ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸದಸ್ಯ ರಾಗಲು ಬೇರೆ ಜಿಲ್ಲೆಯ ಪರಿಷತ್ ಸದಸ್ಯರು ವಾಸಸ್ಥಳ ದೃಢೀಕರಣಕ್ಕೆ ಮೈಸೂರು ವಿಳಾಸ ಕೊಡು ತ್ತಿದ್ದರು. ಈ ಮಟ್ಟಕ್ಕೆ ಇಲ್ಲಿಯ ಶಾಸಕರು ಲಾಬಿ ಮಾಡುತ್ತಾರೆ ಎಂದು ಶಾಸಕ ಹಾಗೂ ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಮೈಸೂರಿನಲ್ಲಿ ರವಿವಾರ ಮಾತನಾಡಿದ ಅವರು, “ಮುಡಾ ಇರುವುದು ಜನ ಸಾಮಾನ್ಯರ ಅಭಿವೃದ್ಧಿಗಾಗಿ. ಆದರೆ ಇಲ್ಲಿ ಆಗುತ್ತಿರು ವುದು ಏನು? ಈ ಬೋರ್ಡ್ ವ್ಯವಸ್ಥೆ ಬದಲಾಗಬೇಕು’ ಎಂದರು.
“ಸಮಿತಿಯಲ್ಲಿ ಶಾಸಕರ ನೇಮ ಕಾತಿಯನ್ನು ರದ್ದು ಮಾಡಲು ಚಿಂತನೆ ಮಾಡಿರುವ ಸಚಿವ ಮಹದೇವಪ್ಪ ಅವರ ನಡೆಯನ್ನು ಸ್ವಾಗತಿಸುತ್ತೇನೆ. ಈ ಮೂಲಕವಾದರೂ ಮುಡಾ ಸ್ವತ್ಛವಾಗಲಿ’ ಎಂದರು.
ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಈ ಅವ್ಯವ ಹಾರ ಗಮನಕ್ಕೆ ಬಂದಿತ್ತು. ಆಯುಕ್ತರು ಸಭೆ ಮಾಡದೆ ನಿವೇಶನಗಳನ್ನು ನೀಡಿದ್ದಾರೆ. 50:50 ಅನುಪಾತದಡಿ ನಿವೇಶನ ನೀಡುವಾಗ ಕೌನ್ಸಿಲ್ ಸಭೆಯಲ್ಲಿ ಚರ್ಚೆಗೆ ಇಡ ಬೇಕು. ಆದರೆ ಈ ನಿಯಮಗಳನ್ನು ಅಂದಿನ ಆಯುಕ್ತರು ಅನುಸರಿಸಿಲ್ಲ. ಹೀಗಾಗಿ ಅವರನ್ನು ಬದಲಾಯಿ ಸುವಂತೆ ಸೂಚಿಸಿದ್ದೆ.
ಆದರೆ ಜಾತಿಯ ಪ್ರಭಾವದಿಂದ ಅವರು ಉಳಿದುಕೊಂಡರು. ಕೋರ್ಟಿಗೂ ಹೋಗಿ ಅಧಿಕಾರವನ್ನು ಉಳಿಸಿಕೊಂಡರು. ಅವತ್ತೇ ಸರಿಯಾದ ಕ್ರಮ ಆಗಿದ್ದರೆ ಇವತ್ತು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿರಲ್ಲಿಲ್ಲ. ಈಗಲಾದರೂ ಈ ಬಗ್ಗೆ ತನಿಖೆಯನ್ನು ಮಾಡಲಿ. ವ್ಯವಸ್ಥೆ ಬದಲಾಗಲಿ ಎಂದು ಆಗ್ರಹಿಸಿದರು.
ಎಸ್‌ಟಿಎಸ್ ಸವಾಲು
ನನ್ನ ಹೆಸರಿನಲ್ಲಿ ಅಥವಾ ಬೇನಾಮಿ ಹೆಸರಿನಲ್ಲಿ ಒಂದೇ ಒಂದು ನಿವೇಶನ ಇದ್ದರೂ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಶಾಸಕ ಎಸ್. ಟಿ. ಸೋಮಶೇಖರ್ ಸವಾಲು ಹಾಕಿದರು.