Advertisement
ಫರತಾಬಾದ ತಾಲೂಕಿನ ಹಾಗರಗುಂಡಗಿಯಲ್ಲಿ ಮಾ. 8ರಂದು ನಡೆಯುವ ಅಂಬಿಗರ ಚೌಡಯ್ಯ ಮೂರ್ತಿ ಅನಾವರಣ ಕಾರ್ಯಕ್ರಮದ ನಿಮಿತ್ತ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕೋಲಿ ಸಮಾಜದವರು ಆಂತರಿಕ ದ್ವೇಷ ಬದಿಗೊತ್ತಿ ಒಗ್ಗಟ್ಟಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿಶ್ವಮಟ್ಟದಲ್ಲಿ ಸಮಾಜದ ಶಕ್ತಿ ತೋರಿಸಬೇಕು. ಹೀಗಾದಲ್ಲಿ ಕೋಲಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಲು ಅನುಕೂಲ ಆಗುವುದಲ್ಲದೇ, ರಾಜ್ಯದಲ್ಲಿ ಹತ್ತಾರು ಶಾಸಕರು, ಒಂದಿಬ್ಬರು ಸಚಿವರು ಅಧಿಕಾರಕ್ಕೆ ಬರಬಹುದು. ಶೈಕ್ಷಣಿಕ ಮತ್ತು ಉದ್ಯೋಗಿಕ ರಂಗದಲ್ಲಿ ಮೀಸಲಾತಿ ದೊರೆಯಲಿದೆ. ಈ ಮೂಲಕ ಸಮಾಜದ ಶಕ್ತಿ ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸುವ ಶಪಥ ಮಾಡಲಾಗಿದೆ ಎಂದು ಹೇಳಿದರು. ನಾನು ಮತ್ತು ನನ್ನ ಪತ್ನಿ ಕೊನೆ ಉಸಿರಿರುವತನಕ ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸುವುದಕ್ಕಾಗಿಯೇ ಹೋರಾಡುತ್ತೇವೆ ಎಂದು ಪುನರುತ್ಛರಿಸಿದರು.
Advertisement
ಚೌಡಯ್ಯ ಮೂರ್ತಿ ಅನಾವರಣಕ್ಕೆ ಅದ್ಧೂರಿ ಸಿದ್ಧತೆ
06:13 PM Mar 02, 2020 | Naveen |
Advertisement
Udayavani is now on Telegram. Click here to join our channel and stay updated with the latest news.