ಅಜಿಲಸೀಮೆಗೆ ಒಳಪಟ್ಟ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ. 19ರಿಂದ 27ರ ವರೆಗೆ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಜರಗಲಿದ್ದು, ಮೊದಲ ದಿನದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
Advertisement
ಸಾಧನೆ ಸುಲಭದ ಮಾತಲ್ಲ. ಕಾಲೆಳೆಯುವ ಕಾಲಘಟ್ಟದಲ್ಲೂ ಶಾಸಕ ಹರೀಶ ಪೂಂಜರು ಸಣ್ಣ ವಯಸ್ಸಿನಲ್ಲೇ ಬಹುದೊಡ್ಡ ಸಾಧನೆ ಮಾಡುತ್ತಿದ್ದಾರೆ. ಎಂದು ಶ್ಲಾ ಸಿದರು. ಪಾಶ್ಚಾತ್ಯ ಸಂಸ್ಕೃತಿಯ ಬೇರೆ ಬೇರೆ ಡೇಗಳನ್ನು ಆಚರಿಸುವ ಬದಲು ನಾಡಿನ ಮಹಾಪುರುಷರ ಜಯಂತಿಗಳನ್ನು, ಪವಿತ್ರ ಹಬ್ಬಗಳನ್ನು ಆಚರಿಸುವ ಪರಿಪಾಠ ಬೆಲೆಯಲಿ ಎಂದರು.
Related Articles
ಉಗ್ರಾಣದ ಉದ್ಘಾಟನೆಯನ್ನು ವೇಣೂರು ಕಮಲಾ ಬಂಗೇರ, ಭಜನ ಕಮ್ಮಟ ಉದ್ಘಾಟನೆಯನ್ನು ಗೌರಮ್ಮ ನರಸಿಂಹ ಭಟ್ ಮತ್ತು ಚಂದ್ರಕುಮಾರಿ, ಸಾಂಸ್ಕೃತಿಕ ಕಾರ್ಯ
ಕ್ರಮವನ್ನು ವಿ. ಪ್ರವೀಣ್ ಕುಮಾರ್ ಇಂದ್ರ, ಅನ್ನಪೂರ್ಣೇಶ್ವರೀ ಭೋಜನ ಮಂಟಪವನ್ನು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಮುಂಡ್ರುಪ್ಪಾಡಿ, ಬ್ರಹ್ಮಕಲಶ ಸೇವಾ ಕಚೇರಿಯನ್ನು ವಸಂತ ಸಾಲ್ಯಾನ್ ಹಾಗೂ ಯಕ್ಷವೇದಿಕೆಯ ಉದ್ಘಾಟನೆ ಯನ್ನು ಮುಜರಾಯಿ ಇಲಾಖೆಯ ಮಾಜಿ ಆಯುಕ್ತ ಶ್ಯಾಮ್ ಭಟ್ ನೆರವೇರಿಸಿದರು.
Advertisement
ಜೀಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುಂದರ ಹೆಗ್ಡೆ ಬಿ.ಇ. ಸ್ವಾಗತಿಸಿದರು. ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿಗುತ್ತು ನಿರೂಪಿಸಿ, ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಜಯಂತ್ ಕೋಟ್ಯಾನ್ ವಂದಿಸಿದರು.
ಆತ್ಮಗೌರವಕ್ಕಾಗಿ ಹೋರಾಡೋಣದುರ್ಗೆ, ಸರಸ್ವತಿಯವರ ಸ್ವರೂಪವಾಗಿ ಸ್ತ್ರೀಯರನ್ನು ಪೂಜಿಸುವ ಸಂಸ್ಕೃತಿ ನಮ್ಮದು. ಆದರೆ ಇಂದು ಲವ್ ಜೆಹಾದ್ ಎಂಬ ಹೆಸರಿನಲ್ಲಿ ನಮ್ಮ ಹೆಣ್ಣು ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ನಮ್ಮ ಹೆಣ್ಣು ಮಕ್ಕಳು ಸದೃಢರಾಗಬೇಕಿದೆ. ರಾಣಿ ಅಬ್ಬಕ್ಕಳಂತೆ ಆತ್ಮಗೌರವಕ್ಕಾಗಿ ಹೋರಾಡಲು ಹಿಂಜರಿಯಬಾರದು ಎಂದು ಸಾಧ್ವಿ ಭಗವತಿ ಸರಸ್ವತೀ ತಿಳಿಸಿದರು.