Advertisement

ಪಠ್ಯಪುಸ್ತಕದಲ್ಲಿ ಕೇಸರಿಕರಣ ನುಸುಳುತ್ತಿರುವುದು ಅಪಾಯಕಾರಿ: ಎಚ್. ವಿಶ್ವನಾಥ್

01:11 PM May 21, 2022 | Team Udayavani |

ಮೈಸೂರು: ಪಠ್ಯಪುಸ್ತಕ ಪರಿಷ್ಕರಣೆ ರಾಜಕೀಯ ಸಂಘರ್ಷವಲ್ಲ. ನಾವೆಲ್ಲ ಸೇರಿ ಶಿಕ್ಷಣ ಹಾಳು ಮಾಡುತ್ತಿದ್ದೇವೆ. ರೋಹಿತ್ ಚಕ್ರತೀರ್ಥ ಯಾರಪ್ಪ? ಸಂಘ ಪರಿವಾರದ ಕಾರ್ಯಕರ್ತ ಅವರು. ಶಿಕ್ಷಣ ತಜ್ಞರಲ್ಲದವರು ಪಠ್ಯ ಪುಸ್ತಕ ತಯಾರಿಯ ಅಧ್ಯಕ್ಷರಾಗಿರುವುದು ದುರಂತ ಎಂದು ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯಪುಸ್ತಕದಲ್ಲಿ ಕೇಸರಿಕರಣ ನುಸುಳುತ್ತಿರುವುದು ಅಪಾಯಕಾರಿ. ಧರ್ಮದ ಆಧಾರಿತ ಪಠ್ಯ ಯಾವುದೇ ಕಾರಣಕ್ಕೂ ಬೇಡ. ಯಜ್ಞ ಕುಂಡ ಯಾವ ಕಡೆ ಇರಬೇಕು ಎಂದು ಪಠ್ಯ ಬೋಧನೆ ಮಾಡುವುದು ಯಾರಿಗೆ ಬೇಕು? ನಾರಾಯಣ ಗುರು ಸಾಮಾಜಿಕ ಕ್ರಾಂತಿಯ ಹರಿಕಾರ. ಅವರ ಪಠ್ಯ ತೆಗೆಯುವುದು ತಪ್ಪು ಎಂದರು.

ಇದನ್ನೂ ಓದಿ:ರೋಣ: ಧಾರಾಕಾರ ಮಳೆಗೆ ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಬೆಣ್ಣಿಹಳ್ಳ; ಪ್ರವಾಹ ಭೀತಿ

ಹೆಡ್ಗೆವಾರ್ ಯಾರು ಎನ್ನುವುದೇ ನಮಗೆ ಗೊತ್ತಿಲ್ಲ. ಬಾಯಿಗೆ ಬಂದಂಗೆ ಯಾರು ಯಾರ್ಯಾರೋ ಪಾಠ ಸೇರಿಸಿದರೆ ಹೇಗೆ? ಹೆಡ್ಗೆವಾರ್ ಗೂ ಟಿಪ್ಪುಗೆ ಹೋಲಿಕೆ ಮಾಡುತ್ತೀರಾ ನೀವು? ಇದು ಸರಿನಾ? ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಚರಿತೆ ಗೊತ್ತಿಲ್ವಾ? ಹೆಡ್ಗೆವಾರ್ ಏನೂ ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಬ್ರಿಟಿಷರ ಮುಂದೆ ಮಂಡಿಯೂರಿದ್ದು ಯಾರು ವಿಶ್ವನಾಥ್ ಎಂದು ಪ್ರಶ್ನಿಸಿದರು.

ಗುಣಾತ್ಮಕ ಬದಲಾವಣೆ ಆಗುತ್ತಾ? ವಿಜಯೇಂದ್ರ ಮಿನಿಸ್ಟರ್ ಆಗುತ್ತಾರಾ? ಆಗುವುದಾದರೆ ಆಗಲಿ ಬಿಡಿ. ಗುಣಾತ್ಮಕ ವಿಚಾರಕ್ಕೆ ಬದಲಾವಣೆಗಳು ಆಗಬೇಕು. ವಿಜಯೇಂದ್ರ ಮಿನಿಸ್ಟರ್ ಮಾಡಿದರೆ ಗುಣಾತ್ಮಕ ಬದಲಾವಣೆ ಆಗುತ್ತದೆಯೇ ಎಂದು ವಿಶ್ವನಾಥ್ ಪ್ರಶ್ನಿಸಿದರು.

Advertisement

ವಿಶ್ವನಾಥ್ ಗೆ ಸಚಿವ ಸ್ಥಾನ ನೀಡುವಂತೆ ಹೋರಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೋರಾಟ ಮಾಡುತ್ತಿದ್ದಾರೆ. ಆದರೆ ಇವರು ಕೊಡಬೇಕಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next