ಕೆ.ಆರ್.ನಗರ: ಮಹನೀಯರ ಪ್ರತಿಮೆಗಳನ್ನು ವಿವಾ ದಿತಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿ ಗುಂಪುಗಳ ನಡುವೆಘರ್ಷಣೆಗೆ ಅವಕಾಶ ಮಾಡಿಕೊಡಬಾರದು ಎಂದುಶಾಸಕ ಸಾ.ರಾ.ಮಹೇಶ್ ಹೇಳಿದರು.ಪಟ್ಟಣದಲ್ಲಿ ತಾಲೂಕು ಆಡಳಿತ, ತಾಪಂ, ಪುರಸಭೆ,ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಅಂಬೇಡ್ಕರ್‌ರ 130ನೇ ಜಯಂತಿಯಲ್ಲಿಮಾತನಾಡಿದರು.
ಅಂಬೇಡ್ಕರ್ ಅವರ ಜೀವನ ಮತ್ತುಅನುಭವದ ಪಾಠ ಜಗತ್ತಿಗೆ ಮಾದರಿ. ಅಂತಹ ಮಹನೀಯರ ಪ್ರತಿಮೆಯನ್ನು ದೇವಾಲಯದ ಒಳಗಡೆಪ್ರತಿಷ್ಠಾಪಿಸಿ ಪೂಜಿಸುವ ಕೆಲಸ ಮಾಡಬೇಕು ಎಂದರು.ಚುನಾವಣಾ ಆಯೋಗ ಯಾರ ಹಿಡಿತದಲ್ಲಿಯೂಇಲ್ಲ. ಆಯೋಗಕ್ಕಿಂತ ಸಾ.ರಾ.ಮಹೇಶ್ ದೊಡ್ಡವನಲ್ಲ.ತಾಲೂಕು ಕೇಂದ್ರವಾಗಿರುವ ಸಾಲಿಗ್ರಾಮ ಮುಂಬರುವದಿನಗಳಲ್ಲಿ ಪಪಂ ಆಗಿ ಪರಿವರ್ತನೆಯಾಗಲಿದೆ.
ಪ್ರಸಕ್ತಸಾಲಿಗ್ರಾಮಕ್ಕೆ ಸೇರಿರುವ ಮಿರ್ಲೆ ಜಿಪಂ ಕ್ಷೇತ್ರವಾಗಿಯೇಉಳಿಯುತ್ತದೆ. ಆ ಕ್ಷೇತ್ರದ ಜನತೆ ತಮ್ಮ ಕ್ಷೇತ್ರ ಕೈತಪ್ಪಿಹೋಗಿದೆ ಎಂದು ಆತಂಕಪಡುವ ಅಗತ್ಯವಿಲ್ಲ ಎಂದುಮಾಹಿತಿ ನೀಡಿದರು.ಜಿಪಂ ಸದಸ್ಯ ಅಚ್ಯುತಾನಂದ ಮಾತನಾಡಿ, ಅಂಬೇಡ್ಕರ್ ಕಂಡಿದ್ದ ಸಮಾನತೆ ಸಮಾಜ ನಿರ್ಮಾಣದ ಕನಸುನನಸು ಮಾಡಬೇಕಾದರೆ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆಶಿಸ್ತು ಕೊಡಿಸಬೇಕೆಂದರು.ತಹಶೀಲ್ದಾರ್ ಎಂ.ಮಂಜುಳಾ, ತಾಪಂ ಮಾಜಿ ಅಧ್ಯಕ್ಷಎಂ.ಎಚ್.ಸ್ವಾಮಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಸಾ.ಮಾ.ಯೋಗೀಶ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ರುದ್ರಮೂರ್ತಿ, ತಾಲೂಕು ಆದಿಜಾಂಬವ ಸಂಘದ ಅಧ್ಯಕ್ಷ ಎಂ.ಲೋಕೇಶ್, ಮುಖಂಡರಾದ ಹನಸೋಗೆನಾಗರಾಜು, ಡಿ.ಕೆ.ಕೊಪ್ಪಲುರಾಜಯ್ಯ,ಮಲ್ಲೇಶ್ ಮತ್ತಿತರರು ಮಾತನಾಡಿದರು.
ತಾಪಂ ಸದಸ್ಯಶ್ರೀನಿವಾಸಪ್ರಸಾದ್, ಮಾಜಿ ಸದಸ್ಯ ಎಂ.ತಮ್ಮಣ್ಣ, ಪುರಸಭೆಅಧ್ಯಕ್ಷ ಕೆ.ಜಿ.ಸುಬ್ರಹ್ಮಣ್ಯ, ಉಪಾಧ್ಯಕ್ಷೆ ಸೌಮ್ಯಾಲೋಕೇಶ್,ಮಾಜಿ ಅಧ್ಯಕ್ಷ ಡಿ.ಕಾಂತರಾಜು, ಸದಸ್ಯರಾದ ಕೆ.ಎಲ್.ಜಗದೀಶ್, ಮಂಜುಳಾಚಿಕ್ಕವೀರು, ಸಂತೋಷ್‌ಗೌಡ,ಸಾಲಿಗ್ರಾಮ ಗ್ರಾಪಂ ಅಧ್ಯಕ್ಷೆ ದೇವಿಕಾ, ಚುಂಚನಕಟ್ಟೆಶ್ರೀರಾಮ ಸರ್ವೀಸ್ ಸ್ಟೇಷನ್ ಮಾಲೀಕ ಮಾರ್ಚಹಳ್ಳಿಕಾಳಯ್ಯ, ಮುಖಂಡರಾದ ಗೀತಾಮಹೇಶ್, ನಾಗಣ್ಣ,ಕಾಳಯ್ಯ, ಆರಕ್ಷಕ ವೃತ್ತ ನಿರೀಕ್ಷಕ ಎಂ.ಆರ್.ಲವ, ಉಪನಿರೀಕ್ಷಕ ವಿ.ಚೇತನ್, ತಾಲೂಕು ಸಮಾಜ ಕಲ್ಯಾಣಇಲಾಖೆ ಸಹಾಯಕ ನಿರ್ದೇಶಕ ಅಶೋಕ್‌ಕುಮಾರ್,ಸಿಬ್ಬಂದಿಗಳಾದ ರತ್ನಮಾಲ, ಜಿ.ಬಿ.ಕೃಷ್ಣ, ವೆಂಕಟೇಶ್, ಸಿದ್ದರಾಜು, ರಾಜಯ್ಯ, ಪುರಸಭೆ ಮುಖ್ಯಾಧಿಕಾರಿ ಡಿ. ಪುಟ್ಟರಾಜು, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.