Advertisement

ಬಿಗಡಾಯಿಸಿದ ರಾಜಸ್ಥಾನ್ ರಾಜಕೀಯ ಬಿಕ್ಕಟ್ಟು: ಸತ್ಯ ಎಂದಿಗೂ ಸೋಲಲ್ಲ: ಸಚಿನ್ ಪೈಲಟ್

05:26 PM Jul 14, 2020 | Nagendra Trasi |

ಜೈಪುರ್:ನಾಟಕೀಯ ಬೆಳವಣಿಗೆಯಲ್ಲಿ ರಾಜಸ್ಥಾನ್ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ಸಚಿನ್ ಪೈಲಟ್ ಅವರನ್ನು ವಜಾಗೊಳಿಸಿದ ಬೆನ್ನಲ್ಲೇ ತಮ್ಮ ಟ್ವೀಟರ್ ಖಾತೆಯಿಂದ ತಾನು ಹಿಂದೆ ನಿರ್ವಹಿಸಿದ್ದ ಹುದ್ದೆಯ ಮಾಹಿತಿ ಬದಲಾಯಿಸಿದ್ದು, ಸತ್ಯವನ್ನು ಯಾವತ್ತೂ ಸೋಲಿಸಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Advertisement

ಟೋಂಕ್ ಕ್ಷೇತ್ರದ ಶಾಸಕ ಮತ್ತು ಐಟಿ, ಟೆಲಿಕಾಂ ಮತ್ತು ಕಾರ್ಪೋರೇಟ್ ವ್ಯವಹಾರಗಳ ಮಾಜಿ ಸಚಿವ ಎಂಬುದಾಗಿ ಟ್ವೀಟರ್ ನಲ್ಲಿ ನಮೂದಿಸಿಕೊಂಡಿದ್ದಾರೆ.

ನಾಯಕತ್ವದ ವಿಚಾರದಲ್ಲಿ ರಾಜಸ್ಥಾನ್ ಮುಖ್ಯಮಂತ್ರಿ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಮುಸುಕಿನ ಗುದ್ದಾಟ ಇದೀಗ ತಾರಕಕ್ಕೇರಿದ್ದು, ಸಚಿನ್ ಅವರನ್ನು ಉಪಮುಖ್ಯಮಂತ್ರಿ ಹಾಗೂ ಪಿಸಿಸಿ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿನ ಬಂಡಾಯದ ಕಿಚ್ಚು ಮತ್ತಷ್ಟು ಉಲ್ಬಣಗೊಳ್ಳುವಂತಾಗಿದೆ ಎಂದು ವರದಿ ವಿವರಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next