ಮೊಬೈಲ್ ಆ್ಯಪ್‌ಗೆ ಅಪ್‌ಲೋಡ್ ಮಾಡಿ ಕೃತಿ ಸ್ವಾಮ್ಯದ ಹಕ್ಕು ಉಲ್ಲಂಘನೆ ಮಾಡಿದ್ದ ವ್ಯಕ್ತಿಯನ್ನು ನಗರ ಪೊಲೀಸರು
ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
Advertisement
ಭೈರಪ್ಪ ಅವರು 2017ರಲ್ಲಿ ಬರೆದಿರುವ “ಉತ್ತರಕಾಂಡ’ ಕಾದಂಬರಿಯ 330 ಪುಟಗಳನ್ನೂ ಮೊಬೈಲ್‌ನಲ್ಲಿ ಫೋಟೋ ತೆಗೆದು ಅದನ್ನು ಕನ್ನಡ ಮೊಬೈಲ್ ಆ್ಯಪ್‌ಗೆ ಅಪ್ ಲೋಡ್ ಮಾಡಲಾಗಿತ್ತು. ಈ ವಿಷಯ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಭೈರಪ್ಪ ಅವರು ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಕೃತಿ ಸ್ವಾಮ್ಯದ ಹಕ್ಕು ಉಲ್ಲಂಘನೆ ಮತ್ತು ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು, ಸಿಸಿಬಿ ಇನ್ಸ್‌ಪೆಕ್ಟರ್ ಸಂದೇಶ್ ಕುಮಾರ್ ನೇತೃತ್ವದಲ್ಲಿ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆರೋಪಿ ದಾವಣಗೆರೆ ಮೂಲದ ಯುವಕನನ್ನು ಪತ್ತೆ ಮಾಡಿ, ಆತನಿಂದ ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಷರತ್ತು ವಿಧಿಸಿ ಪೊಲೀಸರು ಯುವಕನನ್ನು ಬಿಡುಗಡೆ ಮಾಡಿದ್ದಾರೆ