ಶಿರಸಿ : ರೈತರ ಬಹು ಬೇಡಿಕೆಯ ಯಶಸ್ವಿನಿ ಯೋಜನೆಯನ್ನು ಹದಿನೈದು ದಿನದಲ್ಲಿ ಜಾರಿಗೆ ತರಲಾಗುತ್ತದೆ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ ಪ್ರಕಟಿಸಿದರು.
ಶಿರಸಿಯ ಹನ್ಮಂತಿಯಲ್ಲಿ ರಾಜ್ಯದ ಪ್ರಥಮ ಖಾಸಗಿ ಸರಕಾರಿ ಸಹಭಾಗಿತ್ವದಲ್ಲಿ ಕೆಎಂಏಫ್ ಹಾಗೂ ಧಾರವಾಡ ಹಾಲು ಒಕ್ಕೂಟ ಜಂಟಿಯಾಗಿ ಹಮ್ಮಿಕೊಂಡ ಶಿರಸಿ ಡೇರಿ, ಹಾಲು ಪ್ಯಾಕಿಂಗ್ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ಸರಕಾರದ ಆಯುಷ್ಮಾನ ಭಾರತ ಯೋಜನೆಗೆ ತೊಂದರೆ ಆಗದಂತೆ ಯಶಸ್ವಿನಿ ಅನುಷ್ಠಾನ ಮಾಡಲಾಗುತ್ತದೆ. ಹಿಂದಿದ್ದ ನಿಯಮದಲ್ಲಿ ಕೂಡ ಸರಳ ಮಾಡಲಾಗುತ್ತದೆ ಎಂದರು.
ರಾಜ್ಯದಲ್ಲಿ 27 ಸಾವಿರ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಒಂದೇ ಮಾದರಿಯ ಸಾಪ್ಟವೇರ ತರಬೇಕು ಎಂದು ಯೋಜಿಸಿ ಮುಂದಕ್ಕೆ ಹೋಗುತ್ತಿದ್ದೇವೆ. 266 ಕೋ. ರೂ. ಈ ತಂತ್ರಾಶ ಅಭಿವೃದ್ದಿ ಮಾಡಲಾಗುತ್ತದೆ. ಕೇಂದ್ರ ಶೇ. 60, ರಾಜ್ಯ ಸರಕಾರ ಶೇ. 20, ಶೇ.10 ಅಫೆಕ್ಸ, ಉಳಿದ ಶೇ. 10 ಡಿಸಿಸಿ ಕೊಡುತ್ತದೆ. ಇದರಿಂದ ಸಾಲಮನ್ನಾ ದುರ್ಬಳಕೆ ತಪ್ಪಿಸಲು ಇದು ನೆರವಾಗುತ್ತದೆ ಎಂದ ಅವರು, ಒಂದೇ ಸಾಪ್ಟವೇರ್ ಅನುಷ್ಟಾನಕ್ಕೆ ತೀರ್ಮಾನ ಚಾಚೂ ತಪ್ಪದೇ ಮಾಡುತ್ತೇವೆ ಎಂದರು. ನಂದಿನಿ ಕ್ಷೀರ ಸಮೃದ್ದಿ ಬ್ಯಾಂಕ್ ಡಿಸಿಸಿ ಬ್ಯಾಂಕ್ ಗಳಿಗೆ ಸಮಸ್ಯೆ ಆಗುವದಿಲ್ಲ.
ಸ್ಪೀಕರ್ ವಿಶ್ವೇಶ್ವರ ಹೆಗಡೆ, ಸಚಿವ ಶಿವರಾಮ ಹೆಬ್ಬಾರ, ಒಕ್ಕೂಟ ಅಧ್ಯಕ್ಷ ಶಂಕರ ಮುಗದ, ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಎಂಡಿ ಲೋಹಿತೇಶ್ವರ, ಕೆಎಂಏಪ್ ವ್ಯವಸ್ಥಾಪಕ ಬಿ.ಸಿ.ಸತೀಶ ಇತರರು ಇದ್ದರು.
ಇದನ್ನೂ ಓದಿ : ಈಶ್ವರಪ್ಪ ಒಬ್ಬ ದೇಶದ್ರೋಹಿ,ರಾಷ್ಟ್ರಧ್ವಜ ದ್ರೋಹಿ; ಅವರಿಗೆಲ್ಲಾ ಪ್ರತಿಕ್ರಿಯಿಸಲ್ಲ: ಡಿಕೆಶಿ