Advertisement

ಶಬರಿಮಲೆ ಯಾತ್ರೆ: ಬೆಳಗಾವಿಯಿಂದ ಕೊಲ್ಲಂಗೆ ವಿಶೇಷ ರೈಲು ಸಂಚಾರ

04:14 PM Nov 15, 2022 | Team Udayavani |

ಹುಬ್ಬಳ್ಳಿ: ಪ್ರಯಾಣಿಕರ ಬೇಡಿಕೆ ಮೇರೆಗೆ ಬೆಳಗಾವಿ ಸಂಸದೆ ಮಂಗಲಾ ಎಸ್‌. ಅಂಗಡಿ ಅವರು ಶಬರಿಮಲೆಗೆ ಹೋಗುವ ತ್ರಾರ್ಥಿಗಳ ಅನುಕೂಲಕ್ಕಾಗಿ ಬೆಳಗಾವಿಯಿಂದ ಕೊಲ್ಲಂಗೆ ವಿಶೇಷ ರೈಲುಗಳನ್ನು ಓಡಿಸಲು ರೈಲ್ವೆ ಸಚಿವಾಲಯಕ್ಕೆ ಮನವಿ ಸಲ್ಲಿಸಿ ಕೋರಿದ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಕೆಲ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

Advertisement

ನ.20ರಂದು ಬೆಳಗಾವಿ-ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್‌ ರೈಲು (07357) ಬೆಳಗ್ಗೆ 11:30 ಗಂಟೆಗೆ ಬೆಳಗಾವಿಯಿಂದ ಹೊರಟು ಮರುದಿನ ಮಧ್ಯಾಹ್ನ 3:15 ಗಂಟೆಗೆ ಕೊಲ್ಲಂ ತಲುಪಲಿದೆ. ಅದೇರೀತಿ 21ರಂದು ಕೊಲ್ಲಂ-ಬೆಳಗಾವಿ ರೈಲು (07358) ಸಂಜೆ 5:10 ಗಂಟೆಗೆ ಕೊಲ್ಲಂನಿಂದ
ಹೊರಟು ಮರುದಿನ ರಾತ್ರಿ 11:00 ಗಂಟೆಗೆ ಬೆಳಗಾವಿ ತಲುಪಲಿದೆ.

ಈ ವಿಶೇಷ ರೈಲು ಖಾನಾಪುರ, ಲೋಂಡಾ, ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್‌, ತಿರುಪ್ಪೂರು, ಪೊದನೂರು, ಪಾಲಕ್ಕಾಡ್‌,
ತ್ರಿಶೂರ್‌, ಆಲುವಾ, ಎರ್ನಾಕುಲಂ ಟೌನ್‌, ಕೊಟ್ಟಾಯಂ, ಚಂಗನಸ್ಸೆರಿ, ತಿರುವಲ್ಲಾ, ಚೆಂಗನ್ನೂರ, ಮಾವೇಲಿಕರ, ಕಾಯಂಕುಲಂ, ಸಸ್ತಾನ್‌ಕೋಟ್ಟ ನಿಲ್ದಾಣಗಳಲ್ಲಿ ನಿಲುಗಡೆ
ಆಗಲಿದೆ. ಈ ರೈಲು ಒಂದು ಎಸಿ-2 ಟೈರ್‌, ಎಂಟು ಎಸಿ 3-ಟೈರ್‌, ಒಂಬತ್ತು ಸ್ಲಿಪರ್‌ ಕ್ಲಾಸ್‌ ಮತ್ತು ಎರಡು ಲಗೇಜ್‌ ಕಮ್‌ ಬ್ರೇಕ್‌-ವ್ಯಾನ್‌ ಸೇರಿ ಜನರೇಟರ್‌ ಕಾರ್‌ ಒಳಗೊಂಡಿರುವ 20 ಬೋಗಿಗಳ ಸಂಯೋಜನೆ ಹೊಂದಿದೆ.

ಹುಬ್ಬಳ್ಳಿ-ಕೊಲ್ಲಂ-ಹುಬ್ಬಳ್ಳಿ: ನ.27ರಂದು ಹುಬ್ಬಳ್ಳಿ-ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್‌ ರೈಲು (07359) ಮಧ್ಯಾಹ್ನ 2:40 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಮರುದಿನ ಮಧ್ಯಾಹ್ನ 3:15 ಗಂಟೆಗೆ ಕೊಲ್ಲಂ ತಲುಪಲಿದೆ. ಅದೇ ರೀತಿ 28ರಂದು ಕೊಲ್ಲಂ-ಹುಬ್ಬಳ್ಳಿ ರೈಲು (07360) ಸಂಜೆ 5:10 ಗಂಟೆಗೆ ಕೊಲ್ಲಂನಿಂದ ಹೊರಟು ಮರುದಿನ ರಾತ್ರಿ 8:00 ಗಂಟೆಗೆ ಹುಬ್ಬಳ್ಳಿ ತಲುಪಲಿದೆ.

ಈ ವಿಶೇಷ ರೈಲು ಹಾವೇರಿ, ರಾಣಿಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್‌, ತಿರುಪ್ಪೂರು, ಪೊದನೂರು, ಪಾಲಕ್ಕಾಡ್‌, ತ್ರಿಶೂರ್‌, ಆಲುವಾ, ಎರ್ನಾಕುಲಂ ಟೌನ್‌, ಕೊಟ್ಟಾಯಂ, ಚಂಗನಸ್ಸೆರಿ, ತಿರುವಲ್ಲಾ, ಚೆಂಗನ್ನೂರ, ಮಾವೇಲಿಕರ, ಕಾಯಂಕುಲಂ, ಸಸ್ತಾನ್‌ಕೋಟ್ಟ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿದೆ.

Advertisement

ಬೆಳಗಾವಿ-ಕೊಲ್ಲಂ-ಬೆಳಗಾವಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್‌: ಡಿ.4ರಿಂದ ಜ.15ರ ವರೆಗೆ ಬೆಳಗಾವಿ-ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್‌ (07361) ರೈಲು ಪ್ರತಿ ರವಿವಾರ ಬೆಳಗ್ಗೆ 11:30 ಗಂಟೆಗೆ ಬೆಳಗಾವಿಯಿಂದ ಹೊರಟು ಮರುದಿನ ಮಧ್ಯಾಹ್ನ 3:15 ಗಂಟೆಗೆ ಕೊಲ್ಲಂ ತಲುಪಲಿದೆ. ಅದೇ ರೀತಿ ಡಿ. 5ರಿಂದ 16ರ ವರೆಗೆ ಕೊಲ್ಲಂ-ಬೆಳಗಾವಿ ರೈಲು (07362) ಪ್ರತಿ ಸೋಮವಾರ ಸಂಜೆ 5:10 ಗಂಟೆಗೆ ಕೊಲ್ಲಂನಿಂದ ಹೊರಟು ಮರುದಿನ ರಾತ್ರಿ 11:00 ಗಂಟೆಗೆ ಬೆಳಗಾವಿ ತಲುಪಲಿದೆ. ಈ ವಿಶೇಷ ರೈಲುಗಳು (07359/07360 ಮತ್ತು 07361/07362) ಒಂದು ಎಸಿ-2 ಟೈರ್‌, ಎರಡು ಎಸಿ-3 ಟೈರ್‌, ಹತ್ತು ಸ್ಲಿಪರ್‌ ಕ್ಲಾಸ್‌ ಮತ್ತು ಎರಡು ದ್ವಿತೀಯ ದರ್ಜೆ ಲಗೇಜ್‌ ಕಮ್‌ ಬ್ರೇಕ್‌-ವ್ಯಾನ್‌/ಅಂಗವಿಕಲ ಸ್ನೇಹಿ ಕಂಪಾರ್ಟ್‌ಮೆಂಟ್‌ ಒಳಗೊಂಡು 15 ಬೋಗಿಗಳ ಸಂಯೋಜನೆ ಹೊಂದಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next