ಹೊಸದಿಲ್ಲಿ : ದಿಲ್ಲಿಯ ರಾಷ್ಟ್ರಪತಿ ಭವನದಲ್ಲಿಂದು ನಡದ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮೂವರು ಸಾಧಕರಿಗೆ ಪದ್ಮವಿಭೂಷಣ, ಆರು ಮಂದಿಗೆ ಪದ್ಮಭೂಷಣ ಮತ್ತು 48 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನಿಸಿ ಗೌರವಿಸಿದರು.
ಸಾಲು ಮರದ ತಿಮ್ಮಕ್ಕ ಸೇರಿದಂತೆ 48 ಮಂದಿ ಪದ್ಮಶ್ರೀ ಪುರಸ್ಕಾರ ಪಡೆದರು. ಪ್ರಶಸ್ತಿ ಪುರಸ್ಕೃತ ವಿವರ ಹೀಗಿದೆ :
1. ಪದ್ಮ ವಿಭೂಷಣ ಪ್ರಶಸ್ತಿ : ಡಾ. ತೀಜನ್ ಭಾಯಿ, ಇಸ್ಮಾಯಿಲ್ ಓಮರ್ ಗೆಲೇಹ್, ಅನಿಲ್ ಕುಮಾರ್ ಮಣಿಭಾಯಿ ನಾಯಕ್
2. ಪದ್ಮ ಭೂಷಣ : ಮಹಾಶಯ ಧರ್ಮಪಾಲ್ ಗುಲಾಟಿ, ದರ್ಶನ್ ಲಾಲ್ ಜೈನ್, ಅಶೋಕ ಲಕ್ಷ್ಮಣರಾವ್ ಕುಕಡೆ, ಶಂಕರವಿಂಗಂ ನಂಬಿ ನಾರಾಯಣ್, ಬಚೇಂದ್ರಿ ಪಾಲ್, ವಿಜಯಕೃಷ್ಣನ್ ಶುಂಗ್‌ಲು.
3. ಪದ್ಮಶ್ರೀ : ಸಾಲುಮರದ ತಿಮ್ಮಕ್ಕ, ರಾಜೇಶ್ವರ ಆಚಾರ್ಯ, ಮನೋಜ್ ವಾಜಪೇಯಿ, ಉದ್ಧವ ಕುಮಾರ್ ಬರಾಲಿ, ಉಮೇಶ್ ಕುಮಾರ್ ಭಾರತಿ, ಪ್ರೀತಂ ಭರತವಾನ್, ಫ್ರೆಡ್ರಿಕ್ ಇರಾನಿ ಬ್ರುನಿಂಗ್, ಸಯ್ಯದ್ ಶಬ್ಬಿರ್, ಸ್ವಪನ್ ಚೌಧರಿ, ಕನ್ವಲ್ ಸಿಂಗ್ ಚೌಹಾಣ್ (ಸೇರಿದಂತೆ ಒಟ್ಟು 48 ಮಂದಿ).
ಮೊದಲ ಹಂತದಲ್ಲಿ ಮಾರ್ಚ್ 11ರಂದು 56 ಮಂದಿಗೆ ಪದ್ಮ ಪ್ರಶಸ್ತಿ ಪ್ರದಾನಿಸಲಾಗಿತ್ತು.
ಒಟ್ಟು 112 ಮಂದಿ ಪ್ರಶಸ್ತಿ ಪುರಸ್ಕೃತರಲ್ಲಿ 94 ಮಂದಿ ಪದ್ಮಶ್ರೀ, 14 ಮಂದಿಗೆ ಪದ್ಮ ಭೂಷಣ ಮತ್ತು ನಾಲ್ವರಿಗೆ ಪದ್ಮ ವಿಭೂಷಣ ಪ್ರಶಸ್ತಿ ದೊರಕಿದೆ. ಇವರಲ್ಲಿ 12 ಮಂದಿ ಮಹಿಳೆಯರು, 11 ವಿದೇಶೀಯರು/ಅನಿವಾಸಿ ಭಾರತೀಯರು ಸೇರಿದ್ದಾರೆ.