ನಂಬರ್ 103/1ರ ಸಾರ್ವಜನಿಕ ಕೆರೆ ಪಕ್ಕದಲ್ಲಿ ಕೇವಲ 44 ಅಡಿ
ದೂರದಲ್ಲಿ ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಬೋರ್ ವೆಲ್ ಯಂತ್ರವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ಬುಧವಾರ ನಡೆದಿದೆ.
Advertisement
ಈ ಕೆರೆಯನ್ನು ಅವಲಂಬಿಸಿ ಸ್ಥಳೀಯ ರೈತರು, ಜಾನುವಾರುಗಳು,ವನ್ಯಜೀವಿಗಳು ನೀರಿನಾಶ್ರಯ ಕಂಡುಕೊಂಡಿದ್ದು, ಅಕ್ರಮವಾಗಿ
ಕೆರೆಯಿಂದ ಹತ್ತಿರದಲ್ಲಿಯೇ ಖಾಸಗಿ ವ್ಯಕ್ತಿ ಕೊಳವೆ ಬಾವಿ ತೆಗೆಯುತ್ತಿರುವುದನ್ನು ವಿರೋಧಿಸಿ ಜೋಗ್‌ಫಾಲ್ಸ್‌ನ ಪಶ್ಚಿಮ ಘಟ್ಟಗಳ ಸಂರಕ್ಷಣಾ ಪಡೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿತ್ತು.
ಅಂತರದಲ್ಲಿ ಯಾವುದೇ ಕೊಳವೆ ಬಾವಿ ತೆಗೆಯದಂತೆ ನಿಷೇಧ ಇರುವ ಹಿನ್ನೆಲೆಯಲ್ಲಿ ಸ್ಥಳೀಯ ತಲವಾಟ ಗ್ರಾಪಂ ಆಡಳಿತ ಕ್ರಮ ತೆಗೆದುಕೊಂಡು ಪೊಲೀಸರ ಸಹಾಯದಿಂದ ಬೋರ್ವೆಲ್ ಯಂತ್ರವನ್ನು ಜಪ್ತಿ ಮಾಡಿಸಿದರು. ತಲವಾಟ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುಲಾಬ್ ಷಾ. ಎಂ., ಪಶ್ಚಿಮ ಘಟ್ಟಗಳ ಸಂರಕ್ಷಣಾ ಪಡೆಯ ಶಂಕರ್, ಪೊಲೀಸ್ ಇಲಾಖೆಯ ಮಂಜುನಾಥ್, ನಾಗರಾಜ್ ಇತರರು ಇದ್ದರು.