Advertisement
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜಿಲ್ಲೆಯ ಐದು ತಾಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಮಾದಿಗ ಸಮುದಾಯದವರು ಮೆರವಣಿಗೆ ಹೊರಟರು. ಭುವನೇಶ್ವರಿ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಸದಾಶಿವ ಆಯೋಗ ವರದಿ ಜಾರಿಗೆ ಅಗ್ರಹಿಸಿದರು. ಬಳಿಕ ಜೋಡಿ ರಸ್ತೆಯ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತಲುಪಿ, ಮುಂಭಾಗ ಧರಣಿ ನಡೆಸಿದರು. ಸ್ಥಳಕ್ಕಾಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿ ದೇವಿ ಅವರಿಗೆ ಮನವಿ ಸಲ್ಲಿಸಿದರು.
Related Articles
Advertisement
ಹೀಗಾಗಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಮಾದಿಗ ಸಮು ದಾಯವರು ಆಯ್ಕೆಯಾಗಲು ಸಾಧ್ಯವಾಗುತ್ತದೆ. ಮೀಸಲಾತಿಯನ್ನು ಸಮರ್ಪಕವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ಹಿರಿಯ ಮುಖಂಡ ಆರ್.ಎಂ. ಕಾಂತರಾಜು, ಮುಖಂಡರಾದ ಅರಕಲವಾಡಿ ನಾಗೇಂದ್ರ, ಪಾಳ್ಯರಾಚಪ್ಪ, ಶಿವಕುಮಾರ್, ರಾಚಪ್ಪ ರಾಮಸಮುದ್ರ, ಮರಪ್ಪ, ಎಂ. ರಾಜು, ದೇಮಹಳ್ಳಿ ನಾಗರಾಜು, ಅಂಕಳ್ಳಿ ಸಿದ್ದಯ್ಯ, ರಾಜೇಶ್‌ವಕೀಲರು, ಚಿನ್ನಸ್ವಾಮಿ, ಬಾಲರಾಜು, ರಂಗಸ್ವಾಮಿ, ಚಾಮರಾಜು, ಬಿ. ಗುರುಸ್ವಾಮಿ ಜೆ. ಜಗದೀಶ್, ಗೋಪಾಲ. ಸೋಮು, ಕಾಮಗೆರೆ ಮದಹೇವ್, ಬೂದಬಾಳು ಮಹದೇವ್, ಕರಿಯನಪುರ ರಾಚಪ್ಪ, ಹಸಗೂಲಿ ಸಿದ್ದಯ್ಯ ಮತ್ತಿತರರು ಭಾಗವಹಿಸಿದ್ದರು. ಬಲಾಡ್ಯರಿಗೆ ಮೀಸಲಾತಿ ಪ್ರಯೋಜನ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ತಳ ಮಟ್ಟದಲ್ಲಿರುವ ಎಲ್ಲರಿಗೂ ಮೀಸಲಾತಿ ಸೌಲಭ್ಯ ದೊರೆಯ ಬೇಕೆಂಬ ಆಶಯ ಹೊಂದಿದ್ದರು.
ಆದರೆ, ಈಗ ಬಲಾಡ್ಯರಿಗೆ ಮಾತ್ರ ಮೀಸಲಾತಿಯ ಪ್ರಯೋಜನ ದೊರಕುತ್ತಿದೆ. ನಿಜವಾದ ಅಸ್ಪೃಶ್ಯ ಜಾತಿಗೆ ಸೇರಿದ ಮಾದಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ತಾರತಮ್ಯವನ್ನು ಸರಿಪಡಿಸಬೇಕು. ನಮ್ಮ ಹೋರಾಟ ನಿರಂತರವಾಗಿರುತ್ತದೆ. ಇಂದು ಜಿಲ್ಲಾ ಮಟ್ಟದಲ್ಲಿ ನಡೆದಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರು ರಾಜಧಾನಿಯಲ್ಲಿ ಪ್ರತಿಭಟನೆ ಮಾಡಲು ಮುಂದಾಗಬೇಕು ಎಂದು ಬಾಬೂ ಜಗಜೀವನರಾಂ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಶಿವಮೂರ್ತಿ ಮನವಿ ಮಾಡಿದರು.