Advertisement

ಹಿಂದೂ ದಂಪತಿಗಳು ತಲಾ 4 ಮಕ್ಕಳನ್ನು ಹುಟ್ಟಿಸಿ : ಸಾಧ್ವಿ ರಿತಂಬರಾ

09:04 PM Apr 18, 2022 | Team Udayavani |

ಕಾನ್ಪುರ್: ಪ್ರತಿ ಹಿಂದೂ ದಂಪತಿಗಳು ನಾಲ್ಕು ಮಕ್ಕಳನ್ನು ಹುಟ್ಟಿಸಬೇಕು ಮತ್ತು ಅವರಲ್ಲಿ ಇಬ್ಬರನ್ನು ದೇಶಕ್ಕೆ ಅರ್ಪಿಸಬೇಕು ಎಂದು ಹಿಂದುತ್ವದ ನಾಯಕಿ ಸಾಧ್ವಿ ರಿತಂಬರಾ ಅವರು ಒತ್ತಾಯಿಸಿ, ಭಾರತವು ಶೀಘ್ರದಲ್ಲೇ “ಹಿಂದೂ ರಾಷ್ಟ್ರ” ಆಗಲಿದೆ ಎಂದು ಹೇಳಿದ್ದಾರೆ.

Advertisement

ಭಾನುವಾರ ಇಲ್ಲಿನ ನಿರಾಲಾ ನಗರದಲ್ಲಿ ರಾಮ ಮಹೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ದೆಹಲಿಯ ಜಹಾಂಗೀರಪುರಿಯಲ್ಲಿ ಶನಿವಾರ ನಡೆದ ಕೋಮು ಹಿಂಸಾಚಾರವನ್ನು ಉಲ್ಲೇಖಿಸಿದ ಅವರು, ಹನುಮ ಜಯಂತಿ ಶೋಭಾ ಯಾತ್ರೆ ಮೇಲೆ “ದಾಳಿ” ಮಾಡಿದವರು ದೇಶವು ಸಾಧಿಸಿದ ಪ್ರಗತಿಯ ಬಗ್ಗೆ ಅಸೂಯೆ ಹೊಂದಿದ್ದಾರೆ ಎಂದರು.

ರಾಜಕೀಯ ಭಯೋತ್ಪಾದನೆಯ ಮೂಲಕ ಹಿಂದೂ ಸಮಾಜವನ್ನು ಒಡೆಯಲು ಯತ್ನಿಸುತ್ತಿರುವವರನ್ನು ಮಣ್ಣು ಮುಕ್ಕಿಸಲಾಗುತ್ತದೆ ಹಿಂದೂ ಮಹಿಳೆಯರು “ಹಮ್ ದೋ, ಹಮಾರೆ ದೋ” (ಎರಡು ಮಕ್ಕಳನ್ನು ಹೊಂದುವುದು) ತತ್ವವನ್ನು ಅನುಸರಿಸುತ್ತಾರೆ, ಆದರೆ ನಾನು ಎಲ್ಲಾ ಹಿಂದೂ ದಂಪತಿಗಳಿಗೆ ತಲಾ ನಾಲ್ಕು ಮಕ್ಕಳನ್ನು ಹುಟ್ಟುಹಾಕಲು ವಿನಂತಿಸುತ್ತೇನೆ. ಇವರಲ್ಲಿ ಇಬ್ಬರನ್ನು ದೇಶಕ್ಕೆ ಸಮರ್ಪಿಸಬೇಕು, ಉಳಿದ ಎರಡು ಕುಟುಂಬಕ್ಕಾಗಿ” ಎಂದು ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next