Advertisement

ಹೋರಾಟವೇ ಜೀವನದ ಮಂತ್ರ; ಎಸ್‌. ಎಂ.ಕೃಷ್ಣ

12:59 AM Feb 25, 2023 | Team Udayavani |

ನಾಲ್ಕು ದಶಕಗಳ ಸುದೀರ್ಘ‌ ರಾಜಕೀಯ ಜೀವನದಲ್ಲಿ ಹಲವು-ಏಳು ಬೀಳು ಕಂಡು ರೈತಾಪಿ ವರ್ಗದ ಪರವಾಗಿ ಅಹರ್ನಿಶಿ ಹೋರಾಟ ನಡೆಸಿದ ತಾವು ಚುನಾವಣ ರಾಜಕೀಯದಿಂದ ದೂರ ಸರಿದು ಯುವ ಸಮೂಹಕ್ಕೆ ಮಾರ್ಗದರ್ಶಕರಾಗಲು ನಿಶ್ಚಯಿಸಿರುವ ತಮ್ಮ ನಿರ್ಧಾರ ಸ್ವಾಗತಿಸುತ್ತೇನೆ.

Advertisement

1983 ರಿಂದ ಶಾಸನ ಸಭೆಯ ಸದಸ್ಯರಾಗಿ ಆಯ್ಕೆಯಾಗಿ ತಮ್ಮ ಸಿದ್ಧಾಂತಕ್ಕೆ ಬದ್ಧರಾಗಿ ಹಗಲಿರುಳು ಹೋರಾಡಿ ಬಿಜೆಪಿ ಪಕ್ಷವನ್ನು ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ತರುವಲ್ಲಿ ತಮ್ಮ ಪಾತ್ರ ಹಿರಿದಾದುದು. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಪ್ರತೀ ಹಂತದಲ್ಲೂ ಹೋರಾಟವೇ ನಿಮ್ಮ ಜೀವನದ ಮಂತ್ರವಾಗಿಸಿಕೊಂಡು ರಾಜ್ಯದ ಎಲ್ಲ ಸಮುದಾಯದ ಏಳಿಗೆಗೆ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದು ಜನಸಾಮಾನ್ಯರಲ್ಲಿ ಅಜರಾಮರರಾಗಿದ್ದೀರಿ. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎನ್ನುವ ಮಟ್ಟಿಗೆ ನಿಮ್ಮಧ್ವನಿ ವಿಧಾನಸೌಧದಲ್ಲಿ ಮೊಳಗಿದೆ. ನಾವಿಬ್ಬರೂ ಒಂದೇ ಜಿಲ್ಲೆಯಿಂದ ಬಂದವರಾದರೂ ತಾವು ಶಿಕಾರಿಪುರವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡು ರಾಜ್ಯದ ಸರ್ವವ್ಯಾಪಿ ಸಂಚರಿಸಿ ಪಕ್ಷವನ್ನು ಅಧಿಕಾರಕ್ಕೆ ಏರಿಸಿ ಜನನಾಯಕರಾಗಿ ರೂಪುಗೊಂಡು ಹಲವು ಯುವನಾಯಕರನ್ನು ಸೃಷ್ಟಿಸಿ ಯಶಸ್ವಿ ನಾಯಕರಾಗಿ ಸಾರ್ವಜನಿಕ ಜೀವನ ನಡೆಸಿ ಇಂದು ಚುನಾವಣ ರಾಜಕೀಯದಿಂದ ವಿರಮಿಸುತ್ತಿರುವ ತಮಗೆ ಭಗವಂತ ಆಯಸ್ಸು ಆರೋಗ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
(ಯಡಿಯೂರಪ್ಪ ಅವರಿಗೆ ಬರೆದ ಪತ್ರ)

-ಎಸ್‌. ಎಂ.ಕೃಷ್ಣ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next