Advertisement

Hunsur: ನಾಗರಹೊಳೆ ವಲಯದಲ್ಲಿ ಜು.31ರವರೆಗೆ ಸಫಾರಿ ಬಂದ್

10:14 AM Jul 29, 2023 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನವನದಲ್ಲಿ ಸತತ ಮಳೆಯಿಂದಾಗಿ ಜು.31ರವರೆಗೆ ನಾಗರಹೊಳೆ ವನ್ಯಜೀವಿ ವಲಯಕ್ಕೆ ಸಫಾರಿ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷ ಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.

Advertisement

ಉದ್ಯಾನವನದ ಎಲ್ಲ ವಲಯಗಳಲ್ಲೂ ಉತ್ತಮ ಮಳೆಯಾಗಿದ್ದು, ಬಿರುಗಾಳಿ ಸಹಿತ ಮಳೆಗೆ ನಾಗರಹೊಳೆ ಸಫಾರಿ ಲೈನ್‌ಗಳಲ್ಲಿ ಮರಗಳು ಬಿದ್ದಿರುವುದರಿಂದ ಜೊತೆಗೆ ಮಳೆಯಿಂದಾಗಿ ಸಫಾರಿ ರಸ್ತೆಗಳಲ್ಲಿ ವಾಹನ ಸಂಚಾರ ಮಾಡಲು ಸಾಧ್ಯವಿಲ್ಲ.

ವನ್ಯಧಾಮ ವೀಕ್ಷಣೆಗೆ ಬರುವ ವನ್ಯಪ್ರಿಯರ ಸುರಕ್ಷತೆಯ ಹಿತದೃಷ್ಟಿಯಿಂದ ನಾಗರಹೊಳೆ ವನ್ಯಜೀವಿ ವಲಯದ ನಾಣಚ್ಚಿ ಗೇಟ್ ಹಾಗೂ ವೀರನಹೊಸಹಳ್ಳಿ ಗೇಟ್‌ನಿಂದ ಆರಂಭಗೊಳ್ಳುತ್ತಿದ್ದ ಸಫಾರಿಯನ್ನು  ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ದಮ್ಮನಕಟ್ಟೆಯಲ್ಲಿ ಸಫಾರಿ ಇದೆ:

ಆದರೆ ನಾಗರಹೊಳೆ ಉದ್ಯಾನ ವ್ಯಾಪ್ತಿಯ ದಮ್ಮನಕಟ್ಟೆ(ಕಾಕನಕೋಟೆ) ಸಫಾರಿ ಕೇಂದ್ರವು ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next