Advertisement
ತಿರುವನಂತಪುರ ಅಥವಾ ಕೊಚ್ಚಿಯಿಂದ ಹೆಲಿಕಾಪ್ಟರ್ ಸೇವೆ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ಮೂಲಗಳನ್ನು ಉಲ್ಲೇಖೀಸಿ “ದ ಹಿಂದೂ’ ಪತ್ರಿಕೆ ವರದಿ ಮಾಡಿದೆ. ನ.17ರಿಂದ 41 ದಿನಗಳ ಕಾಲ ಮಂಡಲ ಪೂಜೆ ಮತ್ತು ಮಕರವಿಳಕ್ಕು ಸಂದರ್ಭಕ್ಕೆ ದೇಗುಲ ತೆರೆಯಲಿರುವಂತೆಯೇ ಹೆಲಿಕಾಪ್ಟರ್ ಬಳಕೆಯ ಸಾಧ್ಯತೆ ಬಗ್ಗೆ ಕೇರಳ ಪೊಲೀಸ್ ಇಲಾಖೆ ವರಿಷ್ಠರು ಚಿಂತನೆ ನಡೆಸುತ್ತಿದ್ದಾರೆ. ಕೇರಳ ಅರಣ್ಯ ಇಲಾಖೆ ಅನು ಮೋದನೆ ನೀಡಬೇಕಾಗಿದ್ದು, ಅದಕ್ಕಾಗಿ ಕಾಯಲಾಗುತ್ತಿದೆ ಎನ್ನ ಲಾಗಿದೆ. 1980ರ ದಶಕದಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಕಾಪ್ಟರ್ ಮೂಲಕ ಶಬರಿಮಲೆ ದೇಗುಲಕ್ಕೆ ಭೇಟಿ ನೀಡಲು ಮುಂದಾಗಿದ್ದರು. ಕಾರಣಾಂತರ ಗಳಿಂದ ಇದು ಸಾಧ್ಯವಾಗಿರಲಿಲ್ಲ.
ಮತ್ತೂಂದು ಮಹತ್ವದ ಬೆಳ ವಣಿಗೆಯಲ್ಲಿ ಕೇರಳ ಪೊಲೀಸ್ ಇಲಾಖೆ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲು ನಿರ್ಧರಿಸಿದೆ. ದೇಗುಲಕ್ಕೆ ಭೇಟಿ ನೀಡುವ ಪ್ರತಿ ಯೊಂದು ಖಾಸಗಿ ವಾಹನವನ್ನು ಆಮೂಲಾಗ್ರವಾಗಿ ತಪಾಸಣೆ ನಡೆಸಲು ತೀರ್ಮಾನಿಸಲಾಗಿದೆ. ಇದರ ಜತೆಗೆ ಭಕ್ತರು ಗುರುತಿನ ಚೀಟಿ ಹೊಂದುವುದನ್ನು ಕಡ್ಡಾಯ ಮಾಡಲಾಗಿದೆ. ಪೊಲೀಸ್ ಪಾಸ್ ಬೇಕು
ನೀಲಕ್ಕಲ್‌ನಲ್ಲಿ ನಿಲುಗಡೆ ಬಯಸುವ ವಾಹನಗಳು ಪೊಲೀಸರು ನೀಡುವ ಪಾಸ್‌ಗಳನ್ನು ಕಡ್ಡಾಯ ವಾಗಿ ಹೊಂದಿರಬೇಕು. ಆದರೆ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದ ಯಾತ್ರಾರ್ಥಿ ಗಳಿಗೆ ಹೇಗೆ ಪಾಸ್ ನೀಡಲಾಗುತ್ತದೆ ಎಂಬ ಬಗ್ಗೆ ಸದ್ಯಕ್ಕೆ ಆದೇಶ ದಲ್ಲಿ ಸ್ಪಷ್ಟತೆ ಹೊಂದಿಲ್ಲ.
Related Articles
ನೀಲಕ್ಕಲ್‌ನಲ್ಲಿ ಕಾಯ್ದಿರಿಸದ ಟಿಕೆಟ್ ನೀಡುವ ಕೇಂದ್ರವನ್ನು ಶೀಘ್ರ ಸ್ಥಾಪಿಸಲಾಗುತ್ತದೆ. ಪ್ರತಿ ಯಾತ್ರಾರ್ಥಿ 48 ಗಂಟೆ ಒಳಗಾಗಿ ನೀಲಕ್ಕಲ್ -ಪಂಪಾ- ನೀಲಕ್ಕಲ್ ಮೂಲಕವೇ ದೇಗುಲಕ್ಕೆ ಹೋಗಿ ಬರಬೇಕು ಎನ್ನಲಾಗಿದೆ.
Advertisement