Advertisement

Safety of Women: ಮೀಟೂ ಪ್ರಕರಣ: 16ಕ್ಕೆ ಫಿಲಂ ಚೇಂಬರ್‌ ಸಭೆ

03:16 AM Sep 07, 2024 | Team Udayavani |

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿನ ಮಹಿಳೆಯರ ಸುರಕ್ಷೆ ಕುರಿತಂತೆ ಸಮಿತಿ ರಚಿಸುವ ಕುರಿತು ಚರ್ಚಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದ್ದು, ಸೆ. 16ರಂದು ಚಿತ್ರರಂಗದ ಪ್ರಮುಖರ ಸಭೆ ಕರೆಯುವ ಸಾಧ್ಯತೆ ಇದೆ.

Advertisement

ಚಿತ್ರ ನಟಿಯರನ್ನು ಕರೆದು ಸೆ.13ರ ಒಳಗೆ ಮಹಿಳೆಯರ ಸುರಕ್ಷೆ ಕುರಿತಾಗಿ ಚರ್ಚಿಸಬೇಕೆಂದು ಮಹಿಳಾ ಆಯೋಗ ಮಂಡಳಿಗೆ ಪತ್ರ ಬರೆದಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಮಂಡಳಿ ಅಧ್ಯಕ್ಷ ಎನ್‌.ಎಂ. ಸುರೇಶ್‌, ಮಂಡಳಿ ಕೂಡ ಚಿತ್ರರಂಗದ ಮಹಿಳೆಯರ ಕುರಿತಾಗಿ ಚರ್ಚೆ ನಡೆಸಲಿದೆ ಎಂದಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ವರದಿ ಮಾಡುವಂತೆ ಹಾಗೂ ಅವರ ಸುರಕ್ಷತೆಗೆ ಯೋಜನೆ ರೂಪಿಸುವಂತೆ ಕೋರಿ ಫಿಲ್ಮ್ ಇಂಡಸ್ಟ್ರಿ ಫಾರ್‌ ರೈಟ್ಸ್‌ ಆ್ಯಂಡ್‌ ಇಕ್ವಾಲಿಟಿ ಸಂಸ್ಥೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಇದರೊಂದಿಗೆ ಚಿತ್ರರಂಗದಲ್ಲಿ ಮತ್ತೆ ಮೀ ಟೂ ಕಾವು ಪಡೆದಿದೆ.

“ಸದ್ಯ ಚಿತ್ರರಂಗದಲ್ಲಿ ಕಿರುಕುಳಕ್ಕೆ ಒಳಗಾದ ಸಾಕಷ್ಟು ಸಂತ್ರಸ್ತೆಯರಿದ್ದಾರೆ. ಆದರೆ ಅವರ್ಯಾರೂ ಮುಂದೆ ಬರಲು ಧೈರ್ಯ ಮಾಡುತ್ತಿಲ್ಲ. ಸದ್ಯ ಸರಕಾರದಿಂದ ಚಿತ್ರರಂಗದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಹಾಗೂ ಅದಕ್ಕೆ ಬೆಂಬಲವಾಗಿ ನಿಲ್ಲಬಲ್ಲ ಸಮಿತಿ ರಚಿಸುವುದನ್ನು ನಾವು ಅಪೇಕ್ಷಿಸುತ್ತೇವೆ. ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.”– ನೀತು ಶೆಟ್ಟಿ, ನಟಿ

Advertisement

Udayavani is now on Telegram. Click here to join our channel and stay updated with the latest news.

Next