Advertisement

ಜು.17ರಿಂದ ತೆರೆಯಲಿದೆ ಶಬರಿಮಲೆ ದೇವಸ್ಥಾನ: ಭಕ್ತರು ಈ ನಿಯಮಗಳನ್ನು ಪಾಲಿಸಲೇಬೇಕು

02:45 PM Jul 11, 2021 | Team Udayavani |

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲವು ಮಾಸಿಕ ಪೂಜೆಗಾಗಿ ಜು. 17ರಿಂದ ಜು. 21ರ ವರೆಗೆ ತೆರೆಯಲಿದೆ. ಭಕ್ತರು ಕೋವಿಡ್ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಎಂದು ದೇಗುಲದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

Advertisement

ಈ ಅವಧಿಯಲ್ಲಿ ಶಬರಿಮಲೆ ದೇಗುಲಕ್ಕೆ ಭೇಟಿ ನೀಡುವ ಭಕ್ತರು ಎರಡೂ ಲಸಿಕೆ ಹಾಕಿಸಿಕೊಂಡಿರುವ ಪ್ರಮಾಣಪತ್ರ ಅಥವಾ 48 ಗಂಟೆಗಳೊಳಗೆ ಮಾಡಿಸಿದ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿ ಹೊಂದಿರುವುದು ಕಡ್ಡಾಯವಾಗಿದೆ.

ಆನ್‌ಲೈನ್‌ ಬುಕಿಂಗ್‌ ಮೂಲಕ ಗರಿಷ್ಠ 50 ಸಾವಿರ ಭಕ್ತರಿಗೆ ದರ್ಶನಾವಕಾಶ ನೀಡಲಾಗುತ್ತದೆ.

ಇದನ್ನೂ ಓದಿ;ಕಂದಹಾರ್ ನಲ್ಲಿ ತಾಲಿಬಾನ್ ಹಿಡಿತ: ರಾಯಭಾರ ಕಚೇರಿಯ ಸಿಬ್ಬಂದಿಗಳ ವಾಪಾಸ್ ಗೆ ಭಾರತ ಕ್ರಮ

ಕೇರಳದಲ್ಲಿ ಶನಿವಾರ 14,087 ಜನರು ವೈರಸ್ ಸೋಂಕಿಗೆ ಒಳಗಾಗಿದ್ದು, 109 ಜನರು ಈ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ರಾಜ್ಯ ಸರ್ಕಾರದ ಅಂಕಿಅಂಶಗಳು ತಿಳಿಸಿವೆ

Advertisement
Advertisement

Udayavani is now on Telegram. Click here to join our channel and stay updated with the latest news.

Next