Advertisement
ಮೇ 26ರಂದು ಬೆಳಗ್ಗೆ ಕಾಂದಿವಲಿ ಪಶ್ಚಿಮದ ಪೊಯಿಸರ್ ಜಿಮಾVನಾದ ನೇತಾಜಿ ಸುಭಾಶ್ಚಂದ್ರ ಬೋಸ್ ಕ್ರಿಡಾಂಗಣ ಸಾಫಲ್ಯ ಸೇವಾ ಸಂಘವು ಆಯೋಜಿಸಿದ್ದ ಸಾಫಲ್ಯ ಕ್ರೀಡಾ ಸ್ಪರ್ಧೆ-2019ನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆಯನ್ನು ಸ್ಪರ್ಧೆಗಿಂತ ಪ್ರತಿಷ್ಠೆಯಾಗಿ ಸ್ವೀಕರಿಸಬೇಕು. ಸ್ಪರ್ಧೆ, ಪ್ರತಿಭಾನ್ವೇಷಣೆಗೆ ವಯೋಮಿತಿ ತಡೆಯಾಗದು. ಕ್ರೀಡಾಸ್ಫೂರ್ತಿ ಸಮಾಜಕ್ಕೆ ಕೀರ್ತಿ ತರುತ್ತದೆ. ಕ್ರೀಡೆ ಯಾವುದೇ ಆಗಲಿ ಅವರ ಆಯ್ಕೆಯ ಸ್ಪರ್ಧೆಗೆ ನಾವು ಪ್ರೋತ್ಸಾಹ ನೀಡಬೇಕು. ಸಮುದಾಯದ ಸರ್ವೋನ್ನತಿ ಒಬ್ಬರಿಂದ ಅಸಾಧ್ಯ. ಸಾಂಘಿಕವಾಗಿ ಸಮಾಜವನ್ನು ಸಂಘಟಿಸಿ ಮುನ್ನಡೆದಾಗಲೇ ಸಫಲಿಗರಾದ ನಾವು ಎಲ್ಲಾ ಕ್ಷೇತ್ರದಲ್ಲೂ ಸಫಲರಾಗಲು ಸಾಧ್ಯ ಎಂದು ಹೇಳಿದರು.
Related Articles
Advertisement
ಕ್ರೀಡಾ ಸಹ ಸಂಘಟಕರಾದ ಹರ್ಷದ್ ಸಫಲಿಗ, ಸಂಜನಾ ಕುಂಜತ್ತೂರು, ಕವಿತಾ ಬಂಗೇರ ಕ್ರೀಡಾ ಮೇಲ್ವಿಚಾರಕರಾದ ಪಿ. ಬಿ. ಪುತ್ರನ್, ಅಶೋಕ್ ಕುಮಾರ್, ಯೋಗೇಶ್ ಕಾಂಚನ್, ಮಧುಕರ್ ಕರ್ಕೇರ, ವಿಜಯಕುಮಾರ್ ಹೊಸಕಟ್ಟಿ, ಪ್ರಕಾಶ್ ಪುತ್ರನ್ ವಿವಿಧ ಕ್ರೀಡೆಗಳನ್ನು ನಡೆಸಿಕೊಟ್ಟರು. ವಿಶೇಷ ಆಕರ್ಷಣೆಯಾಗಿ ಪುರುಷರಿಗಾಗಿ ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾಟ, ಮಹಿಳೆಯರಿಗಾಗಿ ಥ್ರೋಬಾಲ್ ಮತ್ತು ಬಾಕ್ಸ್ ಕ್ರಿಕೆಟ್ ಸ್ಪರ್ಧೆ, ಎಳೆಯ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಅತ್ಯಾಕರ್ಷಕ ಕ್ರೀಡಾಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬರ್ಡ್‌ಗಿಫ್ಟ್ ಆಯೋಜಿಸಿ ಕೊನೆಯಲ್ಲಿ ಲಕ್ಕಿ ಡ್ರಾ ನಡೆಸಲಾಯಿತು.
ಕು| ಅಶ್ವಿನಿ ಸಫಲಿಗ ಮತ್ತು ಕು| ಕವಿತಾ ಬಂಗೇರ ಪ್ರಾರ್ಥನೆಗೈದರು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಅನುಸೂಯಾ ಕೆಲ್ಲಪುತ್ತಿಗೆ ಸ್ವಾಗತಿಸಿದರು. ಪ್ರತಿಭಾ ಸಫಲಿಗ ಪ್ರಸ್ತಾವನೆಗೈದು ಅತಿಥಿಗಳನ್ನು ಪರಿಚಯಿಸಿದರು. ಸಂಘದ ವಿವಿಧ ಪದಾಧಿಕಾರಿಗಳು ಅತಿಥಿಗಳನ್ನು ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆ ನೀಡಿ ಗೌರವಿಸಿದರು. ಕು| ನಿಶಾ ಕೆಲ್ಲಪುತ್ತಿಗೆ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ಸಫಲಿಗ ಮತ್ತು ದಿಶಾ ಬಂಗೇರ ಕ್ರೀಡಾ ಸಂಯೋಜನೆಗೈದರು. ಸಂಘದ ಗೌರವ ಕೋಶಾಧಿಕಾರಿ ಭಾಸ್ಕರ್ ಸಫಲಿಗ ವಂದಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್