Advertisement

ಸುಬ್ರಹ್ಮಣ್ಯ/ಕಾರ್ಕಳ : “ಕೊಲ್ಲ ಮೊಗ್ರು, ಕಲ್ಮಕಾರು: ಹರಿಯಲಿ ಪ್ರಗತಿ ನೀರು’ ಮತ್ತು “ಅಭಿವೃದ್ಧಿಯ ದಡ ತಲುಪಿಸುವವರು ಬೇಕಾಗಿದ್ದಾರೆ’ ಎಂಬ ಶೀರ್ಷಿಕೆಯಡಿ ಈ ಎರಡು ಹಳ್ಳಿಗಳ ಜನರ ಸಂಕಷ್ಟದ ಬದುಕಿನ ಚಿತ್ರಣವನ್ನು ತೆರೆದಿಟ್ಟ ಬುಧವಾರದ ಉದಯವಾಣಿಯ ಗ್ರಾಮ ಭಾರತ ಸರಣಿಗೆ ಜನರಿಂದ ಉತ್ತಮ ಬೆಂಬಲ ಹಾಗೂ ಅಭಿಪ್ರಾಯ ವ್ಯಕ್ತವಾಗಿದೆ.

Advertisement

ಇಡೀ ಗ್ರಾಮದ ಚಿತ್ರಣವನ್ನು ತೆರೆದಿಟ್ಟಿರುವ ಪತ್ರಿಕೆಯ ಪ್ರಯತ್ನಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಬಹುದು ಎನ್ನುವ ಆಶಯ ಜನರಲ್ಲಿ ಮೂಡಿದೆ. ಪೂರಕವಾಗಿ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆಗಳ ನಿವಾರಣೆಗೆ ಗರಿಷ್ಠ ಪ್ರಯತ್ನ ನಡೆಸುವ ಬಗ್ಗೆ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ವಿಶೇಷ ಸಭೆ ಕರೆಯುವೆ
ಅಧಿಕಾರಿಗಳ ಕಣ್ತೆರೆಸುವ ವರದಿ ಇದು. ಸಾರ್ವಜನಿಕರ ಸಮಸ್ಯೆಗಳನ್ನು ಅರಿತು ಪೂರಕವಾಗಿ ಸ್ಪಂದಿಸಲು ಇದರಿಂದ ಅನುಕೂಲವಾಗುತ್ತದೆ. ವರದಿಯಲ್ಲಿ ಉಲ್ಲೇಖೀಸಿದಂತೆ ಎರಡೂ ಗ್ರಾಮಗಳ ಸಮಸ್ಯೆಗಳ ಕುರಿತು ವರದಿಯನ್ನು ಗ್ರಾಮ ಪಂಚಾಯತ್‌ನಿಂದ ತರಿಸಿಕೊಳ್ಳುವೆ. ಈಗ ಕೋವಿಡ್‌ ಒತ್ತಡಗಳು ಹೆಚ್ಚಿರುವುದರಿಂದ ಪರಿಸ್ಥಿತಿ ಸ್ವಲ್ಪ ನಿಯಂತ್ರಣಕ್ಕೆ ಬಂದ ಕೂಡಲೇ ಅಲ್ಲಿಯೇ ವಿಶೇಷ ಸಭೆ ನಡೆಸಿ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸುತ್ತೇನೆ.

-ಅನಿತಾಲಕ್ಷ್ಮೀ, ತಹಶೀಲ್ದಾರ್‌ ಸುಳ್ಯ

ಇಲಾಖೆಗಳ ಬೆನ್ನುಹಿಡಿದು ಕೆಲಸ
ಶೆಟ್ಟಿಕಟ್ಟ ಸೇತುವೆ ಸಂಬಂಧ ಪಂಚಾಯತ್‌ ಕಡೆಯಿಂದ ಸಮಾಜ ಕಲ್ಯಾಣ ಇಲಾಖೆಗೆ ಈಗಾಗಲೇ ಮನವಿ ಮಾಡಿದ್ದೇವೆ. ಆ ಭಾಗದಲ್ಲಿ ಪರಿಶಿಷ್ಟ ಜಾತಿ-ಪಂಗಡದ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಅವರ ಸಂಕಷ್ಟಗಳ ನಿವಾರಣೆಗಾಗಿ ಮತ್ತೂಮ್ಮೆ ಸಂಬಂಧಿಸಿದ ಇಲಾಖೆಗೆ ಪಂಚಾಯತ್‌ ಕಡೆಯಿಂದ ಪತ್ರ ಬರೆದು ಜ್ಞಾಪಿಸುತ್ತೇವೆ. ವರದಿಯಲ್ಲಿರುವ ಸಮಸ್ಯೆ, ಬೇಡಿಕೆಗಳನ್ನು ಆಯಾ ಇಲಾಖೆಗಳಿಗೆ ನೆನಪಿಸುವ ಮತ್ತು ಅಗತ್ಯ ಬಿದ್ದರೆ ಮತ್ತೂಂದು ಬಾರಿ ಪ್ರಸ್ತಾವನೆ ಸಲ್ಲಿಸುವ ಕೆಲಸವನ್ನು ಪಂಚಾಯತ್‌ ವತಿಯಿಂದ ಮಾಡುತ್ತೇವೆ.
– ರವಿಚಂದ್ರ, ಕೊಲ್ಲಮೊಗ್ರು ಪಿಡಿಒ

Advertisement

ಗ್ರಾಮಗಳ ಅಭಿವೃದ್ಧಿಗೆ ಸಮಷ್ಠಿ ಯತ್ನ
ವರದಿಯಲ್ಲಿನ ಎಲ್ಲ ಅಂಶಗಳು ಸಾರ್ವಜನಿಕ ಸಮಸ್ಯೆಗಳೇ ಆಗಿವೆ. ಕೆಲವೊಂದು ಪ್ರಸ್ತಾವೆನೆಗಳು ಈಗಾಗಲೇ ಸಲ್ಲಿಸಲ್ಪಟ್ಟಿವೆ. ನಾವು 8 ಮಂದಿ ಸದಸ್ಯರೂ ಸೇರಿಕೊಂಡು ಈ ಎಲ್ಲ ಸಮಸ್ಯೆಗಳನ್ನು ಪರಿಸಹರಿಸುವ ನಿಟ್ಟಿನಲ್ಲಿ ಮಂದೆ ಏನು ಮಾಡಬಹುದೆಂದು ಚರ್ಚಿಸುತ್ತೇವೆ.
– ಜಯಶ್ರೀ ಎಸ್‌. ಚಾಂತಾಳ, ಉಪಾಧ್ಯಕ್ಷೆ, ಕೊಲ್ಲಮೊಗ್ರು ಗ್ರಾ.ಪಂ.

ಗ್ರಾಮಗಳ ಅಭಿವೃದ್ಧಿ ನಿಟ್ಟಿನಲ್ಲಿ ಉದಯವಾಣಿಯ ಅತ್ಯುತ್ತಮ ಪ್ರಯತ್ನ ಇದು. ಪತ್ರಿಕೆಯ ಕಾಳಜಿ ಶ್ಲಾಘನೀಯ. ಸಮಸ್ಯೆಗಳ ಪರಿಹಾರಕ್ಕೆ ನಮಗೂ ಪ್ರೇರಣೆ ನೀಡಿದೆ. ನಾವು ಪರಿಹಾರಕ್ಕೆ ಪ್ರಯತ್ನ ಮುಂದುವರಿಸುತ್ತೇವೆ.

– ಮಾಧವ ಚಾಂತಾಳ, ಗ್ರಾ.ಪಂ. ಸದಸ್ಯ

ಅಭಿವೃದ್ಧಿಯ ನಿರೀಕ್ಷೆಯಲ್ಲಿ ಗ್ರಾಮಸ್ಥರು
ಉಭಯ ಗ್ರಾಮಗಳ ಸಮಸ್ಯೆಗಳ ಬಗ್ಗೆ ಬೆಳಕುಚೆಲ್ಲಿರುವ ಉದಯವಾಣಿ ವರದಿಗೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದು, ವರದಿಯನ್ನು ತಮ್ಮ ಮೊಬೈಲ್‌ಗ‌ಳ ಸ್ಟೇಟಸ್‌ಗಳಲ್ಲಿ ಹಾಕಿಕೊಳ್ಳುವ ಮೂಲಕ ಗ್ರಾಮ ಭಾರತ ಕಲ್ಪನೆಯ ಆಶಯಕ್ಕೆ ಬೆಂಬಲ ಸೂಚಿಸಿದ್ದಾರೆ. “ಅಭ್ಯುದಯವಾಗಲಿ ನಮ್ಮ ಹಳ್ಳಿಗಳು’ ಎಂಬ ಪತ್ರಿಕೆಯ ಆಶಯದಂತೆ ನಮ್ಮ ಗ್ರಾಮಗಳೂ ಶೀಘ್ರದಲ್ಲೇ ಅಭಿವೃದ್ಧಿಯಾದಾವು ಎಂಬ ನಿರೀಕ್ಷೆಯಲ್ಲಿ ಗ್ರಾಮಸ್ಥರಿದ್ದಾರೆ.

ಹಂತಹಂತವಾಗಿ ಅಭಿವೃದ್ಧಿ
ಸುಳ್ಯ ವಿಧಾನಸಭಾ ಕ್ಷೇತ್ರ ವಿಸ್ತಾರವಾಗಿದ್ದು, ಗುಡ್ಡಗಾಡುಗಳಿಂದ ಕೂಡಿದ ಭೂಪ್ರದೇಶ. ತೋಡುಗಳು ಇಲ್ಲದ ಗ್ರಾಮಗಳೇ ಇಲ್ಲ. ಪ್ರಮುಖ ವಾಗಿ ಸಮಸ್ಯೆ ಇರುವುದನ್ನು ನೋಡಿಕೊಂಡು ಸೇತುವೆಗಳ ನಿರ್ಮಾಣ, ರಸ್ತೆ ಅಭಿವೃದ್ಧಿಯನ್ನು ಮಾಡುತ್ತ ಬಂದಿದ್ದೇವೆ. ಸೇತುವೆಗಳಲ್ಲಿ ಪ್ರಮುಖವಾದವನ್ನು ಗಮನಿಸಿ ಬಳಿಕ ಉಳಿದವನ್ನು ಮಾಡಬಹುದು. ಸುಳ್ಯ ತಾಲೂಕಿನಲ್ಲಿ ಬಹುತೇಕ ಕಡೆಗಳಲ್ಲಿ ಮುಳುಗು ಸೇತುವೆಗಳೇ ಈ ಹಿಂದೆ ಇದ್ದವು. ಅವುಗಳಲ್ಲಿ ಹೆಚ್ಚಿನವು ಮೇಲ್ದರ್ಜೆಗೇರಿವೆ. ಶೆಟ್ಟಿಕಟ್ಟ ಸೇತುವೆಗೆ ಪ್ರಸ್ತಾವನೆ ಹೋಗಿದೆ. ಬಜೆಟ್‌ ನೋಡಿಕೊಂಡು ರಸ್ತೆ ಇತ್ಯಾದಿ ಕೆಲಸ ಮಾಡಲಾಗುತ್ತದೆ. ಕೊಲ್ಲಮೊಗ್ರುವಿನಲ್ಲಿ ಟವರ್‌ ನಿರ್ಮಿಸಿದ್ದೇವೆ. ಹಂತಹಂತವಾಗಿ ಅಭಿವೃದ್ಧಿ ನಡೆಸುವುದಕ್ಕೆ ಸಾಧ್ಯವೇ ವಿನಾ ಒಂದೇ ಸಲಕ್ಕೆ ಎಲ್ಲವೂ ಅಸಾಧ್ಯ.
– ಎಸ್‌. ಅಂಗಾರ, ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next