ಕೆಜಿಎಫ್: ಯುಗಾದಿ ಹಬ್ಬಕ್ಕೆ ಬಂದಾಗ ಸಂಬಂಧಿಕರು ಅವಮಾನ ಹಿನ್ನೆಲೆಯಲ್ಲಿಪ್ರಿಯತಮೆಗೆ ಚಾಕುವಿನಿಂದ ಇರಿದುಕೊಂದು ತಾನೂ ನೇಣಿಗೆ ಶರಣಾಗಿರುವಘಟನೆ ಆಡಂಪಲ್ಲಿಯಲ್ಲಿ ನಡೆದಿದೆ.ಆಡಂಪಲ್ಲಿ ಗ್ರಾಮದ ಮುರುಗೇಶ್(23), ಅದೇ ಗ್ರಾಮದ ಶೈಲಾ (18)ಮೃತಪಟ್ಟ ಪ್ರೇಮಿಗಳು.
ಘಟನೆ ವಿವರ: ಆಡಂಪಲ್ಲಿ ಗ್ರಾಮದಮುರುಗೇಶ್ ಅದೇ ಗ್ರಾಮದ ಶೈಲಾಅವರನ್ನು ಪ್ರೀತಿಸುತ್ತಿದ್ದರು. ಶೈಲಾಅವರಿಗೆ 17 ವರ್ಷವಾಗಿದ್ದಾಗ, ಆಕೆಯಪೋಷಕರು ಠಾಣೆಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ 2019ರ ಡಿಸೆಂಬರ್‌ತಿಂಗಳಿನಲ್ಲಿ ಯುವಕನನ್ನು ಬೇತಮಂಗಲಪೊಲೀಸರು ಪೋಕೊÕ ಕಾಯಿದೆಯಡಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈ ವೇಳೆಎರಡೂ ಮನೆಯವರೊಂದಿಗೆ ಜಗಳನಡೆದಿತ್ತು ಎಂದು ತಿಳಿದು ಬಂದಿದೆ.ನಂತರ ಜುಲೈ 2020ರಂದು ಜೈಲಿನಿಂದಬಿಡುಗಡೆಯಾದ ಯುವಕ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದನು. ಅಲ್ಲದೇ,ಬಂಗಾರಪೇಟೆಯಲ್ಲಿಯೂ ಕೆಲಸಮಾಡಿದ್ದನು.
ನಂತರ ಆಂಧ್ರದ ಚಿತ್ತೂರಿಗೆ ಹೋಗಿ ಅಲ್ಲಿಯೂ ಪ್ರಿಯತಮೆಯೊಂದಿಗೆ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸಮಾಡಿಕೊಂಡು ಇದ್ದನು. ನೆಂಟರಿಷ್ಟರು,ಸಂಬಂಧಿಕರು ಈ ಹಿಂದೆ ನಡೆದ ಘಟನೆಯನ್ನು ಮರೆತು ತಮ್ಮಿಬ್ಬರನ್ನೂಮನೆಗೆ ಸೇರಿಸುತ್ತಾರೆಂದು ಮುರುಗೇಶ್ ತಿಳಿದಿದ್ದನು. ಈ ಕುರಿತು ಆಪ್ತರಿಗೆ ಮಾಹಿತಿಯನ್ನೂ ನೀಡಿದ್ದನು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಇಲಕ್ಕಿಯಾ ಕರುಣಾಕರನ್, ಡಿವೈಎಸ್ಪಿಬಿ.ಕೆ. ಉಮೇಶ್ ಸ್ಥಳಕ್ಕೆ ಭೇಟಿ ನೀಡಿಪರಿಶೀಲನೆ ನಡೆಸಿದರು. ಈ ಸಂಬಂಧಮೃತ ಶೈಲಾಳ ಅಜ್ಜಿ ವೆಂಕಟಮ್ಮ ದೂರುನೀಡಿದ್ದಾರೆ. ಬೇತಮಂಗಲ ಪೊಲೀಸರುಪ್ರಕರಣ ದಾಖಲಿಸಿ ತನಿಖೆಕೈಗೊಂಡಿದ್ದಾರೆ.
ಯುಗಾದಿಗೆ ಮನೆಗೆ ಬಂದಿದ್ದ
ಯುಗಾದಿ ಹಬ್ಬಕ್ಕೆ ಮನೆಗೆ ನೆಂಟರಿಷ್ಟರು,ಸಂಬಂಧಿಕರು ಬಂದಿರುತ್ತಾರೆಂದುಪ್ರಿಯತಮೆಯೊಂದಿಗೆ ಬಂದಿದ್ದ ಮುರುಗೇಶ್‌ನೊಂದಿಗೆ ಸಂಬಂಧಿಕರು ಜಗಳ ಮಾಡಿದ್ದರು.ಅಲ್ಲದೇ, ಎರಡೂ ಮನೆಯವರು ಮನೆಯೊಳಗೆಇಬ್ಬರನ್ನೂ ಸೇರಿಸಲು ನಿರಾಕರಿಸಿದರು. ಇದರಿಂದಬೇಸರಗೊಂಡ ಮುರುಗೇಶ್, ಶೈಲಾಳನ್ನುಚಾಕುವಿನಿಂದ ಇರಿದು ಕೊಂದು ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈಹಿಂದೆ ಕೂಡ ಮುರುಗೇಶ್ ಬೇಸರಕ್ಕೊಳಗಾಗಿಚಾಕುವಿನಿಂದ ತನ್ನ ಕೈಯನ್ನು ತಿವಿದುಕೊಂಡುಆಸ್ಪತ್ರೆಗೆ ದಾಖಲಾಗಿದ್ದನು. ಏ.1ರಂದು ಗ್ರಾಮಕ್ಕೆಆಗಮಿಸಿ ಮನೆಯವರ ಜತೆ ಜಗಳವಾಡಿದ್ದನು.