Advertisement
1960ರಲ್ಲಿ ನಿರ್ಮಾಣಗೊಂಡ ಈ ಆಸ್ಪತ್ರೆ ಕಟ್ಟಡ ಆಗಾಗ್ಗೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಮುತುವರ್ಜಿಯಲ್ಲಿ ಇಲಾಖೆ ನೆರವಿನಿಂದ ನವೀಕರಣಗೊಂಡದ್ದು ಬಿಟ್ಟರೆ ಪೂರ್ಣ ಪ್ರಮಾಣದಲ್ಲಿ ಮರು ನಿರ್ಮಾಣ ಗೊಂಡಿಲ್ಲ. ಈ ಹಿಂದೆ 2012ರಲ್ಲಿ ನಬಾರ್ಡ್ ಯೋಜನೆಯಡಿ ನೂತನ ಕಟ್ಟಡ ನಿರ್ಮಾಣದ ಚಿಂತನೆ ನಡೆಸ ಲಾಗಿದ್ದರೂ ಪಹಣಿ ಪತ್ರದ ಗೊಂದಲ ಎಲ್ಲ ಆಸೆಗಳಿಗೆ ತಣ್ಣೀರೆರಚಿತ್ತು.
ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆಯಲ್ಲಿ ಸರ್ವೆ ನಂಬ್ರ 340/1ಬಿ ರ 2.54 ಎಕರೆ ಸ್ಥಳದಲ್ಲಿ ಈ ಹಿಂದೆ 1960ರಲ್ಲಿ ನಿರ್ಮಾಣಗೊಂಡ ಈ ಆಸ್ಪತ್ರೆಯ ಜಾಗದ ಪಹಣಿ ಪತ್ರದ ಕಲಂ 9ರಲ್ಲಿ “ಸರಕಾರ’ ಎಂದು ನಮೂದಾಗಿರುವುದು ಈ ಕಟ್ಟಡ ಪುನರ್‌ನಿರ್ಮಾಣ ಯೋಜನೆಗೆ
ಅಡ್ಡಿಯಾಗಿದೆ. ಈ ಬಗ್ಗೆ ಮುಂಡ್ಕೂರು ಗ್ರಾ.ಪಂ. ಆಡಳಿತ ಕಾರ್ಕಳ ಶಾಸಕರು,ಜಿ. ಪಂ.ಗೆ ಕಟ್ಟಡ ನಿರ್ಮಾಣದ ಬಗ್ಗೆ ಮನವಿ ಸಲ್ಲಿಸಿದಾಗ ಈ ದೋಷದ ಮಾಹಿತಿ ಲಭ್ಯ ವಾಗಿತ್ತು. ಪಹಣಿ ಪತ್ರದಲ್ಲಿ ಸರಕಾರ ಎಂಬ ಪದದ ಬದಲಿಗೆ ಆರೋಗ್ಯ ಇಲಾಖೆ ಎಂಬುದಾಗಿ ತಿದ್ದುಪಡಿ ಮಾಡಿ ನಮೂದಿಸು
ವಂತೆ ಶಾಸಕರಾದಿಯಾಗಿ ಎಲ್ಲರೂ ಉಲ್ಲೇಖೀತಪತ್ರ ಪಂ. ಗೆ ನೀಡಿದ್ದರು. ತಹಶೀಲ್ದಾರ್‌ಗೆ ಪತ್ರ
ಈ ಬಗ್ಗೆ ಪಹಣಿಪತ್ರ ತಿದ್ದುಪಡಿ ಮಾಡುವಂತೆ ಮುಂಡ್ಕೂರು ಗ್ರಾ.ಪಂ. ಸದಸ್ಯ ರಘುವೀರ ಶೆಣೈಯವರು ಕಾರ್ಕಳ ತಹಶೀಲ್ದಾರರಿಗೆ ಪತ್ರ ಬರೆದಿದ್ದು ಸಕಾರಾತ್ಮಕ ಉತ್ತರ ನಿರೀಕ್ಷಿಸಲಾಗಿದೆ. ಕಾರ್ಕಳ ಶಾಸಕರು, ಉಡುಪಿ ಜಿ.ಪಂ. ಮುಂಡ್ಕೂರು ಗ್ರಾ.ಪಂ.ನವರು ಈ ಆಸ್ಪತ್ರೆಯ ನೂತನ ಕಟ್ಟಡದ ಬಗ್ಗೆ ಸಮಗ್ರ ಚಿಂತನೆ ನಡೆಸಬೇಕಿದೆ. ಈಗಾಗಲೇ ಪಂಚಾಯತ್ ಆಡಳಿತ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು ಶೀಘ್ರವೇ ಸಚ್ಚೇರಿಪೇಟೆ ಪ್ರಾ. ಆರೋಗ್ಯ ಕೇಂದ್ರದ ನೂತನ ಕಟ್ಟಡ ಕಾಮಗಾರಿಗೆ ಚಾಲನೆ ದೊರೆಯುವ ಸಾಧ್ಯತೆ ಇದೆ.
Related Articles
ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪ್ರತೀ ದಿನ ನೂರಕ್ಕೂ ಹೆಚ್ಚು ಮಂದಿ ವೈದ್ಯಕೀಯ ಸೇವೆ , ಮಾಹಿತಿಗಾಗಿ ಬರುತ್ತಿದ್ದು ಎಲ್ಲ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹೈಟೆಕ್ ಆಸ್ಪತ್ರೆಗಳಲ್ಲಿ ಸಿಗುವ ಹೆಚ್ಚಿನ ಸೌಲಭ್ಯಗಳನ್ನು ಇಲ್ಲಿನ ವೈದ್ಯಾಧಿಕಾರಿಗಳು ಹಾಗೂ ಸಿಬಂದಿ ನೀಡುತ್ತಿದ್ದರೂ ಹಲವು ಮೂಲ ಸೌಕರ್ಯಗಳ ಕೊರತೆ ಇದೆ. 4 ಉಪ ಕೇಂದ್ರಗಳಿರುವ ಈ ಆಸ್ಪತ್ರೆಯ ಮುಂಡ್ಕೂರು ಹಾಗೂ ಸಚ್ಚೇರಿಪೇಟೆ ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡ ಇದೆ. ಇರಬೇಕಾದ 4 ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಹುದ್ದೆ ಖಾಲಿ ಇದ್ದು ಸದ್ಯಕ್ಕೆ ಎರಡನ್ನಾದರೂ ನೀಡಬೇಕಾಗಿದೆ. ನೀರಿನ ವ್ಯವಸ್ಥೆಗೆ ಬೋರ್‌ವೆಲ್, ಸಿಬಂದಿಗಳಿಗೆ ವಸತಿಗೃಹ ಬೇಕಾಗಿದೆ.
Advertisement
ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಸಹಕಾರಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಕಂದಾಯ ಇಲಾಖೆಯ ಮೂಲಕ ಪಹಣಿಪತ್ರ ತಿದ್ದುಪಡಿ ಮಾಡಿಸಿ ಮುಂದಿನ ದಿನಗಳಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಎಲ್ಲ ಸಹಕಾರ ನೀಡಲಾಗುವುದು.
-ವಿ. ಸುನಿಲ್ ಕುಮಾರ್, ಶಾಸಕರು, ಕಾರ್ಕಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಸಹಕಾರ
ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಕಂದಾಯ ಇಲಾಖೆಯ ಮೂಲಕ ಪಹಣಿಪತ್ರ ತಿದ್ದುಪಡಿ ಮಾಡಿಸಿ ಮುಂದಿನ ದಿನಗಳಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು ಎಲ್ಲ ಸಹಕಾರ ನೀಡಲಾಗುವುದು.
-ವಿ. ಸುನಿಲ್ ಕುಮಾರ್, ಶಾಸಕರು, ಕಾರ್ಕಳ ಶರತ್ ಶೆಟ್ಟಿ ಮುಂಡ್ಕೂರು