Advertisement

ಸದಾವತ್ಸಲೇ ಭರತಭೂಮಿ

08:36 PM Aug 14, 2020 | Karthik A |

“ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’

Advertisement

ಅಂದರೆ ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತಲೂ ಮಿಗಿಲು.

ಸಸ್ಯದ ಬೇರು ಭುವಿಯೊಂದಿಗೆ ಭದ್ರವಾಗಿ ಹೇಗೆ ಬಂಧಿಸಲ್ಪಡುತ್ತದೆಯೋ, ಹಾಗೆ ಮಾನವನಿಗೂ ಭೂಮಿ ಅತ್ಯಂತಿಕವಾದದ್ದು.

ಸ್ವಾವಲಂಬಿಯಾಗಿ ಜೀವಿಸಲು ಅವಕಾಶ ಮಾಡಿಕೊಟ್ಟ, ಅತ್ಯಂತ ದೊಡ್ಡ ಲಿಖೀತ ಸಂವಿಧಾನವನ್ನು ಹೊಂದಿರುವ ದಿವ್ಯ-ಭವ್ಯ ದೇಶ ನಮ್ಮದು.
ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧೂ, ಕಾವೇರಿ ಮುಂತಾದ ಪುಣ್ಯತಮ ನದಿಗಳು.

ಕಾಶಿ, ಮಥುರಾ, ಗಯಾ, ಕೇದಾರನಾಥ, ರಾಮೇಶ್ವರ ಇಂತಹ ಅನೇಕಾನೇಕ ತೀರ್ಥಕ್ಷೇತ್ರಗಳು; ಹಿಮಾಲಯ, ಅರಾವಳಿ, ವಿಂಧ್ಯ, ನೀಲಗಿರಿ, ಸಹ್ಯಾದ್ರಿ ಮುಂತಾದ ವನಸಿರಿಗಳಿಂದ ಕಣ್ತುಂಬಿಸುತ್ತಿರುವ ಪರ್ವತ ಶ್ರೇಣಿಗಳು; ಅಸಂಖ್ಯಾಕ ಕೈಗಾರಿಕೋದ್ಯಮಿಗಳು; ರಫೇಲ್‌ ಯುದ್ಧವಿಮಾನ ಸಹಿತವಾದ ಸಶಸ್ತ್ರ ಪಡೆ; ಪ್ರಪಂಚವೇ ಕಾಯಾ-ವಾಚಾ-ಮನಸಾ ಸ್ವೀಕರಿಸಿದ ಯೋಗ ಮತ್ತು ಆಯುರ್ವೇದ ಪದ್ಧತಿಗಳು.

Advertisement

ಜಗತ್ತೇ ತಲೆಯೆತ್ತಿ ನೋಡುವಂತಹ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಕಲೆಗಳು; ವಿಶ್ವವೇ ನಿಬ್ಬೆರಗಾಗಿ ನೋಡುವಂತಹ ಅತ್ಯದ್ಭುತ ಪ್ರತಿಭಾವಂತರು, ದಿವ್ಯ ಜ್ಞಾನಿಗಳಿಂದ ಕೂಡಿದ ಜ್ಞಾನರಥವೇ ಭಾರತ. ಇಂತಹ ಪುಣ್ಯಭೂಮಿಯಲ್ಲಿ ಜನಿಸಿದ ನಾವು ಭಾಗ್ಯವಂತರು ಎನ್ನಲು ಮನ ತುಂಬಿ ಬರುತ್ತದೆ.

ಭವ್ಯ ಭಾರತದ ನಿರ್ಮಾಣಕ್ಕಾಗಿ ಕಂಕಣಬದ್ಧರಾದ ನಮ್ಮ ದೊರೆಗಳು ಅಹೋರಾತ್ರಿಗಳ ಕಾಲ ಅವಿರತವಾಗಿ ಸರ್ವತೋಮುಖ ಬೆಳವಣಿಗೆಗೆ ದುಡಿಯುತ್ತಿರುವುದು, ಶತ್ರುದೇಶಗಳ ನಿದ್ದೆಗೆಡಿಸಿದೆ. ಸಮರಕ್ಕೆ ಮುಂದಾಗಿದ್ದ ಪ್ರಬಲ ರಾಷ್ಟ್ರಗಳು ಕೂಡ ನಮ್ಮ ದೇಶದ ದಿಟ್ಟ ನಿರ್ಧಾರ, ಧೈರ್ಯ, ಛಲಕ್ಕೆ ಬೆಕ್ಕಸಬೆರಗಾಗಿ ಹಿಂದಡಿ ಇಟ್ಟಿರುವುದು ಭಾರತದ ಪ್ರತಿಯೊಬ್ಬನೂ ಸಂತೋಷಪಡುವಂಥ ಸಂಗತಿ. ಇದಕ್ಕೆಲ್ಲ ಕಾರಣರಾದಂಥ‌ ನೇತಾರರನ್ನು ಪಡೆದಿರುವುದು ನಮಗೆ ಸಂತೋಷ, ಸಮಾಧಾನ, ತೃಪ್ತಿ, ನೆಮ್ಮದಿ, ಹೆಮ್ಮೆ ಮತ್ತು ಯಶಸ್ಸಿನ ಸಂಗತಿ.

ಜಿ.ರಮಾ, ಹೊಸಾಕುಳಿ, ಎಸ್‌.ಡಿ.ಎಂ. ಕಾಲೇಜು, ಹೊನ್ನಾವರ

 

Advertisement

Udayavani is now on Telegram. Click here to join our channel and stay updated with the latest news.

Next