Advertisement
“ನಾನು ಕಂಡ ಬ್ಯಾಟ್ಸ್‌ಮನ್‌ಗಳ ಪೈಕಿ ಸಚಿನ್ ತೆಂಡುಲ್ಕರ್ ತಾಂತ್ರಿಕವಾಗಿ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರನ್ನು ಔಟ್ ಮಾಡುವುದು ತುಂಬಾ ಕಷ್ಟ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದ ಕಾಲದಲ್ಲಿ ಸಚಿನ್ ಅವರನ್ನು ಔಟ್ ಮಾಡಲು ಬೌಲರ್‌ಗಳು ಹರಸಾಹಸ ಪಡುತ್ತಿದ್ದರು. ಅವರಂಥ ಪರಿಪೂರ್ಣ ಬ್ಯಾಟ್ಸ್‌ಮನ್ ಮತ್ತೂಬ್ಬರಿಲ್ಲ. ತಾಂತ್ರಿಕವಾಗಿ ಸಚಿನ್ ಬ್ಯಾಟಿಂಗ್‌ನಲ್ಲಿ ಕಿಂಚಿತ್ತೂ ನ್ಯೂನತೆಗಳು ಕಂಡುಬಂದಿರಲಿಲ್ಲ’ ಎಂದು 39ರ ಪ್ರಾಯದ ಕ್ಲಾರ್ಕ್ “ಬಿಗ್ ನ್ಪೋರ್ಟ್ಸ್ ಬ್ರೇಕ್‌ಫಾಸ್ಟ್’ ರೇಡಿಯೊ ಶೋನಲ್ಲಿ ತಿಳಿಸಿದ್ದಾರೆ.ಉಳಿದಂತೆ ಕೊಹ್ಲಿ ಕೂಡ ಸಮಕಾಲೀನ ಕ್ರಿಕೆಟಿಗರ ಪೈಕಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
“ಏಕದಿನ ಮತ್ತು ಟಿ20 ಮಾದರಿಯ ಕ್ರಿಕೆಟ್‌ನಲ್ಲಿ ಕೊಹ್ಲಿ ಅವರ ದಾಖಲೆಗಳು ಊಹೆಗೂ ನಿಲುಕದಂಥವು. ಇದೀಗ ಟೆಸ್ಟ್ ಮಾದರಿಯಲ್ಲೂ ಪಾರುಪತ್ಯ ಮೆರೆಯುವ ದಾರಿಯನ್ನು ಅವರು ಕಂಡುಕೊಂಡಿದ್ದಾರೆ. ಭರ್ಜರಿ ಶತಕ ಸಿಡಿಸುವ ತುಡಿತದಲ್ಲಿ ಸಚಿನ್ ಮತ್ತು ಕೊಹ್ಲಿ ಒಬ್ಬರನ್ನೊಬ್ಬರನ್ನು ಮೀರಿಸುತ್ತಾರೆ’ ಎಂದು ಮೈಕೆಲ್‌ಕ್ಲಾರ್ಕ್ ಹೇಳಿದ್ದಾರೆ.