ಮುಂಬಯಿ: ದೈಹಿಕ, ಬೌದ್ಧಿಕ ಸಮತೋಲನಗಳ ಸಿದ್ಧತೆ 41 ದಿನಗಳ ಅಯ್ಯಪ್ಪ ವ್ರತದಲ್ಲಿದೆ. ತಣ್ಣೀರಿನ ಸ್ಥಾನ, ಸಂಧ್ಯಾ ಪೂಜೆ, ಬರಿಕಾಲಿನ ನಡಿಗೆ, ಬ್ರಹ್ಮಚರ್ಯೆ, ಸಾತ್ವಿಕ ಆಹಾರ ಇತ್ಯಾದಿಗಳ ಇಂದ್ರಿಯಗಳ ಪರೀಕ್ಷೆ ಈ ಸಂದರ್ಭ ದಲ್ಲಿ ನಿರಂತರವಾಗಿರುತ್ತದೆ. ಸಮಾನತೆ, ಸೌಹಾರ್ದ ಹಾಗೂ ಸಹೃದಯತೆಯಿಂದ ಕೂಡಿರುವ ಶಬರಿಮಲೆ ಕ್ಷೇತ್ರ ಎಲ್ಲ ಧರ್ಮೀಯರ ಭಕ್ತಿಯ ತಾಣವಾಗಿದೆ ಎಂದು ಬಾಂದ್ರಾದ ಶ್ರೀ ಧರ್ಮಶಾಸ್ತ ಭಕ್ತ ವೃಂದ ಮಂಡಳಿಯ ಅಧ್ಯಕ್ಷ ಗುರುಸ್ವಾಮಿ ರಾಮಣ್ಣ ಬಿ. ದೇವಾಡಿಗ ತಿಳಿಸಿದರು.
ಜ. 9ರಂದು ಚೆಂಬೂರಿನ ಛೆಡ್ಡಾನಗರದ ಶ್ರೀ ಗಣಪತಿ ಮಂದಿರದಲ್ಲಿ ಸರಕಾರದ ಕೋವಿಡ್ ನಿಯಮದಂತೆ ಸರಳವಾಗಿ ಶಾಸ್ತ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ವ್ಯಾಪಕ ಸುಧಾರಣೆಗಳ ಫಲವಾಗಿ ಶ್ರೀ ಅಯ್ಯಪ್ಪ ಆರಾಧಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದು ಒಳ್ಳೆಯ ಚಿಂತನೆಗಳ ಮುನ್ಸೂಚನೆಯಾಗಿದೆ. ಕೋವಿಡ್ ನಂತಹ ಕಾಲಘಟ್ಟದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಆದೇಶವನ್ನು ಪಾಲಿಸಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡೋಣ ಎಂದರು.
ಪಡಿಪೂಜೆ, ದೀಪಾಲಂಕಾರ, ಮಹಾ ಪಜೆಯ ನೇತೃತ್ವ ವಹಿಸಿದ್ದ ಶ್ರೀ ಧರ್ಮಶಾಸ್ತ ಭಕ್ತ ವೃಂದ ಮಂಡಳಿಯ ಗೌರವ ಅಧ್ಯಕ್ಷ ಗುರುಸ್ವಾಮಿ ಕೆ. ಆರ್. ವಿಶ್ವನಾಥನ್ ಮತ್ತು ರಾಜಮ್ ವಿಶ್ವನಾಥನ್ ಗುರುಸ್ವಾಮಿ ದಂಪತಿ ಯನ್ನು ಗುರುವಂದನೆಯೊಂದಿಗೆ ಗೌರವಿಸಲಾಯಿತು.
ಇದನ್ನೂ ಓದಿ:ನಾವು 17 ಮಂದಿ ಶಾಸಕರು ಮತ್ತೊಮ್ಮೆ ಸಭೆ ಸೇರಲಿದ್ದೇವೆ: ಆರ್.ಶಂಕರ್
ಗಣಪತಿ ಮಂದಿರದ ಟ್ರಸ್ಟಿ ಅಪ್ಪು ಗುರುಸ್ವಾಮಿ, ಮಂಡಳಿಯ ಕಾರ್ಯದರ್ಶಿ ಸುರೇಶ್ ಶೆಟ್ಟಿ ಯೆಯ್ನಾಡಿ, ಕೋಶಾಧಿಕಾರಿ ವಿಜಯ ಡಿ. ಪೂಜಾರಿ, ಜತೆ ಕಾರ್ಯದರ್ಶಿ ನಿತೇಶ್ ಸಿ. ಶೆಟ್ಟಿ, ಸದಸ್ಯರಾದ ಪ್ರಶಾಂತ್ ಶೆಟ್ಟಿ, ಕೃಷ್ಣ ಅಡ್ಯಂತಾಯ, ಹರೀಶ್ ಶೆಟ್ಟಿ, ಜಯರಾಮ ಶೆಟ್ಟಿ, ಶಿಭು ಮಾಧವನ್, ಸುಧಾಕರ್ ಶ್ರೀಯಾನ್, ಗೋಪಾಲ್ ನಾಯ್ಕ್, ರಾಜು ಶೆಟ್ಟಿ, ರಾಮ ಅಮೀನ್, ನಿತಿನ್ ಬಂಗೇರ, ರೋಹಿತ್ ಶೆಟ್ಟಿ, ಗಿರೀಶ್ ಅಮೀನ್, ಸುಧೀರ್ ಶೆಟ್ಟಿ, ಪ್ರವೀಣ್ ಮೂಲ್ಯ, ಜಯಂತ್ ಶೆಟ್ಟಿ, ಕಲಾರವಿ, ಶೃತಿ ರವಿ, ಅಜಯ ಸ್ವಾಮಿ, ವಿಶ್ವನಾಥ್ ಮೂಲ್ಯ, ಮೋಹನ್ ಶೆಟ್ಟಿ, ಮನೋಜ್ ಸುವರ್ಣ ಮೊದಲಾದವರು ಪಾಲ್ಗೊಂಡಿದ್ದರು. ಸತೀಶ್ ಪೂಜಾರಿ ಮತ್ತು ತಂಡ ದವರಿಂದ ಭಕ್ತಿ ರಸಮಂಜರಿ ನಡೆ ಯಿತು. ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಪ್ರಸಾದ ಸ್ವೀಕರಿಸಿದರು.
ಚಿತ್ರ-ವರದಿ: ರಮೇಶ್ ಅಮೀನ್