Advertisement

ಸಾರಾ ವಜ್ರ ರೆಡಿ ; ಅನುಪ್ರಭಾಕರ್‌ ನಟನೆಯ ಸಿನಿಮಾ

02:21 PM Jul 17, 2020 | mahesh |

ಖ್ಯಾತ ಸಾಹಿತಿ ಸಾರಾ ಅಬೂಬಕ್ಕರ್‌ ಅವರ ಕಾದಂಬರಿ ಆಧಾರಿತ ಸಾರಾ ವಜ್ರ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಇತ್ತೀಚೆಗೆ ಸಾರಾ ವಜ್ರ ಚಿತ್ರದ ಟ್ರೇಲರ್‌ ಲಹರಿ ಮ್ಯೂಸಿಕ್‌ ಮೂಲಕ ಬಿಡುಗಡೆಯಾಗಿದೆ. ಆರ್ನಾ ಸಾಧ್ಯ ನಿರ್ದೇಶನದ ಈ ಚಿತ್ರದ ಟ್ರೇಲರ್‌ ಬಗ್ಗೆ ನಟಿ ಪ್ರಿಯಾಂಕ ಉಪೇಂದ್ರ, ರೂಪಾ ಅಯ್ಯರ್‌, ನಿರ್ದೇಶಕ ಕೆ.ಎಂ.ಚೈತನ್ಯ ಸೇರಿದಂತೆ ಅನೇಕ ಗಣ್ಯರು ಮೆಚ್ಚುಗೆ ಮಾತುಗಳಾಡಿದ್ದಾರೆ.

Advertisement

ಅನು ಪ್ರಭಾಕರ್‌ ನಾಯಕಿಯಾಗಿ ನಟಿಸಿರುವ ಈ ಚಿತ್ರದ ಉಳಿದ ಪಾತ್ರಗಳಲ್ಲಿ ರೆಹಮಾನ್‌ ಹಾಸನ್‌, ರಮೇಶ್‌ ಭಟ್‌, ಶಂಖನಾದ ಅರವಿಂದ್‌,ಸುಧಾ ಬೆಳವಾಡಿ, ರಾಮಸ್ವಾಮಿ, ಪ್ರದೀಪ್‌ ಪೂಜಾರಿ, ವಿಭಾಸ್‌, ಸಾಯಿತೋಷಿತ್‌, ಅಂಕಿತ, ಆಯುಷ್‌ ಜಿ ಶೆಟ್ಟಿ ಮುಂತಾದವರಿದ್ದಾರೆ.

ಸಂಭ್ರಮ ಡ್ರೀಮ್‌ ಹೌಸ್‌ ಅರ್ಪಿಸುವ ಈ ಚಿತ್ರದ ನಿರ್ಮಾಪಕರು ದೇವೇಂದ್ರ ರೆಡ್ಡಿ ಹಾಗೂ ಸಂಭ್ರಮ ಡ್ರೀಮ್‌ ಹೌಸ್‌. ಪರಮೇಶ್‌ ಸಿ.ಎಂ ಛಾಯಾಗ್ರಹಣ, ವಿ.
ಮನೋಹರ್‌ ಸಂಗೀತ ನಿರ್ದೇಶನ ಹಾಗೂ ಅಕ್ಷಯ್‌ ಪಿ ರಾವ್‌ ಅವರ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ಬಿ.ಎಂ.ಹನೀಫ್ ಬರೆದಿದ್ದಾರೆ. ಚಿತ್ರದ ಬಗ್ಗೆ
ಮಾತನಾಡುವ ಸಂಗೀತ ನಿರ್ದೇಶಕ ವಿ. ಮನೋಹರ್‌, ಬಹಳ ವರ್ಷಗಳ ನಂತರ ಹಂಸಲೇಖ ಸರ್‌ ಸ್ಟುಡಿಯೋದಲ್ಲಿ ಲೈವ್‌ ರೆಕಾರ್ಡಿಂಗ್‌ ಮಾಡಿದೆವು. ಇದೊಂದು ಅವಿಸ್ಮರಣೀಯ ಅನುಭವ.ಅದೂ ಈ ಕೋವಿಡ್ ಭೂತದ ಭಯದ ನೆರಳಲ್ಲಿ. ರೆಕಾರ್ಡಿಂಗ್‌ ಮಾಡುವಾಗ ಮಾಸ್ಕ್ ಧರಿಸಿ ಅಂತರ ಕಾಪಾಡಿದ್ದೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next