ಶಬರಿಮಲೆ: ಶಬರಿಮಲೆಯಲ್ಲಿರುವ ಅಯ್ಯಪ್ಪ ದೇಗುಲ ನ.15ರಂದು ಭಕ್ತರಿಗಾಗಿ ಮತ್ತೆ ತೆರೆಯಲಿದೆ.
ಆ ದಿನದಿಂದ ಒಟ್ಟು 2 ತಿಂಗಳ ಕಾಲ ದೇಗುಲ ತೆರೆದಿರಲಿದೆ. ಅದಕ್ಕೆ ಪೂರಕವಾಗಿ ಬುಧವಾರ ಶ್ರೀ ಕ್ಷೇತ್ರದಲ್ಲಿ ಚಿತ್ತಿರ ಅಷ್ಟ ವಿಶೇಷ ಪೂಜೆಯೂ ನಡೆಯಿತು.
ಸೋಂಕು ತಡೆ ನಿಯಮಗಳನ್ನು ಅನುಸರಿಸಿಕೊಂಡು ಭಕ್ತರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. 2 ಡೋಸ್ ಲಸಿಕೆ ಪಡೆದುಕೊಂಡಿರುವ ಪ್ರಮಾಣ ಪತ್ರ, ದೇಗುಲಕ್ಕೆ ಬರುವ 72 ಗಂಟೆಗಳ ಮೊದಲು ನಡೆಸಲಾಗಿರುವ ಕೊರೊನಾ ನೆಗೆಟಿವ್ ಪರೀಕ್ಷಾ ವರದಿ ಕಡ್ಡಾಯವಾಗಿದೆ.
ಇದನ್ನೂ ಓದಿ:ಹಸಿರಾಯಿತು ಬರಡು ಭೂಮಿ! 30 ಸಾವಿರ ಗಿಡ ಬೆಳೆಸಿದ ನಿಸರ್ಗ ಪ್ರೇಮಿಗಳು
ತಿರುವಾಂಕೂರು ದೇವಸ್ವಂ ಮಂಡಳಿಯ ವೆಬ್‌ಸೈಟ್‌ನಲ್ಲಿ ದರ್ಶನಾಕಾಂಕ್ಷಿಗಳು ನೋಂದಣಿ ಮಾಡಿಸಿಕೊಳ್ಳಬೇಕು. ಸದ್ಯ ಮಾಹಿತಿ ಪ್ರಕಾರ ಕೇರಳ ಸರ್ಕಾರ ಪ್ರತಿ ದಿನ 25 ಸಾವಿರ ಮಂದಿಗೆ ಒಂದು ದಿನಕ್ಕೆ ದರ್ಶನದ ಅವಕಾಶಕ್ಕೆ ನೀಡುವ ಸಾಧ್ಯತೆಗಳಿವೆ.