Advertisement

ಭಾರತ ಕ್ರಿಕೆಟ್‌ ನಲ್ಲಿ ತೆಂಡುಲ್ಕರ್‌ ಗೆ ಮುಖ್ಯ ಸ್ಥಾನ?: ಗಂಗೂಲಿ ಸುಳಿವು

09:04 AM Dec 18, 2021 | Team Udayavani |

ನವದೆಹಲಿ: ಕ್ರಿಕೆಟ್‌ ಜಗತ್ತಿನಲ್ಲಿ ದೇವರು ಎಂದೇ ಕರೆಸಿಕೊಂಡಿರುವ ಸಚಿನ್‌ ತೆಂಡುಲ್ಕರ್‌ ತಮ್ಮ ನಿವೃತ್ತಿಯ ನಂತರ ಬಿಸಿಸಿಐ ವ್ಯಾಪ್ತಿಯಲ್ಲಿ ಯಾವುದೇ ಜವಾಬ್ದಾರಿ ಹೊಂದಿಲ್ಲ. ಅರ್ಥಾತ್‌ ಅವರು ಭಾರತ ಕ್ರಿಕೆಟ್‌ ಬೆಳವಣಿಗೆಯಲ್ಲಿ ಸದ್ಯದ ಮಟ್ಟಿಗೆ ಯಾವುದೇ ಸಕ್ರಿಯ ಪಾತ್ರ ಹೊಂದಿಲ್ಲ. ಇದೀಗ ಅವರು ಮಹತ್ವದ ಸ್ಥಾನವೊಂದನ್ನು ಪಡೆಯುವ ಸಾಧ್ಯತೆಯಿದೆ. ಇದನ್ನು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿಯೇ ಖಚಿತಪಡಿಸಿದ್ದಾರೆ.

Advertisement

“ಸಚಿನ್‌ ತೆಂಡುಲ್ಕರ್‌ ಈ ರೀತಿಯ ಜವಾಬ್ದಾರಿಗಳಲ್ಲೆಲ್ಲ ಆಸಕ್ತಿ ಹೊಂದಿಲ್ಲ. ಆದರೆ ಒಂದಲ್ಲ ಒಂದು ರೀತಿಯಲ್ಲಿ ಅವರು ಭಾರತೀಯ ಕ್ರಿಕೆಟ್‌ನಲ್ಲಿ ಪಾಲ್ಗೊಂಡೇ ಪಾಲ್ಗೊಳ್ಳುತ್ತಾರೆ. ಅದು ಹೇಗೆ? ಯಾವ ರೀತಿ ಎಂದು ಕಾದು ನೋಡಬೇಕು. ಸದ್ಯ ಯಾವುದೇ ವಿಷಯ ತೆಗೆದರೂ ಸ್ವಹಿತಾಸಕ್ತಿ ಎಂಬ ಪದ ಉದ್ಭವಿಸುತ್ತಿದೆ. ಬಹುತೇಕ ಅನಗತ್ಯವಾಗಿ ಈ ವಿವಾದವನ್ನು ಹುಟ್ಟು ಹಾಕುತ್ತಾರೆ. ಹೀಗಿರುವಾಗ ಕ್ರಿಕೆಟ್‌ ಕಂಡ ಶ್ರೇಷ್ಠ ಪ್ರತಿಭೆಯನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವುದಕ್ಕೆ ಸೂಕ್ತ ದಾರಿ ಹುಡುಕಬೇಕಿದೆ’ ಎಂದು ಗಂಗೂಲಿ ಹೇಳಿದ್ದಾರೆ. ಅವರು ಟೀವಿ ಕಾರ್ಯಕ್ರಮದಲ್ಲಿ ಮಾತನಾಡುವಾಗ ಈ ಮಾಹಿತಿ ನೀಡಿದರು.

ಇದನ್ನೂ ಓದಿ:ಆಸೀಸ್‌ ಕಿರಿಯರ ವಿಶ್ವಕಪ್‌ ತಂಡದಲ್ಲಿ ತಮಿಳುನಾಡಿನ ಎನ್‌. ರಾಧಾಕೃಷ್ಣನ್‌

ಒಂದು ವೇಳೆ ತೆಂಡುಲ್ಕರ್‌ ಭಾರತ ಕ್ರಿಕೆಟ್‌ ಪ್ರವೇಶಿಸಿದರೆ, ಅದು ದೊಡ್ಡ ಸುದ್ದಿಯಾಗಲಿದೆ. ಜೊತೆಗೆ ಗಂಗೂಲಿ ಭಾರತ ತಂಡದಲ್ಲಿ ಆಡುತ್ತಿದ್ದಾಗ ಅವರ ಒಡನಾಡಿಗಳಾಗಿದ್ದವರೆಲ್ಲ ಬಿಸಿಸಿಐ ವ್ಯಾಪ್ತಿಯನ್ನು ಪ್ರವೇಶಿಸಿದಂತಾಗುತ್ತದೆ. ಈಗಾಗಲೇ ರಾಹುಲ್‌ ದ್ರಾವಿಡ್‌ ಭಾರತ ಕ್ರಿಕೆಟ್‌ ತಂಡ ಮುಖ್ಯ ಕೋಚ್‌ ಆಗಿದ್ದಾರೆ. ವಿವಿಎಸ್‌ ಲಕ್ಷ್ಮಣ್‌ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ ಜವಾಬ್ದಾರಿ ಹೊತ್ತು ಕೊಂಡಿದ್ದಾರೆ. ಇನ್ನು ಕುಂಬ್ಳೆ ಹಿಂದೊಮ್ಮೆ ಗಂಗೂಲಿ ಸಲಹಾ ಸಮಿತಿಯ ಶಿಫಾರಸಿನ ಮೇರೆಗೆ ಭಾರತ ಕ್ರಿಕೆಟ್‌ ಕೋಚ್‌ ಆಗಿದ್ದರು

Advertisement

Udayavani is now on Telegram. Click here to join our channel and stay updated with the latest news.

Next