Advertisement

ತುರ್ತು ಸಾಲಕ್ಕೆ ಸುರಕ್ಷಿತ ದಾರಿಗಳು

02:12 PM Jul 24, 2020 | mahesh |

ಕೋವಿಡ್ ವಕ್ಕರಿಸಿಕೊಂಡ ನಂತರ ಇಡೀ ಜಗತ್ತಿನ ಆರ್ಥಿಕ ಲೆಕ್ಕಾಚಾರವೇ ಬದಲಾಗಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದು ಭಾರತೀಯರ ಜೀವನದ ಮೇಲೂ ಭರ್ಜರಿ ಹೊಡೆತ ನೀಡಿದೆ. ಅದರಲ್ಲೂ ವೇತನವನ್ನೇ ನಂಬಿ ಬದುಕುತ್ತಿರುವವರ ಪಾಡಂತೂ ಶೋಚನೀಯ. ಇಂತಹ ಹೊತ್ತಿನಲ್ಲಿ ತುರ್ತಾಗಿ ಸಾಲ ಬೇಕಾದರೆ, ಏನು ಮಾಡಬೇಕು? ಎಲ್ಲಿ ಸಾಲ ತೆಗೆದುಕೊಳ್ಳುವುದು? ಅದನ್ನು ನಿಭಾಯಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

Advertisement

ಲಕ್ಷಾಂತರ ಮಂದಿಯ ಉದ್ಯೋಗ ಕಡಿತ
ಕೋವಿಡ್ ಅಪ್ಪಳಿಸಿದ ಮೇಲೆ ದಿನಗಳೆದಂತೆ ಒಂದೊಂದೇ ಕಂಪನಿಗಳು ಮುಲಾಜಿಲ್ಲದೇ ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿವೆ. ಇನ್ನು ಕೆಲವರಿಗೆ ಸಂಬಳ ಕಡಿತ ಮಾಡಿವೆ. ದಿಢೀರ್‌  ಎಂದು ಎದುರಾದ ಈ ಪರಿಸ್ಥಿತಿಗೆ ಇನ್ನೂ ಉದ್ಯೋಗಿಗಳು ಮಾನಸಿಕವಾಗಿ ಸಿದ್ಧವೇ ಆಗಿಲ್ಲ. ಅದೂ ಅಲ್ಲದೇ ಕೆಲಸ ಹೋದರೆ ಇನ್ನೊಂದು ಕೆಲಸ ಹುಡುಕಿಕೊಳ್ಳಲಿಕ್ಕೂ ಸಾಧ್ಯವಿಲ್ಲದ
ಪರಿಸ್ಥಿತಿಯಿದೆ. ಮತ್ತೂಂದು ಆಯ್ಕೆಯೂ ಇಲ್ಲ, ಇರುವ ವೇತನವೂ ಸಾಕಾಗುತ್ತಿಲ್ಲ.

ಎಲ್ಲೆಲ್ಲಿಂದ ಹಣ ಪಡೆಯಬಹುದು?
ನೀವು ನಷ್ಟದಲ್ಲಿರುವಾಗ ಷೇರುಗಳ ಮೇಲಿನ ಹೂಡಿಕೆಯನ್ನು ಹಿಂಪಡೆಯುವುದು ಸೂಕ್ತವಲ್ಲ. ಮೊದಲು ನಿಗದಿತ ಠೇವಣಿಗಳಲ್ಲಿನ ಹೂಡಿಕೆ, ಆನಂತರ ಚಿನ್ನವನ್ನು ಆಧಾರವಾಗಿಟ್ಟುಕೊಂಡು ಹಣ ಪಡೆಯುವ ಬಗ್ಗೆ ಚಿಂತಿಸಬಹುದು. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಹಾಗೂ ನಿಗದಿತ ಠೇವಣಿಗಳ ಮೇಲೆ ಸಾಲ ಪಡೆಯಲೂ ಅವಕಾಶವಿದೆ.

ಸದ್ಯ ಬ್ಯಾಂಕ್‌ಗಳಲ್ಲಿ ಖಾಸಗಿ ಸಾಲ ಬೇಡ
ಸಂಬಳ ಕಡಿತಗೊಂಡಿರುವಾಗ, ಉದ್ಯೋಗ ಕಳೆದುಕೊಂಡಿರುವಾಗ, ಭವಿಷ್ಯದಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಎಂಬ ಭರವಸೆಯಿಲ್ಲದಿರುವಾಗ ಬ್ಯಾಂಕ್‌ಗಳಿಂದ ತುರ್ತು ಸಾಲ ಪಡೆಯುವುದು ಅಪಾಯಕಾರಿ. ಸದ್ಯ ಎದುರಾಗಿರುವ ಯಾವುದೋ ಸಮಸ್ಯೆಯಿಂದ ಪಾರಾಗಲು ಹೋದರೆ, ಇನ್ನೊಂದು ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳ ಬೇಕಾ ಗಬಹುದು. ಆದ್ದರಿಂದ ಸಾಲ ಪಡೆಯುವ ಮುನ್ನ ಅದನ್ನು ತೀರಿಸುವ ಬಗೆಯ ಬಗ್ಗೆ ಖಾತ್ರಿಯಿರಬೇಕು. ತೀರಿಸುವ ಬಗೆಯ ಬಗ್ಗೆ ಖಾತ್ರಿಯಿಲ್ಲದಿದ್ದರೆ ಸಾಲ ಪಡೆಯಲು ಹೋಗಲೇಬೇಡಿ.

ಕ್ರೆಡಿಟ್‌ ಕಾರ್ಡ್‌ಗಳು ಕಡೆಯ ಆಯ್ಕೆ
ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವುದು, ಕ್ರೆಡಿಟ್‌ ಕಾರ್ಡ್‌ ಬಳಸಿ ಸಾಲ ಪಡೆಯುವುದು ಯಾವತ್ತೂ ಕಡೆಯ ಆಯ್ಕೆಯಾಗಿರ ಬೇಕು. ಬಡ್ಡಿ ಗರಿಷ್ಠವಾಗಿರುವುದರಿಂದ ಅನಿವಾರ್ಯ ವಾದರೆ ಮಾತ್ರ ಈ ದಾರಿ ಹಿಡಿಯಬೇಕು. ಇನ್ನು ಬ್ಯಾಂಕ್‌ಗಳು ತಮ್ಮ ಗ್ರಾಹಕರ ಮರುಪಾವತಿ ಇತಿಹಾಸ ಅತ್ಯುತ್ತಮವಾಗಿದ್ದರೆ, ತಾವಾಗಿಯೇ ಕ್ರೆಡಿಟ್‌ ಕಾರ್ಡ್‌ ಸಾಲ ಮಂಜೂರು ಮಾಡುತ್ತವೆ. ಅದನ್ನೂ ಬಳಸಿಕೊಳ್ಳಬಹುದು.

Advertisement

ನಿಮ್ಮ ವೆಚ್ಚವೆಷ್ಟೆಂದು ಖಚಿತಪಡಿಸಿಕೊಳ್ಳಿ
ಸಾಲ ಪಡೆಯುವುದಕ್ಕೂ ಮುನ್ನ ಒಟ್ಟಾರೆ ತಿಂಗಳಲ್ಲಿ ನಿಮ್ಮ ವೆಚ್ಚಗಳು ಎಷ್ಟಿವೆ ಎಂದು ಮೊದಲು ಖಾತ್ರಿ ಮಾಡಿಕೊಳ್ಳಬೇಕು. ಖರ್ಚು ಮಾಡದೇ ಇರಲು ಸಾಧ್ಯವೇ? ಖರ್ಚು ಅನಿ ವಾರ್ಯ ಎಂದಾದರೆ, ಕನಿಷ್ಠ ವೆಚ್ಚವನ್ನು ತಗ್ಗಿಸಬಹುದೇ? ನಿಮ್ಮ ಆರ್ಥಿಕ ದುಸ್ಥಿತಿ ತಾತ್ಕಾ ಲಿಕವೇ? ಭವಿಷ್ಯದಲ್ಲಿ ಸುಧಾರಿಸುವ ಭರವಸೆಯಿದೆಯಾ? ಒಂದು ವೇಳೆ ಸದ್ಯೋ ಭವಿಷ್ಯತ್ತಿನಲ್ಲಿ ನಿಮ್ಮ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳಿಲ್ಲದಿದ್ದರೆ, ನಿಮ್ಮ ಹೂಡಿಕೆಗಳಿಂದಲೇ
ಹಣ ಹಿಂಪಡೆಯುವುದು ಉತ್ತಮ. ಇದೇ ವೇಳೆ ಖರ್ಚನ್ನೂ ತಗ್ಗಿಸಬೇಕು.

ಉದ್ಯೋಗಿಗಳ ಭವಿಷ್ಯ ನಿಧಿಯಲ್ಲೊಂದು ಅವಕಾಶ
ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಮಾಮೂಲಿಯಾಗಿ ಅವರು ನಿವೃತ್ತರಾದ ನಂತರ ಸಿಗುತ್ತದೆ. ಒಂದು ವೇಳೆ ಉದ್ಯೋಗ ಕಳೆದುಕೊಂಡರೆ ಈ ನಿಧಿಯನ್ನು ಪಡೆಯಬಹುದು. ಒಂದು ತಿಂಗಳು ಉದ್ಯೋಗವಿಲ್ಲದಿದ್ದರೆ ಶೇ.75 ರಷ್ಟು, ಎರಡು ತಿಂಗಳು ಉದ್ಯೋಗವಿಲ್ಲದಿದ್ದರೆ ಶೇ.100  ರಷ್ಟು ಹಣವನ್ನು ಮರಳಿ ಪಡೆಯಬಹುದು. ಸದ್ಯ ಕೋವಿಡ್ ಹಿನ್ನೆಲೆಯಲ್ಲಿ, ಉದ್ಯೋಗವಿದ್ದರೂ ಶೇ.75ರಷ್ಟು ಭವಿಷ್ಯ ನಿಧಿಯನ್ನು ಒಂದು ಬಾರಿ ಮುಂಗಡವಾಗಿ ಪಡೆಯಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಇದನ್ನು ಮರುಪಾವತಿ ಮಾಡಬೇಕಾದ ಅಗತ್ಯವಿಲ್ಲ.

ಚಿನ್ನ ಅಡವಿಟ್ಟು ಸಾಲ
ಎಲ್ಲ ಹೂಡಿಕೆಗಳು ಅಪಾಯಕಾರಿಯೆನಿಸಿರುವುದರಿಂದ, ಜನ ಚಿನ್ನ ಕೊಳ್ಳಲು ಮುಂದಾಗಿದ್ದಾರೆ. ಆದ್ದರಿಂದ ಬೆಲೆ ವಿಪರೀತವಾಗಿದೆ. ಹಾಗಾಗಿ ಚಿನ್ನವನ್ನು ಅಡವಿಟ್ಟು ಸಾಲ
ಪಡೆಯುವುದು ಬಹಳ ಸುಲಭ ಮತ್ತು ಸುರಕ್ಷಿತ. ಬ್ಯಾಂಕ್‌ಗಳೂ ಅದಕ್ಕೆ ತಕ್ಕಂತೆ ಹಲವು ಯೋಜನೆಗಳನ್ನು ಬಿಡುಗಡೆ ಮಾಡಿವೆ. ಜೊತೆಗೆ ಚಿನ್ನದ ಬೆಲೆಯೇರಿರುವುದರಿಂದ ಹಿಂದಿಗಿಂತ ಹೆಚ್ಚು ಸಾಲ ಸಿಗುತ್ತದೆ. ಇತರೆ ಸಾಲಗಳಿಗೆ ಹೋಲಿಸಿದರೆ ಈ ಸಾಲಕ್ಕೆ ಬಡ್ಡಿ ಕಡಿಮೆ. ಇನ್ನು ಸಾಲದ ಅವಧಿಯನ್ನು ಮಾತುಕತೆಯ ಮೂಲಕ ನಿರ್ಧರಿಸಬಹುದು.

ಫಿನ್‌ಟೆಕ್‌ ಮೂಲಕ ಸಾಲ!
ಇತ್ತೀಚೆಗೆ ಆನ್‌ಲೈನ್‌ ಮೂಲಕ ಸಾಲ ನೀಡುವ ಆ್ಯಪ್‌ಗ್ಳು, ವೆಬ್‌ಸೈಟ್‌ಗಳು ಇವೆ. ಇದೊಂದು ಉದ್ಯಮವಾಗಿ ಬೆಳೆಯು ತ್ತಿದೆ. ಇಲ್ಲಿ ಎಲ್ಲ ಪ್ರಕ್ರಿಯೆ ಆನ್‌ಲೈನ್‌ ಮೂಲಕವೇ ನಡೆಯುತ್ತದೆ. ಕಿರು ಅವಧಿಯ ಸಾಲಗಳಿಗೆ ಇವನ್ನು ಅವಲಂಬಿಸಬಹುದು. ಅದೂ ನಿಮ್ಮ ಭವಿಷ್ಯದ ಮೇಲೆ ಖಚಿತವಿದ್ದರೆ ಮಾತ್ರ.

Advertisement

Udayavani is now on Telegram. Click here to join our channel and stay updated with the latest news.

Next