ಭರಮಸಾಗರ (ಚಿತ್ರದುರ್ಗ) : ಸದಾಶಿವ ಆಯೋಗದ ವರದಿಯಲ್ಲಿ ಯಾವುದೇ ಸಮುದಾಯವನ್ನು ಮೀಸಲಾತಿಯಡಿ ಕೈಬಿಡುವ ಅಂಶವೇ ಇಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣ ಸ್ವಾಮಿ ಹೇಳಿದರು.
ಇದನ್ನೂ ಓದಿ:“ಅವರು ಬದಲಾಗಿಲ್ಲ, ನಮಗೆ ಸಾವೇ ಗತಿ’ : ತಾಲಿಬಾನ್ ಆಡಳಿತದ ಕುರಿತು ಹೆಂಗಳೆಯರ ನೋವಿನ ಮಾತು
ಭರಮಸಾಗರ ದ ಬಿಜೆಪಿ ಮಂಡಲ್ ಕಚೇರಿಗೆ ಬೇಟಿ ನೀಡಿದ ಬಳಿಕ ಮಾತನಾಡಿದರು. ಸದಾಶಿವ ಆಯೋಗದ ವರದಿ ಜಾರಿ ನಿಟ್ಟಿನಲ್ಲಿ ವಿಳಂಬವಿಲ್ಲ ಗೊಂದಲವಿದೆ. ಭೋವಿ ಮತ್ತು ಲಂಬಾಣಿ ಸಮುದಾಯಗಳನ್ನು ಮೀಸಲಾತಿಯಡಿ ಕೈ ಬಿಡುತ್ತಾರೆ ಎಂಬ ಚರ್ಚೆಗಳು ಕೇಳಿಬರುತ್ತಿವೆ. ಅನವಶ್ಯಕ ವಾಗಿ ಇಂತಹ ಚರ್ಚೆಗಳನ್ನು ಮಾಡಬಾರದು. ಚರ್ಚೆ ಮಾಡುವವರು ಹುಚ್ಚರು. ಮೀಸಲಾತಿಯಿಂದ ಕೆಲ ಸಮುದಾಯ ಗಳನ್ನು ಕೈ ಬಿಡುವ ಕುರಿತು ನಮಗ್ಯಾರಿಗೂ ಒಲವಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಬೇಕು. ಎಲ್ಲರ ವಿಶ್ವಾಸ ಪಡೆದು ವರದಿ ಜಾರಿಗೆ ಶ್ರಮಿಸಲಾಗುತ್ತದೆ. ಈ ಬಗ್ಗೆ ನನ್ನ ನಿಲುವು ಅಚಲವಾಗಿರುತ್ತದೆ ಎಂದರು.
ಜಿಲ್ಲಾ ಪಂಚಾಯತ ಸದಸ್ಯ ಡಿ.ವಿ.ಶರಣಪ್ಪ, ಬಿಜೆಪಿಯ ಪದಾಧಿಕಾರಿಗಳು, ಮುಖಂಡರು, ನೂರಾರು ಬಿಜೆಪಿ ಕಾರ್ಯಕರ್ತರು ಇದ್ದರು.