Advertisement

“ಸದಾಶಿವ ವರದಿ ಜಾರಿಗೆ ತನ್ನಿ’

12:30 PM Oct 14, 2017 | |

ದೇವನಹಳ್ಳಿ: ಮಾದಿಗ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ರಾಜ್ಯ ಮಾದಿಗ ದಂಡೋರ ಉಪಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಆಗ್ರಹಿಸಿದರು.

Advertisement

ನಗರದ ಪ್ರವಾಸಿ ಮಂದಿರ ಆವರಣದಲ್ಲಿ ರಾಜ್ಯ ಮಾದಿಗ ದಂಡೋರ ವತಿಯಿಂದ ಹಮ್ಮಿಕೊಂಡಿರುವ ಬೆಂಗಳೂರಿನ ಬನ್ನಪ್ಪ ಪಾರ್ಕ್‌ನಲ್ಲಿ ನಡೆಯುತ್ತಿರುವ ನ್ಯಾಯ ಮೂರ್ತಿ ಎ.ಜೆ.ಸದಾಶಿವಯ್ಯ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಅನಿರ್ದಿಷ್ಟ ಕಾಲದ ಧರಣಿ ಸತ್ಯಾಗ್ರಹ ಮತ್ತು ಅಹೋರಾತ್ರಿ ಮಾದಿಗ ದಂಡೋರದ ಸಂಕೇತವಾದ ತಮಟೆಗಳ ಘರ್ಜನೆ ಚಳವಳಿಗೆ ಹೋಗುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಎಲ್ಲಾ ಸರ್ಕಾರಗಳು ಮಾದಿಗರಿಗೆ ದ್ರೋಹ: ಜನಸಂಖ್ಯೆ ಆಧಾರಿತವಾಗಿ ಸಿಗಬೇಕಾದ ನ್ಯಾಯ ಕೇಳಲಾಗುತ್ತಿದೆ. ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಕೆಲ ನಾಯಕರು ಮಾದಿಗ ಸಮಾಜದ ಒಗ್ಗಟ್ಟು ಕದಡುವಂತಹ ಪ್ರಯತ್ನದಲ್ಲಿದ್ದಾರೆ. ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳನ್ನು ಸೇರಿಸಿ ಸಂವಿಧಾನದ ಅಡಿಯಲ್ಲಿ ನೀಡಿರುವ ಶೇ.15 ಮೀಸಲಾತಿಯಲ್ಲಿ ಅಸ್ಪೃಶ್ಯಜಾತಿ ಮಾದಿಗ ಮತ್ತು ಹೊಲೆಯ ಹಾಗೂ ಸ್ಪರ್ಶ ಜಾತಿಗಳು ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು, ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಆಶಯ ಎಲ್ಲರೂ ಒಪ್ಪುವಂತಹದ್ದು. ಸಾಮಾಜಿಕ ನ್ಯಾಯದಲ್ಲಿ ಮಾದಿಗ ಸಮಾಜವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕ ಮತ್ತು ರಾಜಕೀಯ ಅವಕಾಶಗಳಲ್ಲಿ ವಂಚನೆ ಮಾಡುತ್ತಾ ರಾಜ್ಯವನ್ನಾಳಿದ ಆಳಿದ ಎಲ್ಲಾ ಸರ್ಕಾರಗಳು ಈ ಸಮಾಜಕ್ಕೆ ದ್ರೋಹ ಮಾಡುತ್ತಾ ಬಂದಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಾತಿ ವರ್ಗೀಕರಣ ಆಗಬೇಕು: ಸದಾಶಿವ ವರದಿ ಆಯೋಗ 2012ರಲ್ಲಿ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದರು. ಮಾಹಿತಿ ಪ್ರಕಾರ ಮಾದಿಗರ ಜನಸಂಖ್ಯೆ ಶೇ. 6, ಛಲವಾದಿ ಶೇ. 5, ಸ್ಪರ್ಶಜಾತಿ ಪರಿಶಿಷ್ಟರು ಶೇ. 3 ಇತರೆ ಶೇ. 1 ಇರುವಂತೆ ವರ್ಗೀಕರಣ ಮಾಡಲು ಮಾದಿಗ ದಂಡೋರ ಒತ್ತಾಯಿಸಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ 101 ಜಾತಿ ಜನಸಂಖ್ಯೆಯಲ್ಲಿ ಮಾದಿಗರೇ ಅಧಿಕವಾಗಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಹೇಳಿದರು.
 
ಸದಾಶಿವ ವರದಿ ಜಾರಿಗೆ ಅಡ್ಡಿ ಸಲ್ಲದು: ಇದೇ ವೇಳೆ ರಾಜ್ಯ ಪ್ರಜಾವಿಮೋಚನಾ ಬಹುಜನ ಸಮಿತಿ ಸಂಸ್ಥಾಪಕ ಅಧ್ಯಕ್ಷ
ಬಿಜ್ಜವಾರ ನಾಗರಾಜ್‌ ಮಾತನಾಡಿ, ಸರ್ಕಾರ ಹಲವಾರು ಸಂದರ್ಭದಲ್ಲಿ ಒಳಜಾತಿ ಮೀಸಲಾತಿ ವರ್ಗೀಕರಣ ಮಾಡುವುದಾಗಿ ಘೋಷಣೆ ಮಾಡಿದ್ದರೂ ಸದನದಲ್ಲಿ ಮಂಡಿ ಸುವ ಸಂದರ್ಭಗಳಲ್ಲಿ ಕೆಲವು ಶಾಸಕರು ಸಾಮಾಜಿಕ ನ್ಯಾಯದ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ ಗೌರವವಿಲ್ಲದೇ ನ್ಯಾಯಾಮೂರ್ತಿ ಸದಾಶಿವ ವರದಿಯನ್ನು ಜಾರಿಗೆ ತರಬಾ ರದೆಂದು ಅಡ್ಡಿ ಪಡಿಸುತ್ತಿ ರುವುದು ಹೇಡಿತನವಾಗಿದೆ ಎಂದರು. 

ಈ ಸಂದರ್ಭದಲ್ಲಿ ಮುಖಂಡ ಡಿ.ಆರ್‌. ಬಾಲರಾಜ್‌, ನಾರಾಯಣಸ್ವಾಮಿ, ಮುದಗುರ್ಕಿ ಮೂರ್ತಿ, ವೆಂಕಟಯ್ಯ, ವೆಂಕಟಗಿರಿಕೋಟೆ ಚಿನ್ನಪ್ಪ, ಬುಳ್ಳಹಳ್ಳಿ ನಾರಾಯಣಸ್ವಾಮಿ, ನೆರಗನಹಳ್ಳಿ ಶಿವಾನಂದ್‌ ಮತ್ತಿತರರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next