Advertisement

ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ಅಸ್ಥಿತ್ವಕ್ಕೆ

06:00 AM Dec 08, 2018 | |

ಬೆಂಗಳೂರು: ಶಬರಿಮಲೆ ಕ್ಷೇತ್ರದ ಭಕ್ತರ ಮತ್ತು ಅವರ ಭಾವನೆಗಳನ್ನು ಗೌರವಿಸಿ ಬೆಂಬಲಿಸುವ ಸಲುವಾಗಿ ಶಬರಿ ಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ಅಸ್ಥಿತ್ವಕ್ಕೆ ಬಂದಿದೆ.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ನಿರ್ಮಲ್‌ಕುಮಾರ್‌ ಸುರಾನಾ,  ಶಬರಿಮಲೆ ಕ್ಷೇತ್ರದ ಭಕ್ತರ ಮತ್ತು ಅವರ ಭಾವನೆಗಳನ್ನು ಗೌರವಿಸಿ ಬೆಂಬಲಿಸುವ ಸಲುವಾಗಿ ಶಬರಿ ಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ರಚಿಸಿ ಕೇಂದ್ರ ಸಮಿತಿ ಹಾಗೂ ರಾಜ್ಯ ಸಮಿತಿ ರಚಿಸಲಾಗಿದೆ.

ದಕ್ಷಿಣದ ನಾಲ್ಕು ರಾಜ್ಯಗಳನ್ನು ಒಳಗೊಂಡ ಗಣ್ಯರ ನೇತೃತ್ವದ ಕೇಂದ್ರ ಸಮಿತಿಯೊಂದನ್ನು ರಚಿಸಲಾಗಿದ್ದು ರಾಜ್ಯ ದಿಂದ ಜಸ್ಟೀಸ್‌ ಎನ್‌.ಕುಮಾರ್‌, ಲಹರಿ ಸಂಸ್ಥೆಯ ಲಹರಿ ವೇಲು, ಕೃಷ್ಣಮೂರ್ತಿ  ಮತ್ತು ಸಂಧ್ಯಾ ಪೈ ಅವರನ್ನು ನೇಮಕ ಮಾಡಲಾಗಿದೆ.

ರಾಜ್ಯ ಸಮಿತಿಯ ಸದಸ್ಯರಾಗಿ ಎಸ್‌.ಆರ್‌.ಲೀಲಾ, ಎನ್‌.ವಿ.ಮೂರ್ತಿ, ಚಿತ್ರ ನಟ ಜಗ್ಗೇಶ್‌, ಶರಣ್‌ ಕುಮಾರ್‌ ಚಿತ್ರದುರ್ಗ, ಹಿರಿಯ ಚಿತ್ರ ನಟ ಶಿವರಾಂ, ಶಂಕರಪ್ಪ, ಡಾ.ಆರತಿ, ಟಿ.ಬಿ.ಶೇಖರ್‌, ಉಲ್ಲಾಸ್‌ ಬೆಂಗಳೂರು, ವಿ. ಕೃಷ್ಣಪ್ಪ, ಕೃಷ್ಣಯ್ಯ ತುಮಕೂರು, ರೋಜಾ ಷಣ್ಮುಗಂ, ಗಿರಿಧರ್‌ ಮೈಸೂರು, ಗಿರೀಶ್‌ ಭದ್ರಾವತಿ, ಮಹಾಂತೇಶ್‌ ನಾಯಕ್‌, ಶಕುಂತಲಾ ಅಯ್ಯರ್‌, ಚೀನಾ ರಾಮು, ಪರಶಿವಮೂರ್ತಿ, ಶ್ರೀಕುಮಾರ್‌ ನೇಮಕವಾಗಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next