ಮರಿಯಮ್ಮನಹಳ್ಳಿ: ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಲು ಒತ್ತಾಯಿಸಿ ದಿನಾಂಕ ನವೆಂಬರ್ 8ರಂದು ಮರಿಯಮ್ಮನಹಳ್ಳಿ ಪಟ್ಟಣ ಬಂದ್ ಮಾಡುವ ಮೂಲಕ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಸಾಹಿತಿ ಉಪನ್ಯಾಸಕ ಎಸ್.ಬಿ. ಚಂದ್ರಶೇಖರ ಹೇಳಿದರು.
ಅವರು ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸದಾಶಿವ ನೇತೃತ್ವದ ಆಯೋಗವು ಸಿದ್ದಪಡಿಸಿದ ವರದಿಯಲ್ಲಿ ಸ್ಪರ್ಶ ಮತ್ತು ಅಸ್ಪೃಶ್ಯ ಸಮುದಾಯಗಳ ಬಗ್ಗೆ
ವೈಜ್ಞಾನಿಕವಾದ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದಾರೆ. ಆದರೆ ಸ್ಪರ್ಶ ಸಮುದಾಯಗಳ ಸಚಿವರು ಶಾಸಕರು ಈ ವರದಿಯ ಅನುಷ್ಠಾನ ಮಾಡಬಾರದೆಂದು ಸರಕಾರಕ್ಕೆ ಮನವಿ ಸಲ್ಲಿಸಿರುತ್ತಾರೆ.
ಮಾದಿಗ ಚಲುವಾದಿ ಸೇರಿದಂತೆ ಅಸ್ಪೃಶ್ಯ ಸಮುದಾಯದವರು ಯಾರೂ ಬೇರೆ ಸಮುದಾಯಗಳ ಹಕ್ಕನ್ನು ಕಸಿದುಕೊಳ್ಳುತ್ತಿಲ್ಲ. ಆದರೆ ಸಾಮಾಜಿಕವಾಗಿ ರಾಜಕೀಯವಾಗಿ ಶೈಕ್ಷಣಿಕವಾಗಿ ನಮಗೆ ಸಿಗಬೇಕಾದ ಪ್ರಾತಿನಿಧ್ಯತೆಗಳ ಬಗ್ಗೆ ನಾವು ಕೇಳುತ್ತಿದ್ದೇವೆ. ಸದಾಶಿವ ಆಯೋಗದ ವರದಿಯಲ್ಲಿ ಅಸ್ಪೃಶ್ಯ ಸಮುದಾಯಗಳ ಬಗ್ಗೆ ನ್ಯಾಯುತವಾದ ಸ್ಥಾನಮಾನಗಳು ದೊರಕಿಸಿಕೊಡುವಂತಹ ನಿರ್ದೇಶನಗಳು ಇದ್ದು ಸರ್ಕಾರ ಕೂಡಲೇ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕಾಗಿದೆ.
ಈ ವರದಿ ಜಾರಿಗೆ ಅನುಷ್ಠಾನಕ್ಕೆ ಒತ್ತಾಯಿಸಿ ಮರಿಯಮ್ಮನಹಳ್ಳಿ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳ ದಲಿತ ಸಂಘಟನೆಗಳು ನವೆಂಬರ್ 8ರಂದು ಮರಿಯಮ್ಮನಹಳ್ಳಿ ಬಂದ್ ಮಾಡುವ ಮೂಲಕ ಪ್ರತಿಭಟನೆ ಮಾಡಲಾಗುವುದು. ಅಂದು ಎಲ್ಲ ಸಂಘಟನೆಗಳ ಹೋರಾಟಗಾರರು ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಮುಂಭಾಗದಿಂದ ನಾರಾಯಣ ದೇವರಕೆರೆ ವೃತ್ತದ ವರೆಗೆ ಜಾಥಾ ನಡಸಿ ಬಹಿರಂಗ ಸಭೆ ನಡೆಸಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾದಾರ ಚೆನ್ನಯ್ಯ ಸೇನಾ ಜಿಲ್ಲಾಧ್ಯಕ್ಷರೂ ನಿವೃತ್ತ ಶಿಕ್ಷಕರೂ ಆದ ಬಿ.ವಿಜಯ್ ಕುಮಾರ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ವಿರೂಪಾಕ್ಷಿ, ಸಮತಾ ಸೆ„ನಿಕದಳದ ಜಿಲ್ಲಾ ಉಪಾಧ್ಯಕ್ಷ ಮೀಸೆ ನಾಗರಾಜ್, ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ಎಲ್.ಮಂಜುನಾಥ, ದಲಿತ ಮುಖಂಡರಾದ ಎಚ್.ಜಾಂಬಮುನಿ, ಎಲ್.ನಾರಾಯಣ, ಪರಶುರಾಮ, ಉಮೇಶ್ ಎಲ್., ಮಹಾದೇವ, ಬಂಗಾರಿ ಕೃಷ್ಣ, ತಿಮ್ಮರಾಜು, ಮೀಸೆ ನಾಗರಾಜ ಸಮತಾ ಸೈನಿಕ ದಳದ ಜಿಲ್ಲಾ ಉಪಾಧ್ಯಕ್ಷರು, ರವಿಕಿರಣ್ ಕರವೇ, ವಿರೂಪಾಕ್ಷಿ ಕದಸಂಸ ಸಂಚಾಲಕ, ಬಿ.ವಿಜಯಕುಮಾರ್ ಜಿಲ್ಲಾಧ್ಯಕ್ಷರು ಕರ್ನಾಟಕ ಮಾದಾರ ಚೆನಗನಯಗಯಸೇನೆ, ಎಚ್. ನಾಗಪ್ಪ, ಜಿಲ್ಲಾ ಉಪಾಧ್ಯಕ್ಷರು ಮಾದಿಗ ಮೀಸಲಾತಿ ಹೋರಾಟ ಸಮಿತಿ ಉಪಾಧ್ಯಕ್ಷರು ವಿಜಯ ನಗರ, ಎಲ್ ಮಂಜುನಾಥ ಜಿಲ್ಲಾ ಕಾರ್ಯದರ್ಶಿ ಕರ್ನಾಟಕ ಮಾದಾರ ಚೆನ್ನಯ್ಯ ಸೇನೆ, ಎಚ್.ಜಾಂಬಮುನಿ ಅಂಬೇಡ್ಕರ್ ಸಂಘದ ತಾಲೂಕು ಸದಸ್ಯ, ಎಲ್.ನಾರಾಯಣ ದಲಿತ ಮುಖಂಡರು, ಪರಶುರಾಮ , ಉಮೇಶ್, ಎಲ್.ಹೆಚ¾ಂಜುನಾಥ ಮಹಾದೇವ ಡಣಾಪುರ, ಬಂಗಾರಿ ಕೃಷ್ಣ, ತಿಮ್ಮರಾಜು, ಎಲ್.ಸೂರ್ಯಪ್ರಕಾಶ್ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.