ಪುದುಕೋಟ್ಟೈ: ತಮಿಳುನಾಡಿನ ಪುದುಕೋಟ್ಟೈ ಜಿಲ್ಲೆಯಲ್ಲಿ ಸುರಕ್ಷತೆಯ ನಿಯಮಗಳನ್ನು ಪಾಲಿಸದ 100 ಶಾಲಾ ಕಟ್ಟಡಗಳನ್ನು ಕೆಡವಿ ಹಾಕಲು ಜಿಲ್ಲಾಡಳಿತ ಆದೇಶ ನೀಡಿದೆ.
ಡಿ.17ರಂದು ತಿರುನಲ್ವೇಲಿಯಲ್ಲಿ 130 ವರ್ಷ ಹಳೆಯದಾದ ಶಾಲೆಯ ಗೋಡೆ ಕುಸಿದು ಮೂವರು ವಿದ್ಯಾರ್ಥಿಗಳು ಅಸುನೀಗಿದ್ದರು ಮತ್ತು ಇತರ ನಾಲ್ವರಿಗೆ ಗಾಯಗಳಾಗಿದ್ದವು. ಅದಕ್ಕೆ ಪೂರಕವಾದಿ ಪುದುಕೋಟ್ಟೈ ಜಿಲ್ಲಾಡಳಿತ ಸುರಕ್ಷತಾ ನಿಯಗಳನ್ನು ಪಾಲಿಸದ 100 ಶಾಲಾ ಕಟ್ಟಡಗಳನ್ನು ಕೆಡವಿ ಹಾಕಲು ಆದೇಶ ನೀಡಿದೆ.
ತಮಿಳುನಾಡಿನ ಶಾಲಾ ಶಿಕ್ಷಣ ಇಲಾಖೆ 259 ಶಾಲೆಯ ಕಟ್ಟಡಗಳಲ್ಲಿ ಕ್ರಮಬದ್ಧವಾಗಿ ಸುರಕ್ಷತಾ ನಿಯಮ ಪಾಲನೆ ಮಾಡಲಾಗಿಲ್ಲ ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು.
ಇದನ್ನೂ ಓದಿ:30 ವರ್ಷಗಳ ಬಳಿಕ ಗ್ರಾಮದೇವತೆ ಜಾತ್ರೆ
ಈ ಪೈಕಿ 100 ಶಾಲೆಗಳ ಕಟ್ಟಡಗಳನ್ನು ಕೆಡವಿ ಹಾಕುವ ಬಗ್ಗೆ ನಿರ್ಧಾರ ಕೈಗೊಂಡು ಜಿಲ್ಲಾಡಳಿತ ಲೋಕೋಪಯೋಗಿ ಇಲಾಖೆ ಸುರಕ್ಷಿತವಲ್ಲದ ಕಟ್ಟಡಗಳನ್ನು ಕೆಡವಿ ಹಾಕುವಂತೆ ಆದೇಶ ನೀಡಿದೆ.