Advertisement

ಸರಪನಹಳ್ಳಿ ಗ್ರಾ.ಪಂಚಾಯತಿಯಿಂದ ಉಪ ಸಭಾಪತಿಯವರೆಗೆ.. ಎಸ್.ಎಲ್. ಧರ್ಮೇಗೌಡ ರಾಜಕೀಯ ಹಾದಿ

09:47 AM Dec 29, 2020 | keerthan |

ಚಿಕ್ಕಮಗಳೂರು: ಸೋಮವಾರ ಮಧ್ಯರಾತ್ರಿ ರೈಲು ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ವಿಧಾನ ಪರಿಷತ್ ಉಪಸಭಾಪತಿ, ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಎಸ.ಎಲ್.ಧರ್ಮೇಗೌಡ ಅವರ ಹಠಾತ್ ನಿಧನದ ಸುದ್ದಿ ಜಿಲ್ಲೆ ಹಾಗೂ ರಾಜ್ಯ ರಾಜಕೀಯ ವಲಯವನ್ನು ಕಂಗೆಡಿಸಿದೆ.

Advertisement

ಎಸ್.ಎಲ್.ಧರ್ಮೇಗೌಡ ಅವರು ಜೆಡಿಎಸ್ ಪಕ್ಷದ ನಿಷ್ಟಾವಂತ ಮುಖಂಡನಾಗಿದ್ದರು, ರಾಜಕೀಯವಾಗಿ ಎಲ್ಲ ಪಕ್ಷದ ಮುಖಂಡರ ಒಡನಾಡಿಯಾಗಿದ್ದರು.

ದಿ.ಲಕ್ಷ್ಮಯ್ಯ, ಕೃಷ್ಣಮ್ಮ ದಂಪತಿ ಹಿರಿಯ ಮಗನಾಗಿ ಕಡೂರು ತಾಲ್ಲೂಕು ಸಖರಾಯಪಟ್ಟಣ ಹೋಬಳಿ ಸರಪನಹಳ್ಳಿ ಗ್ರಾಮದಲ್ಲಿ 1956 ರಲ್ಲಿ ಜನಿಸಿದ ಧರ್ಮೇಗೌಡರ ತಂದೆ ಲಕ್ಷ್ಮಯ್ಯ ಶಾಸಕರಾಗಿದ್ದರು. ಆಗಿನ ಜನತಾ ಪಕ್ಷದ ಕಾರ್ಯಕರ್ತರಾಗಿ ರಾಜಕೀಯ ರಂಗವನ್ನು ಪ್ರವೇಶಿಸಿದರು.

ಇದನ್ನೂ ಓದಿ:ಚಿಕ್ಕಮಗಳೂರು: ವಿಧಾನಪರಿಷತ್ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ

1985ರಲ್ಲಿ ಸರಪನಹಳ್ಳಿ ಗ್ರಾ.ಪಂ ಚುನಾವಣೆ ಎದುರಿಸಿದ ಎಸ್.ಎಲ್.ಧರ್ಮೇಗೌಡರು ಪಂಚಾಯತ್ ಸದಸ್ಯಯರಾಗಿ ಆಯ್ಕೆಯಾದರು. ಪಂಚಾಯತ್ ಸದಸ್ಯರಾಗಿ ಜನರ ಪ್ರೀತಿಗಳಿಸಿದ ಅವರನ್ನು ಕ್ಷೇತ್ರದ ಜನರು ಜಿಲ್ಲಾ ಪಂಚಾಯತ್ ಎರಡು ಬಾರಿ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದರು. ಇದೇ ವೇಳೆ ಸಹಕಾರಿ ಕ್ಷೇತ್ರದಲ್ಲೂ ಛಾಪು ಮಾಡಿಸಲು ಆರಂಭಿಸಿದ ಧರ್ಮೇಗೌಡ, ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

Advertisement

ಬಳಿಕ ಜಿಲ್ಲಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾಗಿಯೂ ಅವರು ಜಿಲ್ಲೆಯ ರೈತರ ಪರ ಕಾರ್ಯ ನಿರ್ವಹಿಸಿದ್ದರು. ಇವರ ಅವಧಿಯಲ್ಲಿ ಡಿಸಿಸಿ ಬ್ಯಾಂಕ್ ಉನ್ನತ ಶ್ರೇಣಿ ಸ್ಥಾನ ಪಡೆದುಕೊಂಡಿತು. ಇವರ ಸೇವಾ ಕಾರ್ಯ ಪರಿಗಣಿಸಿ ಸಹಕಾರಿ ಕ್ಷೇತ್ರದಿಂದ ಸಹಕಾರಿ ರತ್ನ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಇದನ್ನೂ ಓದಿ: ಆತ್ಮಹತ್ಯೆಗೆ ಮುನ್ನ ರೈಲು ಬರುವ ಸಮಯದ ಬಗ್ಗೆ ಮಾಹಿತಿ ಪಡೆದಿದ್ದ ಧರ್ಮೇಗೌಡರು!

ತಮ್ಮ ತಂದೆ ಸ್ಫರ್ಧಿಸಿ ಎರಡು ಬಾರಿ ಜನತಾ ಪಕ್ಷದಿಂದ ಶಾಸಕರಾಗಿ ಬೀರೂರು ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವದಿಯಲ್ಲಿ ಧರ್ಮೇಗೌಡ ಅವರು ದೇವೇಗೌಡ ಹಾಗೂ ಎಚ್.ಡಿ ಕುಮಾರಸ್ವಾಮಿ ಕುಟುಂಬಕ್ಕೆ ಹತ್ತಿರವಾಗಿದ್ದರು. ಇದು ಧರ್ಮೇಗೌಡ ಬೀರೂರು ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಸ್ಫರ್ಧಿಸಲು ನೆರವಾಯಿತು.

2004ರಲ್ಲಿ ಜೆಡಿಎಸ್ ಪಕ್ಷದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ ಅವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಅದೇ ಕ್ಷೇತ್ರದಿಂದ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿದ್ದ ಅವರು ಸೋಲು ಕಂಡಿದ್ದರು.

ನಂತರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿಯೇ ಸಹಕಾರಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರಿಗೆ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಸಿಎಂ ಕುಮಾರಸ್ವಾಮಿ ಧರ್ಮೇಗೌಡ ಅವರ ಕುಟುಂಬದವರ ಮೇಲಿದ್ದ ಪ್ರೀತಿ, ಅಭಿಮಾನದಿಂದಾಗಿ ಧರ್ಮೇಗೌಡ ಹಾಗೂ ಅವರ ಸಹೋದರ ಎಸ್.ಎಲ್. ಬೋಜೆಗೌಡ ಅವರನ್ನು ರಾಜ್ಯ ರಾಜಕಾರಣಕ್ಕೆ ಕರೆ ತರಲು ನಿರ್ದರಿಸಿದ್ದರು. ಅದರಂತೆ ಧರ್ಮೇಗೌಡ ಅವರನ್ನು ವಿದಾನಪರಿಷತ್ ಗೆ ಅವಿರೋಧವಾಗಿ ಆಯ್ಕೆ ಮಾಡಿ, ಬೋಜೆಗೌಡ ಅವರಿಗೆ ನೈರುತ್ಯ ಶಿಕ್ಷಕರ ಕ್ಷೆತ್ರದಿಂದ ಚುನಾವಣೆಗೆ ನಿಲ್ಲಿಸಿ ವಿಧಾನಪರಿಷತ್ ಗೆ ಆಯ್ಕೆ ಮಾಡಿಸಿದ್ದರು.

ಇದನ್ನೂ ಓದಿ: ‘ನಿರೀಕ್ಷೆ ಮಾಡಿರಲಿಲ್ಲ..’ ಧರ್ಮೇಗೌಡ ನಿಧನದ ಬಗ್ಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಹೇಳಿಕೆ

ಸಮ್ಮಿಶ್ರ ಸರಕಾರದ ಅವಧಿಯಲ್ಲಿ ವಿಧಾನ ಪರಿಷತ್ ಉಪಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದ ಅವರು ಕುಮಾರಸ್ವಾಮಿ ಸರಕಾರದ ನಂತರ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರಕಾರದ ಅವಧಿಯಲ್ಲೂ ಉಪಸಭಾಪತಿಯಾಗಿ ಮುಂದುವರಿದಿದ್ದರು. ಸಿಎಂ ಯಡಿಯೂರಪ್ಪ ಸೇರಿದಂತೆ ಎಲ್ಲ ಸಚಿವರೊಂದಿಗೂ ಆಪ್ತರಾಗಿದ್ದರು.

ವಿಧಾನ ಪರಿಷತ್ ನಲ್ಲಿ ಇತ್ತೀಚೆಗೆ ನಡೆದ ಗಲಾಟೆ ವಿಚಾರ ಸಂಬಂಧ ಅಘಾತಕ್ಕೊಳಗಾಗಿದ್ದ ಅವರು ತೀವ್ರ ನೊಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next