Advertisement

ಪ್ರಮೀಳಾ ಭೇಟಿಗೆ ನಕಾರ

11:26 PM Dec 20, 2019 | mahesh |

ವಾಷಿಂಗ್ಟನ್‌: ಕಾಶ್ಮೀರದಲ್ಲಿ ಹೇರಲಾಗಿರುವ ನಿಷೇಧಾತ್ಮಕ ಕ್ರಮಗಳನ್ನು ಹಿಂಪಡೆಯಬೇಕು ಎಂದು ಅಮೆರಿಕದ ಸಂಸತ್‌ನಲ್ಲಿ ಗೊತ್ತುವಳಿ ಮಂಡಿಸಿದ ಸಂಸದೆ, ಭಾರತೀಯ ಮೂಲದ ಪ್ರಮೀಳಾ ಜಯಪಾಲ್‌ ಭೇಟಿಯಾಗಲು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ನಿರಾಕರಿಸಿದ್ದಾರೆ. 2ನೇ ಆವೃತ್ತಿಯ 2+2 ಮಾತುಕತೆ ಬಳಿಕ ಭಾರತದ ಪತ್ರಕರ್ತರ ಜತೆಗೆ ಮಾತನಾಡಿದ ಜೈಶಂಕರ್‌, ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್ ನಲ್ಲಿ ಮಂಡಿಸಲಾದ ಗೊತ್ತುವಳಿಯ ಬಗ್ಗೆ ಮಾಹಿತಿ ಇದೆ. ಇದು ಸೂಕ್ತ ಕ್ರಮವಲ್ಲ ಎಂದು ಹೇಳಿದ್ದಾರೆ. ಪ್ರಮೀಳಾ ಜಯಪಾಲ್‌ ನೇತೃತ್ವದ ಸಂಸತ್‌ ನಿಯೋಗವನ್ನು ಭೇಟಿ ಮಾಡುವುದಕ್ಕೆ ನಾನು ಉತ್ಸಾಹವನ್ನೂ ಹೊಂದಿಲ್ಲ ಎಂದು ಹೇಳಿದ್ದಾರೆ.

Advertisement

ಸಂಕ್ಷಿಪ್ತ ವಿವರಣೆ: ಸದ್ಯ ವಿವಾದಕ್ಕೆ ಸಿಲುಕಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಕೇಂದ್ರ ಸರಕಾರ ಹೊಂದಿರುವ ನಿಲುವನ್ನು ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪೊಂಪೊ ಜತೆಗಿನ ಮಾತುಕತೆ ವೇಳೆ ಸಂಕ್ಷಿಪ್ತವಾಗಿ ಪ್ರಸ್ತಾಪಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಬಗ್ಗೆ ಕೂಡ ಪ್ರಸ್ತಾಪಿಸಿ, ಚರ್ಚಿಸಲಾಗಿದೆ ಎಂದರು. ಈ ಹಂತದಲ್ಲಿ ವಶಕ್ಕೆ ಪಡೆಯಲಾಗಿದ್ದ ಕೆಲವರ ಬಿಡುಗಡೆಯನ್ನು ಮತ್ತು ಹೇರಲಾಗಿದ್ದ ನಿಷೇಧಾತ್ಮಕ ಕ್ರಮಗಳನ್ನು ಹಿಂಪಡೆದಿ ರುವುದನ್ನು ಅಮೆರಿಕ ಸ್ವಾಗತಿಸಿದೆ ಎಂದರು.

ಇದೇ ವೇಳೆ ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪರಿಣತರಿಗೆ ಅನಾನುಕೂಲವಾಗುವ ರೀತಿಯಲ್ಲಿ ಎಚ್‌-1ಬಿ ವೀಸಾ ನಿಯಮ ತರಬಾರದು. ಈ ಮೂಲಕ ಪ್ರತಿಭಾವಂತರ ಹರಿವು ಅಮೆರಿಕ್ಕೆ ಬರುವುದರ ಮೇಲೆ ನಿಯಂತ್ರಣ ಹೇರಬಾರದು ಎಂದು ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next