬಿ.ಎ.5 ಒಮಿಕ್ರಾನ್ ರೂಪಾಂತರಿ ಪತ್ತೆ
Related Articles
Advertisement
ದೇವಸ್ಥಾನದ ಕಾಣಿಕೆ ಡಬ್ಬಿ ಕಳ್ಳತನಸಾಗರ: ತಾಲೂಕಿನ ತೆರವಿನಕೊಪ್ಪದ ಅಕ್ಕನಾಗಮ್ಮ ದೇವಸ್ಥಾನದಲ್ಲಿನ ಕಾಣಿಕೆ ಹುಂಡಿ ಕಳ್ಳತನವಾಗಿದ್ದು, ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ. ದೇವಸ್ಥಾನದ ಆವರಣದಲ್ಲಿ ಶುಕ್ರವಾರ ರಾತ್ರಿ ನಾಯಿಗಳು ಬೊಗಳುವಿಕೆಯ ಶಬ್ದ ಹೆಚ್ಚಾಗಿದ್ದರಿಂದ ಅರ್ಚಕ ಗೋವಿಂದ ಅವರು ಎದ್ದು ಬಂದು ಪರಿಶೀಲಿಸಿದ್ದಾರೆ. ಆಗ ದೇವಸ್ಥಾನದ ಹುಂಡಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಅಂದಾಜು 10 ಸಾವಿರ ರೂ. ಕಳ್ಳತನವಾಗಿರಬಹುದು ಎಂದು ಅರ್ಚಕ ಗೋವಿಂದ ಅವರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.