Advertisement

ಚೀನದಲ್ಲಿ 3ನೇ ಟೆನಿಸ್‌ ಪ್ರಶಸ್ತಿ ಗೆದ್ದ ಸಬಲೆಂಕಾ

06:05 PM Oct 28, 2019 | Team Udayavani |

ಜುಹೈ (ಚೀನ): ಬೆಲರೂಸ್‌ನ ಅರಿನಾ ಸಬಲೆಂಕಾ ಜುಹೈಯಲ್ಲಿ ನಡೆದ “ಡಬ್ಲ್ಯುಟಿಎ ಎಲೈಟ್‌ ಟ್ರೋಫಿ’ ಟೆನಿಸ್‌ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿದ್ದಾರೆ. ಫೈನಲ್‌ನಲ್ಲಿ ಅವರು ಅಗ್ರ ಶ್ರೇಯಾಂಕದ ಡಚ್‌ ಎದುರಾಳಿ ಕಿಕಿ ಬರ್ಟೆನ್ಸ್‌ ವಿರುದ್ಧ 6-4, 6-2 ಅಂತರದ ನೇರ ಗೇಮ್‌ಗಳ ಗೆಲುವು ಸಾಧಿಸಿದರು. 76 ನಿಮಿಷಗಳ ಕಾಲ ಇವರ ಹೋರಾಟ ಜಾರಿಯಲ್ಲಿತ್ತು.

Advertisement

ಇದು 2019ರಲ್ಲಿ ಚೀನದ ಟೆನಿಸ್‌ ಪಂದ್ಯಾವಳಿಗಳಲ್ಲಿ ಸಬಲೆಂಕಾಗೆ ಒಲಿದ 3ನೇ ಟೆನಿಸ್‌ ಪ್ರಶಸ್ತಿ. ಇದಕ್ಕೂ ಮೊದಲು ಶೆಂಜೆನ್‌ ಮತ್ತು ವುಹಾನ್‌ ಪಂದ್ಯಾವಳಿಗಳಲ್ಲೂ ಅವರು ಚಾಂಪಿಯನ್‌ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next