Advertisement

ಬಾಂಗ್ಲಾ ವಿರುದ್ಧ ಭಾರತವೇ ಫೇವರಿಟ್‌

12:30 AM Mar 20, 2019 | Team Udayavani |

ಬಿರಾಟ ನಗರ: ಸ್ಯಾಫ್ ವನಿತಾ ಫ‌ುಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಅಜೇಯ ಮತ್ತು 4 ಬಾರಿಯ ಚಾಂಪಿಯನ್‌ ಭಾರತ ಬುಧವಾರ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಜಯ ಸಾಧಿಸುವ ಫೇವರಿಟ್‌ ತಂಡವಾಗಿದೆ.2010ರ ಉದ್ಘಾಟನ ಆವೃತ್ತಿಯಿಂದ ಹಿಡಿದು ಇಲ್ಲಿಯ ವರೆಗೆ ಭಾರತ ಯಾವುದೇ ಪಂದ್ಯಗಳಲ್ಲಿ ಸೋತಿಲ್ಲ. ಕೂಟದ 4 ಆವೃತ್ತಿಯಲ್ಲೂ ಪ್ರಶಸ್ತಿ ಜಯಿಸಿದೆ.  2016ರ ಆವೃತ್ತಿಯ ಫೈನಲ್‌ನಲ್ಲಿ ಭಾರತದ ವನಿತೆಯರು ಬಾಂಗ್ಲಾ ವನ್ನು 3-1 ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದಿದ್ದರು. ಈಗಾಗಲೇ ಗುಂಪು ಹಂತದ ಪಂದ್ಯಗಳಲ್ಲಿ ಮಾಲ್ಡೀವ್ಸ್‌ (6-0), ಶ್ರೀಲಂಕಾ (5-0) ವಿರುದ್ಧ ಗೆಲುವು ದಾಖಲಿಸಿ ಸೆಮಿಫೈನಲ್‌ ಪ್ರವೇಶಿಸಿರುವ ಭಾರತ ತಂಡದಲ್ಲಿ ಆತ್ಮವಿಶ್ವಾಸ ಹೆಚ್ಚಿದ್ದು, ಸತತ 5ನೇ ಬಾರಿಗೆ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next