Advertisement

Kerala 39 ದಿನ; ಶಬರಿಮಲೆಗೆ 204 ಕೋ.ರೂ. ಆದಾಯ

12:40 AM Dec 27, 2023 | Team Udayavani |

ತಿರುವನಂತಪುರ: ಕೇರಳದ ಶಬರಿಮಲೆ ದೇಗುಲದಲ್ಲಿ ಡಿ. 25ರ ವರೆಗೆ 39 ದಿನಗಳಲ್ಲಿ 204.30 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ತಿರುವಾಂಕೂರು ದೇವಸ್ವಮ್‌ ಮಂಡಳಿ (ಟಿಡಿಬಿ) ತಿಳಿಸಿದೆ.

Advertisement

39 ದಿನಗಳಲ್ಲಿ ದೇಗುಲದ ವಿವಿಧ ಮೂಲ ಗಳಿಂದ ಒಟ್ಟು 204.30 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಹುಂಡಿ ಕಾಣಿಕೆ  ಲೆಕ್ಕ ಹಾಕಿದ ಅನಂತರ ಆದಾಯ ಇನ್ನಷ್ಟು ಏರಿಕೆಯಾಗಲಿದೆ.

ಭಕ್ತರು ಸಲ್ಲಿಸಿರುವ ಕಾಣಿಕೆಯಿಂದ 63.89 ಕೋಟಿ ರೂ. ಸಂಗ್ರಹವಾಗಿದೆ. ಅರವಣ ಪ್ರಸಾದ ಮಾರಾಟದಿಂದ 96.32 ಕೋಟಿ ರೂ., ಅಪ್ಪಂ ಪ್ರಸಾದ ಮಾರಾಟದಿಂದ 12.38 ಕೋಟಿ ರೂ. ಆದಾಯ ಬಂದಿದೆ ಎಂದು ಟಿಡಿಬಿ ಅಧ್ಯಕ್ಷ ಪಿ.ಎಸ್‌. ಪ್ರಶಾಂತ್‌ ತಿಳಿಸಿದ್ದಾರೆ.

ಈ ವರ್ಷದ ಮಂಡಲ ಋತುವಿ ನಲ್ಲಿ ಡಿ. 25ರ ವರೆಗೆ 31,43,163 ಭಕ್ತರು ಸ್ವಾಮಿಯ ದರ್ಶನ ಪಡೆದಿ¨ªಾರೆ ಎಂದು ತಿಳಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next