Advertisement

ಕಾನೂನು ಸುವ್ಯವಸ್ಥೆ ಭಂಗತರುವವರ ವಿರುದ್ದ ಕಠಿಣ ಕ್ರಮ : ಎಸ್.ಪಿ.ಚೇತನ್ ಎಚ್ಚರಿಕೆ

08:59 PM Feb 16, 2022 | Team Udayavani |

ಹುಣಸೂರು : ಹುಣಸೂರು ತಾಲೂಕಾದ್ಯಂತ ಕಾಲೇಜುಗಳು ಎಂದಿನಂತೆ ಆರಂಭಗೊಂಡಿದ್ದು, ಯಾವುದೇ ಹಿಜಾಬ್ ಗೊಂದಲ ಕಂಡುಬರಲಿಲ್ಲ. ಸೂಕ್ಷ್ಮ ತಾಲೂಕೆಂಬ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಆರ್.ಚೇತನ್ ಬೆಳಗ್ಗೆಯಿಂದಲೇ ಮೊಕ್ಕಾಂ ಹೂಡಿ ವಿವಿಧೆಡೆ ಸಂಚರಿಸಿ ಪರಿಸ್ಥಿತಿ ಅವಲೋಕಿಸಿದರು.

Advertisement

ಮುಂಜಾಗ್ರತೆಯಾಗಿ ಬೆಳಗ್ಗೆಯಿಂದಲೇ ಎಲ್ಲಾ ಪಿಯು ಹಾಗೂ ಪ್ರಥಮದರ್ಜೆ ಕಾಲೇಜುಗಳಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಎಸ್.ಪಿ.ಯವರು ಸ್ವತಃ ಎಲ್ಲೆಡೆ ಭೇಟಿ ಇತ್ತು. ಭದ್ರತೆ ಬಗ್ಗೆ ವೀಕ್ಷಿಸಿದರು. ಮುನ್ನೆಚ್ಚರಿಕೆಯಾಗಿ ಎಲ್ಲಡೆಯಿಂದ ಮಾಹಿತಿ ಪಡೆದುಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈಗಾಗಲೆ ಎಲ್ಲಾ ಠಾಣೆಗಳಲ್ಲೂ ಮುಖಂಡರ ಸಭೆ ನಡೆಸಿ ಮನವರಿಕೆ ಮಾಡಿಕೊಡಲಾಗಿದೆ. ನ್ಯಾಯಾಲಯದ ತೀರ್ಪಿನಂತೆ ನಡೆದುಕೊಳ್ಳುವ ಭರವಸೆ ಇತ್ತಿದ್ದಾರೆಂದು ಎಸ್.ಪಿ.ತಿಳಿಸಿದರು.
ಜಿಲ್ಲಾಡಳಿತವು ಜಿಲ್ಲೆಯ ಎಲ್ಲ ತಾಲೂಕುಗಳ ಕಾಲೇಜುಗಳ ಸುತ್ತ 200 ಮೀಟರ್‌ನಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಆವರಣದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು, ಪೋಷಕರಿಗೆ ಮಾತ್ರ ಅವಕಾಶವಿರಲಿದೆ. ಬೇರೆಯವರು ಅನಾವಶ್ಯಕವಾಗಿ ಗುಂಪುಸೇರುವುದು, ಶಾಂತಿ ಭಂಗ ಉಂಟುಮಾಡುವವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದೆಂದರು. ಈ ವೇಳೆ ಡಿವೈಎಸ್‌ಪಿ ರವಿಪ್ರಸಾದ್ ಜೊತೆಗಿದ್ದರು.

ಭದ್ರತೆಗಾಗಿ ಸ್ಥಳೀಯ ಪೊಲೀಸರು ಹಾಗೂ ಗೃಹರಕ್ಷಕದಳದ ಸಿಬ್ಬಂದಿಗಳು, ತಲಾ ಒಂದು ಡಿಎಆರ್ ಹಾಗೂ ಕೆಎಸ್.ಆರ್.ಪಿ ತುಕಡಿಗಳನ್ನು ನಿಯೋಜಿಸಲಾಗಿದೆ.

ನಗರದ ಸರಕಾರಿ ಪಿಯು ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಕೊಠಡಿಯಲ್ಲಿ ಹಿಜಾಬ್ ಹಾಕಿಕೊಂಡಿದ್ದರು. ಪ್ರಾಚಾರ್ಯರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟ ನಂತರ ಹಿಜಾಬ್ ತೆಗೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next