ಲಂಡನ್: “ಕಾವೇರಿ ಕೂಗು’ ಸೇರಿ ಹಲವು ಆಂದೋಲನಗಳ ಮೂಲಕ ಪರಿಸರ ಜಾಗೃತಿ ಮೂಡಿಸಿದ್ದ ಸದ್ಗುರು ಜಗ್ಗಿ ವಾಸುದೇವ ಅವರು ಇದೀಗ ಭೂಮಿ ತಾಯಿಗಾಗಿ “ಮಣ್ಣು ರಕ್ಷಿಸೋಣ’ ಆಂದೋಲನ ಆರಂಭಿಸಿದ್ದಾರೆ.
100 ದಿನಗಳ ಕಾಲ ಬೈಕ್‌ನಲ್ಲಿ 27 ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಿ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಸೋಮವಾರ ಲಂಡನ್‌ನ ಟ್ರಫಾಲ್ಗರ್ ಸ್ಕ್ವೇರ್‌ನಲ್ಲಿ ಚಾಲನೆ ನೀಡಲಾಗಿದೆ.
ಆಂದೋ ಲನದ ಭಾಗವಾಗಿ ಏಕಾಂಗಿಯಾಗಿ ಬೈಕ್ ಸಂಚಾರ ಆರಂಭಿಸಿರುವ ಜಗ್ಗಿ ವಾಸುದೇವ ಅವರು ಯುನೈಟೆಡ್ ಕಿಂಗ್‌ಡಮ್, ಯುರೋಪ್, ಮಧ್ಯಪ್ರಾಚ್ಯ ಮಾರ್ಗವಾಗಿ ಸಂಚರಿಸಿ ಭಾರತ ತಲುಪಲಿದ್ದಾರೆ.
ಇದನ್ನೂ ಓದಿ:ನೀಟ್: ಆರ್ಥಿಕ ದುರ್ಬಲ ವರ್ಗಕ್ಕೆ ಶೇ.10 ಮೀಸಲಾತಿ
ಒಟ್ಟು 27 ರಾಷ್ಟ್ರಗಳಿಗೆ ತೆರಳಲಿರುವ ಅವರು ಅಲ್ಲಿನ ಸಮಾಜದ ಗಣ್ಯರು, ರಾಜಕೀಯ ನಾಯಕರು, ವಿಜ್ಞಾನಿಗಳನ್ನು ಭೇಟಿ ಮಾಡಲಿದ್ದಾರೆ. ಅಲ್ಲಿ ಅವರೊಂದಿಗೆ ಮಣ್ಣಿನ ಸಂರಕ್ಷಣೆ ಬಗ್ಗೆ ಚರ್ಚಿಸಲಿದ್ದಾರೆ.