Advertisement

“ಸದೈವ್‌ ಅಟಲ್‌’ಸ್ಮಾರಕ ಉದ್ಘಾಟನೆ

10:05 AM Dec 26, 2018 | Team Udayavani |

ಹೊಸದಿಲ್ಲಿ:  ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರ 94ನೇ ಜನ್ಮದಿನದಂದೇ ರಾಷ್ಟ್ರೀಯ ಸ್ಮತಿ ಸ್ಥಳದಲ್ಲಿ ಮಂಗಳವಾರ “ಸದೈವ್‌ ಅಟಲ್‌’ ಸ್ಮಾರಕವನ್ನು ಉದ್ಘಾಟಿಸಲಾಯಿತು. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಆಪ್ತ ಸ್ನೇಹಿತ ಎಲ್‌.ಕೆ. ಆಡ್ವಾಣಿ ಸೇರಿ ಅನೇಕ ಗಣ್ಯರು ಪಾಲ್ಗೊಂಡು, ಪುಷ್ಟನಮನ ಸಲ್ಲಿಸಿದರು. ಮಾಜಿ ಪ್ರಧಾನಿ ಡಾ| ಮನಮೋಹನ್‌ ಸಿಂಗ್‌, ವಾಜಪೇಯಿ ಅವರ ಕುಟುಂಬ ಸದಸ್ಯರೂ ಪಾಲ್ಗೊಂಡಿದ್ದರು. ಸ್ಮಾರಕದಲ್ಲಿ ಖ್ಯಾತ ಗಾಯಕ ಪಂಕಜ್‌ ಉದಾಸ್‌ ಅವರು ಭಕ್ತಿಗೀತೆಗಳನ್ನು ಹಾಡುವ ಮೂಲಕ ಅಟಲ್‌ಗೆ ಗೌರವ ಸಲ್ಲಿಸಿದರು. 

Advertisement

25 ಅಡಿ ಎತ್ತರದ ಅಟಲ್‌ ಪ್ರತಿಮೆ: ಸಿಎಂ ಯೋಗಿ
ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ 25 ಅಡಿ ಎತ್ತರದ ಪ್ರತಿಮೆಯನ್ನು ಲಕ್ನೋದ ಲೋಕ ಭವನದ ಆವರಣದಲ್ಲಿ ಸ್ಥಾಪಿಸಲಾಗುವುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಘೋಷಿಸಿದ್ದಾರೆ. ಅಟಲ್‌ರ 94ನೇ ಜನ್ಮದಿನದಂದೇ ಅವರು ಈ ಘೋಷಣೆ ಮಾಡಿದ್ದಾರೆ. ರಾಜ್ಯದ ಜನರ ಒತ್ತಾಸೆಯಂತೆ ಅಟಲ್‌ ಜೀ ಅವರಿಗೆ ವಿಶೇಷ ಗೌರವ ಸಲ್ಲಿಸುವ ಉದ್ದೇಶದಿಂದ ಈ ಪ್ರತಿಮೆ ನಿರ್ಮಿಸಲಾಗುತ್ತಿದೆ ಎಂದಿದ್ದಾರೆ ಆದಿತ್ಯನಾಥ್‌. ಇದಾದ ಬೆನ್ನಲ್ಲೇ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರೂ, ಬಿಹಾರದಲ್ಲಿ ಅಟಲ್‌ ಪ್ರತಿಮೆ ನಿರ್ಮಿಸ ಲಾಗುವುದು ಎಂದಿದ್ದಾರೆ.

ಸ್ಮಾರಕದ ಬಗ್ಗೆ
– 1.5 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಸ್ಮಾರಕ
– ಸ್ಮಾರಕದ 9 ಗೋಡೆಗಳಲ್ಲಿ ಅಟಲ್‌ ಅವರು ಬರೆದಿರುವ ಕವನಗಳನ್ನು ಕೆತ್ತಲಾಗಿದೆ
– 10.51 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣ
– ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ನೇತೃತ್ವದ ಅಟಲ್‌ ಸ್ಮತಿ ನ್ಯಾಸ್‌ ಸೊಸೈಟಿಯಿಂದ ಹಣಕಾಸು ನೆರವು ಮತ್ತು ನಿರ್ವಹಣೆ
– ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ, ಗುಜರಾತ್‌ ರಾಜ್ಯಪಾಲ ಒ.ಪಿ.ಕೊಹ್ಲಿ, ಬಿಹಾರ ರಾಜ್ಯಪಾಲ ಲಾಲ್‌ಜೀ ಟಂಡನ್‌, ಬಿಜೆಪಿ ನಾಯಕರಾದ ವಿಜಯಕುಮಾರ್‌ ಮಲ್ಹೋತ್ರಾ, ರಾಮ್‌ ಲಾಲ್‌ ಮತ್ತಿತರರು ಈ ಸೊಸೈಟಿಯ ಸ್ಥಾಪಕ ಸದಸ್ಯರು.

Advertisement

Udayavani is now on Telegram. Click here to join our channel and stay updated with the latest news.

Next