Advertisement

Bhagava: ಕೇಸರಿ ಎಂದರೆ ಭಗವಂತನ ಬಣ್ಣ : ಖರ್ಗೆ ವಿರುದ್ಧ ರಾಮಭದ್ರಾಚಾರ್ಯ ವಾಗ್ಧಾಳಿ

09:40 PM Nov 12, 2024 | Team Udayavani |

ಲಕ್ನೋ: ಭಗವಾ (ಕೇಸರಿ) ಎಂದರೆ ಭಗವಂತನ ಬಣ್ಣ. ಕೇಸರಿ ಧರಿಸಿದವರೂ ರಾಜಕೀಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಧಾರ್ಮಿಕ ನಾಯಕ ಜಗದ್ಗುರು ರಾಮಭದ್ರಾಚಾರ್ಯ ತಿಳಿಸಿದ್ದಾರೆ.

Advertisement

ಯೋಗಿ ಆದಿತ್ಯನಾಥ್‌ ಉದ್ದೇಶಿಸಿ, ಕೇಸರಿ ತೊಟ್ಟವರು ರಾಜಕೀಯ ನಡೆಸಬೇಕೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ರಾಮಭದ್ರಾಚಾರ್ಯ ವಾಗ್ಧಾಳಿ ನಡೆಸಿದರು.

ಶಿವಾಜಿ ಮಹಾರಾಜ ಭಗವಾ ಧ್ವಜವನ್ನು ಹಾರಿಸಿ ಇಡೀ ದೇಶವನ್ನೇ ಒಗ್ಗೂಡಿಸಿದರು. ಇದೀಗ ಸೂಟು ಬೂಟುಧಾರಿಗಳ ಬದಲಾಗಿ ಭಾರತದಲ್ಲಿ ಕೇಸರಿ ತೊಟ್ಟವರು ರಾಜಕೀಯ ನಡೆಸಬೇಕಾಗಿದೆ ಎಂದರು.

ಯೋಗಿ ಅವರ ಬಟೇಂಗೆ ತೋ ಕಟೇಂಗೆ’ (ಒಂದಾಗಿ ಇರದಿದ್ದರೆ ಛಿದ್ರವಾಗುತ್ತೇವೆ) ಎಂಬ ಹೇಳಿಕೆಗೆ ಅವರು ಸಹಮತ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next