Advertisement
ದೇಶದ ನದಿಗಳನ್ನು ಜಲಸಾರಿಗೆಯ ಮಾರ್ಗ ಗಳಾಗಿ ಪರಿವರ್ತಿಸಲು ಕೇಂದ್ರ ಸರಕಾರ ಈ ಯೋಜನೆಯನ್ನು ರೂಪಿಸಿದೆ. ಇದರಡಿ ನದಿ, ಬಂದರುಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಾಗರ ಚಟುವಟಿಕೆಗಳಿಗೆ ಸಂಬಂಧಿಸಿದ ಆರ್ಥಿಕತೆ (ಬ್ಲೂ ಎಕಾನಮಿ)ಯನ್ನು ಬಲಪಡಿಸುವ ಉದ್ದೇಶವಿದೆ. ಸಾಗರ ಮಾರ್ಗಗಳ ಭದ್ರತೆ ಹೆಚ್ಚಳವೂ ಸೇರಿದೆ.
ಈ ಅನುದಾನದಲ್ಲಿ ಗುರುಪುರದ 3 ದ್ವೀಪಗಳಲ್ಲಿ 5 ಫ್ಲೋಟಿಂಗ್ ಜೆಟ್ಟಿಗಳು ನಿರ್ಮಾಣವಾಗಲಿವೆ. ಹಂಗಾರಕಟ್ಟೆ ಬಂದರು ಪ್ರದೇಶಕ್ಕೆ ಸ್ವರ್ಣಾ-ಸೀತಾನದಿಯಡಿ ಜಲಮಾರ್ಗ ನಿರ್ಮಾಣವಾಗಲಿದೆ. ಸಣ್ಣ ಹಡಗು, ಬೋಟು, ಬಾರ್ಜ್‌ಗಳು ಸಂಚರಿ ಸಲು ನೆರವಾಗುವಂತೆ ಸಮಾನ ಆಳದಲ್ಲಿ ಡ್ರೆಜ್ಜಿಂಗ್ ನಡೆಯಲಿದೆ. ಅಲ್ಲಲ್ಲಿ ಫ್ಲೋಟಿಂಗ್ ಜೆಟ್ಟಿಗಳು ನಿರ್ಮಾಣವಾಗಲಿವೆ. ವ್ಯಾಪಾರ ವಹಿವಾಟಿನ ಸಲುವಾಗಿ ಹಡಗುಗಳಿಂದ ಸರಕುಗಳನ್ನು ತುಂಬಲು ಮತ್ತು ಇಳಿಸಲು ಕ್ರೇನ್‌ಗಳ ವ್ಯವಸ್ಥೆಯೂ ಇರಲಿದೆ.
Related Articles
Advertisement
ಹಿನ್ನೀರು ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶದ.ಕ., ಉಡುಪಿ ಮತ್ತು ಉ.ಕ. ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಸಾಗರ ಮತ್ತು ನದಿಯ ಮೂಲಕ ಜಲ ಪ್ರವಾಸೋದ್ಯಮ ಇದರಲ್ಲಿ ಪ್ರಮುಖ ವಾದುದು. ಸಾಗರತೀರ ಪ್ರವಾಸೋದ್ಯಮ ಒಂದು ಪ್ರಮುಖ ಆದಾಯ ತರುವ ಕ್ಷೇತ್ರ. ಮಂಗಳೂರು, ಮಲ್ಪೆ, ಗಂಗೊಳ್ಳಿ ಬಂದರು, ದ.ಕ.ದ ನೇತ್ರಾವತಿ, ಫಲ್ಗುಣಿ, ಉಡುಪಿಯ ಸ್ವರ್ಣಾ, ಸೀತಾನದಿ, ಸೌಪರ್ಣಿಕಾ, ಪಂಚಗಂಗಾವಳಿ, ಉತ್ತರ ಕನ್ನಡದ ಕಾಳಿ ನದಿಗಳ ಇಕ್ಕೆಲಗಳ ಹಿನ್ನೀರಿನಲ್ಲಿ ಸುಂದರ ಪ್ರಕೃತಿ ತಾಣಗಳಿವೆ. ಬೋಟು ಹೌಸ್‌ಗಳನ್ನು ಒಳಗೊಂಡ ಪ್ರವಾಸೋದ್ಯಮ ತಾಣಗಳನ್ನಾಗಿ ಅಭಿವೃದ್ಧಿಪಡಿಸಬಹುದು. -ಪ್ರಶಾಂತ್ ಪಾದೆ