ಚೆನ್ನೈ: ತಮಿಳುನಾಡಿನಲ್ಲಿ ದೇಗುಲ ಆಡಳಿತ ನಿರ್ವಹಣೆ ಅಧಿಕಾರವನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸಿ, ಭಕ್ತರಿಗೆ ಹಸ್ತಾಂತರಿಸಬೇಕು ಎಂದು ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗೀ ವಾಸುದೇವ್ ಒತ್ತಾಯಿಸಿದ್ದಾರೆ.
ಈ ಕುರಿತು 100 ಟ್ವೀಟ್‌ಗಳ ಅಭಿಯಾನ ನಡೆಸಿರುವ ಅವರು, ತಮಿಳುನಾಡು ಸಿಎಂ ಎಡಪ್ಪಾಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಎಂ.ಕೆ. ಸ್ಟಾಲಿನ್, ಸೂಪರ್‌ಸ್ಟಾರ್ ರಜನೀಕಾಂತ್ ಅವರಿಗೆ ಟ್ವೀಟ್‌ಗಳನ್ನು ಟ್ಯಾಗ್ ಮಾಡಿದ್ದಾರೆ.
ಟ್ವೀಟ್ ಗಳಲ್ಲಿ ಏನಿದೆ?: ಮುಖ್ಯವಾಗಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಕೋರ್ಟ್‌ನಲ್ಲಿ ಈ ಹಿಂದೆ ಸಲ್ಲಿಸಿದ್ದ ಅಂಕಿ-ಅಂಶಗಳನ್ನು ಸದ್ಗುರು ಮುಂದಿಟ್ಟಿದ್ದಾರೆ. “ತಮಿಳುನಾಡಿನಲ್ಲಿ 11,999 ದೇಗುಲಗಳು ನಿತ್ಯ ಒಂದೂ ಪೂಜೆ ಇಲ್ಲದೆ ಅಳಿವಿನಂಚಿನಲ್ಲಿವೆ. 34 ಸಾವಿರ ದೇಗುಲಗಳು ವಾರ್ಷಿಕವಾಗಿ 10 ಸಾವಿರ ರೂ. ಆದಾಯವನ್ನೂ ಹೊಂದಿಲ್ಲ. 37 ಸಾವಿರ ದೇಗುಲಗಳಲ್ಲಿ ಪೂಜೆ, ನಿರ್ವಹಣೆ, ಭದ್ರತೆಗಾಗಿ ಒಬ್ಬ ವ್ಯಕ್ತಿಯನ್ನು ನೇಮಿಸಿಕೊಂಡಿವೆ’ ಎಂದು ತಮಿಳಿನಲ್ಲಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ :ಮುಸ್ಲಿಮರನ್ನು ಮತಗಳಾಗಿ ನೋಡುವುದು ಕಾಂಗ್ರೆಸ್‌ನ ಐತಿಹಾಸಿಕ ದುರಭ್ಯಾಸ : HDK
“ಸರ್ಕಾರದ ನಿಯಂತ್ರಣದಲ್ಲಿರುವ ಬಹುತೇಕ ದೇಗುಲಗಳು ಸೂಕ್ತ ನಿರ್ವಹಣೆ ಇಲ್ಲದೆ ದುಃಸ್ಥಿತಿ ತಲುಪಿವೆ. ದೇಗುಲಗಳು ತಮಿಳು ಸಂಸ್ಕೃತಿಯ ಮೂಲ ಸೆಲೆಗಳು. ತಮ್ಮ ಬದುಕಿಗಿಂತ ದೇಗುಲಕ್ಕೆ ಮಹತ್ವ ಕೊಡುವ ಭಕ್ತರಿಗೆ ದೇಗುಲ ನಿರ್ವಹಣೆಯನ್ನು ಸರ್ಕಾರ ಹಸ್ತಾಂತರಿಸಬೇಕು’ ಎಂದು ಒತ್ತಾಯಿಸಿದ್ದಾರೆ.